98 crore midterm crop insurance credited: ನಿಮಗೆಷ್ಟು ಜಮೆ ಚೆಕ್ ಮಾಡಿ

Written by Admin

Published on:

Spread the love

98 crore midterm crop insurance credited: ರಾಜ್ಯದ ವಿವಿಧ ಜಿಲ್ಲೆಗಳ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಿದೆ.

ಹಾಗಾಗಿ ರೈತರು ತಮಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಕಲಬುರಗಿ ಜಿಲ್ಲೆಗೆ ಮೊಟ್ಟ ಮೊದಲ ಬಾರಿಗೆ 100 ಕೋಟಿ ರೂಪಾಯಿ ಮಧ್ಯಂತರ ಬೆಳೆ ವಿಮೆ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಸರು, ಉದ್ದು,ಸೋಯಾಬಿನ್ ಸೇರಿದಂತೆ ಒಟ್ಟಾರೆ 98.15 ಕೋಟಿ ರೂಪಾಯಿ ಪರಿಹಾರ199940 ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿರುತ್ತದೆ ಎಂದು ಸಂಸದ ಡಾ. ಉಮೇಶ ಜಾಧವ ಸಭೆಯಲ್ಲಿ ತಿಳಿಸಿದ್ದಾರೆ.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂದುವರೆ ದಿಶಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಇಲಾಖೆ ಸಂಬಂಧಿಸಿದಂತೆ ಮಾಹಿತಿ ರೈತರಿಗೆ ಸಿಗುವಂತೆ ಸೌಲಭ್ಯ ತುರ್ತಾಗಿ ನೀಡಬೇಕು. ಅವರು ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಬೇಕು ಎಂದರು.

mid term crop insurance credited
98 crore midterm crop insurance credited

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸಮದ್ ಪಟೇಲ್ ಮಾತನಾಡಿ, ಈಗಾಗಲೇ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸ್ಥಳೀಯ ವಿಕೋಪದಡಿಯಲ್ಲಿ ದೂರನ್ನು ಸಲ್ಲಿಸಿದ ರೈತರಿಗೆ 47.173 ರೂಪಾಯಿ 4.98 ಕೋಟಿ ಪರಿಹಾರ ರೈತರ ಖಾತೆಗೆ ಜಮೆ ಮಾಡಲಾಗಿದೆ.

ಇದನ್ನೂಓದಿ : Baragala parihara hana bidugade 2023-24 ನಿಮಗೆಷ್ಟು ಜಮೆ? ಚೆಕ್ ಮಾಡಿ

ಬೆಳೆ ಸ್ಥಿರೀಕರಣ ಯೋಜನೆಯಡಿ ತೊಗರಿ ಖರೀದಿ ಕೇಂದ್ರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಬೆಲೆ ಸ್ಥಿರೀಕರಣ ಎಮ್.ಎಸ್.ಪಿ ನಿಧಿ ಯೋಜನೆ ಅಡಿಯಲ್ಲಿ ಮಾರುಕಟ್ಟೆ ದರದಲ್ಲಿ ಕರ್ನಾಟಕ ರಾಜ್ಯದ ಸಹಕಾರ ಮಾರಾಟ ಮಹಾಮಂಡಲಿ ಕಲಬುರಗಿ ಅಡಿಯಲ್ಲಿ 127 ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಅಡಿಯಲ್ಲಿ62 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾವಾರುಗೆ ಹೋಲಿಸಿ ಇದರಲ್ಲಿಯಾವ ದರವು ಹೆಚ್ಚಾಗಿರುತ್ತದೆಯೋ ಆ ದರದಲ್ಲಿ ರೈತರಿಂದ ಖರೀದಿಸಲಾಗುವುದು ಎಂದರು.

ಯಾರದ್ದೇ ಹಸ್ತಕ್ಷೇಪ ಹಾಗೂ ಪ್ರಭಾವಕ್ಕೆ ಒಳಗಾಗದೆ ಪಾರದರ್ಶಕದಿಂದ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಂತೆ ಸಂಸದ ಡಾ. ಉಮೇಶ ಜಾಧವ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಟಸ್ಥವಾಗಿ ಕೆಲಸ ಮಾಡಿದರೆ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಿದ್ದು, ಅವುಗಳ ಕುರಿತಾಗಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಬರಿ ಕಾಗದಲ್ಲೇ ಯೋಜನೆಗಳನ್ನು ಮುಗಿಸಬೇಡಿ. ಕೊನೆ ಹಂತದ ಫಲಾನುಭವಿಗಳಿಗೆ ತಲುಪಿಸಿ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ PM kisan fund released ಸ್ಟೇಟಸ್ -2024 ಚೆಕ್ ಮಾಡಿ

