50 percentage subsidy : ಮೀನುಗಾರಿಕೆ ಇಲಾಖೆಯ ವತಿಯಿಂದ 2024-25ನೇ ಸಾಲಿಗೆ ಮೀನುಗಾರಿಕೆ ಸಲಕರಣೆ ಕಿಟ್ ಗಳ ಖರೀದಿಗೆ ಸಹಾಯಧನ, ಮೀನು ಮರಿ ಖರೀದಿಗೆ ಸಬ್ಸಿಡಿನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಆಸಕ್ತಿಯುಳ್ಳು ಒಳನಾಡು ಮೀನುಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗಳಾದ (ರಾಜ್ಯ ವಲಯ ಯೋಜನೆ) ಗಳಾದ ಮೀನುಗಾರಿಕೆ ಸಲಕರಣೆ ಕಿಟ್ ಗಳ ಖರೀದಿಗೆ ಸಹಾಯಧನ, ಮೀನುಮರಿ ಖರೀದಿಗೆ ಸಹಾಯಧನ, ಕೆರೆಯ ಅಂಚಿನಲ್ಲಿ ಮೀನುಮರಿ ಪಾಲನಾ ಕೊಳ ನಿರ್ಮಿಸುವುದು, ಶೂನ್ಯ ಬಡ್ಡಿದರದಲ್ಲಿ ಮೀನುಗಾರರ ಮಹಿಳೆಯರಿಗೆ ಸಾಲದ ನೆರವು ಹಾಗೂ ಜಿಲ್ಲಾವಲಯ ಯೋಜನೆಗಳಾದ ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ ಹಾಗೂ ಮತ್ಸ್ಯವಾಹಿನಿ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದು.
50 percentage subsidy ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಆಗಸ್ಟ್ 7 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಕಲಬುರಗಿ ಚಿಂಚೋಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಹಾಗೂ ಮೊಬೈಲ್ ದೂರವಾಣಿ ಸಂಖ್ಯೆ 8861097281, 7259984589 ಗೆ ಸಂಪರ್ಕಿಸಲು ಕೋರಲಾಗಿದೆ.
50 percentage subsidy ಕುರಿ ಆಡು ಸಾಕಾಣಿಕೆಗೆ ಅರ್ಜಿ ಆಹ್ವಾನ
ಕಲಬುರಗಿ ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ ಜುಲೈ 29 ರಿಂದ ಆಗಸ್ಟ್ 7 ರವರೆಗೆ ಹತ್ತು ದಿನಗಳ ಕಾಲ ಉಚಿತವಾಗಿ ಕುರಿ ಮತ್ತು ಆಡು ಸಾಗಾಣಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಎಸ್.ಬಿ.ಐ ಆರ್.ಸೆಟ್ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ : Bele salamanna status ನಿಮ್ಮೂರಿನಲ್ಲಿ ಯಾರು ಯಾರಿಗೆ ಬೆಳೆ ಸಾಲಮನ್ನಾ ಆಗಿದೆ? ಇಲ್ಲೇ ಚೆಕ್ ಮಾಡಿ
ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತಿದೆ. ವಯೋಮಿತಿ 18 ರಿಂದ 45 ವಯೋಮಾನದೊಳಗಿನ ಬಿಪಿಎಲ್ ಅಂತ್ಯೋದಯ ರೇಶನ್ ಎಮ್.ಜಿ.ಎನ್.ಆರ್.ಇ.ಜಿ.ಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಜುಲೈ 27 ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಕಾರ್ಯಾಲಯದ ಸಮಯ ಬೆಳಗ್ಗೆ 9.30 ರಿಂದ 5 ರವರೆಗೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಮತ್ತು ಮೊಬೈಲ್ ನಂಬರ್ 9663678147, 9886781239, 9900135705, 7019939996, 9901098123, 9448994585 ಗೆ ಸಂಪರ್ಕಿಸಲು ಕೋರಲಾಗಿದೆ.
50 percentage subsidy ಕೃಷಿ ಹೊಂಡಗಳ ತಂತಿ ಬೇಲಿಗೆ ಶೇ. 50 ರಷ್ಟುಸಬ್ಸಿಡಿ
ಕೃಷಿ ಹೊಂಡಗಳಿಗೆ ಬಿದ್ದು ಸಾವು ನೋವುಗಳಾಗುತ್ತಿರುವ ಪ್ರಕರಣಗಳನ್ನು ತಡೆಯಲು ಹೊಸದಾಗಿ ನಿರ್ಮಿಸುವ ಹೊಂಡಗಳ ಸುತ್ತ ಸುರಕ್ಷತೆ ದೃಷ್ಟಿಯಿಂದ ತಂತಿ ಬೇಲಿ ಅಳವಡಿಕೆಗೂ ಶೇ. 50 ರಿಂದ 50 ರಷ್ಟು ಸಬ್ಸಿಡಿ ನೀಡಲು ಕ್ರಮ ವಹಿಸಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜಿಪಿ ಸದಸ್ಯ ಕೇಶವಪ್ರಸಾದ ಎಸ್. ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ಅನುಕೂಲವಾಗುವ ಕೃಷಿ ಹೊಂಡ ಯೋಜನೆ ಜಾರಿಗೆ ತರಲಾಗಿತ್ತು. ನಂತರ ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿತ್ತು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಈ ಯೋಜನೆ ಪುನಾರಾಂಭಿಸಲಾಗಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ, ಕೃಷಿ ಇಲಾಖೆಯ ಕಚೇರಿಗಳಿಗೆ ಸಂಪರ್ಕಿಸಲು ಕೋರಲಾಗಿದೆ.