98 crore midterm crop insurance credited: ನಿಮಗೆಷ್ಟು ಜಮೆ ಚೆಕ್ ಮಾಡಿ

ರಾಷ್ಟ್ರೀಯ ಆಹಾರ ಭದ್ರತಾ ಹಾಗೂ ಅನ್ನಭಾಗ್ಯ ಯೋಜನೆಯಡಿ ಮಂಜೂರಾದ ಅನದಾನ 184.70 ಖರ್ಚಾದ ಅನುದಾನ 177.16 ಪ್ರತಿಶತ ಖರ್ಚಾದ ಅನುದಾನ 95.86 ಖರ್ಚಾಗಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಶಾಂತಗೌಡ ಗುಣಕಿ ಸಭೆಯ ಗಮನಕ್ಕೆ ತಂದರು. ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಯಾಗಿದ್ದು, ಫಲಾನುಭವಿಗಳ ಸಂಖ್ಯೆಯ ಮಾಹಿತಿ ನೀಡಿದರು.

98 crore midterm crop insurance credited : ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಮುಂಗಾರು ಹಿಂಗಾರು ಬೆಳೆಗೆ ವಿಮೆ ಮಾಡಿಸಿದ ರೈತರು ತಮಗೆ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಹೌದು, ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. Farmers ಕಾಲಂನಲ್ಲಿ check status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Proposal , Mobile No. Aadhaar ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ನೀವು ಮೊಬೈಲ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಬೇಕಾಗುತ್ತದೆ. ಹಾಗಾಗಿ ನೀವು  Mobile No ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ಮೇಲೆ  ಮೊಬೈಲ್ ನಂಬರ್ ಹಾಕಬೇಕು. ನಂತರ  ಕ್ಯಾಪ್ಚ್ಯಾಕೋಡ್ ಹಾಕಬೇಕು. ಆಗ ತೆರೆದುಕೊಳ್ಳುತ್ತದೆ.

ಒಂದು ವೇಳೆ ನಿಮಗೆ   ಕ್ಯಾಪ್ಚ್ಯಾ ಕೋಡ್ ಸರಿಯಾಗಿ ಕಾಣಿಸದಿದ್ದರೆ ರಿಫ್ರೆಶ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನೀವು ಕ್ಯಾಪ್ಚ್ಯಾ ಕೋಡ್ ತಪ್ಪಾಗಿ ನಮೂದಿಸಿದ್ದರೆ ರಿಫ್ರೆಶ್ ಬಟನ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

98 crore midterm crop insurance credited: ಬೆಳೆ ವಿಮೆ ಸ್ಟೇಟಸ್ ಪೇಜ್ ನಲ್ಲಿ ಏನೇನು ಮಾಹಿತಿ ಇರುತ್ತದೆ?

ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯ ಸ್ಟೇಟಸ್ ಕಾಣಿಸುತ್ತದೆ  ಅರ್ಜಿ ಬೆಳೆ ನೋಂದಣಿಯು ಪ್ರಗತಿಯಲ್ಲಿದೆಯೇ? ಅರ್ಜಿಯನ್ನುತೆಗೆದುಹಾಕಲಾಗಿದೆಯೇ ಅಥವಾ ಅಥವಾ ಸ್ವೀಕೃತವಾಗಿದೆಯೋ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದುಗಡೆ ಕಾಣಿಸುವ ಸೆಲೆಕ್ಟ್  ಮೇಲೆ ಕ್ಲಿಕ್ ಮಾಡಬೇಕು.  ನಂತರ View Details ಮೇಲೆ ಕ್ಲಿಕ್ ಮಾಡಿದರೆ ನೀವು ಯಾವಾಗ ಬೆಳೆ ವಿಮೆ ಪಾವತಿಸಿದ್ದೀರಿ? ನಿಮಗೆ ಬೆಳೆ ವಿಮೆ ಜಮೆಯಾಗಿದ್ದರೆ ಯಾವ ಬೆಳೆಗೆ ಎಷ್ಟು ಹಣ ಜಮೆಯಾಗಿದೆ. ಎಷ್ಟು ಎಕರೆಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

Leave a Comment