www.cropInsurancenews.com ಆನ್ಲೈನ್ ವೆಬ್ಸೈಟ್ ನಲ್ಲಿ ರೈತರಿಗೆ ಬೆಳೆ ವಿಮೆಗೆ ಸಂಬಂಸಿದ ಎಲ್ಲಾ ಮಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ಲಭಿಸಲಿದೆ. ಹೌದು, ರೈತರು ಬೆಳೆ ವಿಮೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಕೇಳಲು ಈಗ ಕಚೇರಿಗಳಿಗೆ ಅಲೆದಾಡಬೇಕಿಲ್ಲ, ಯಾರಿಗೂ ಕರೆ ಮಾಡಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಬೆಳೆ ವಿಮಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವುದಕ್ಕಾಗಿ www.cropInsurancenews.com ಆನ್ಲೈನ್ ವೆಬ್ಸೈಟ್ ಆರಂಭಿಸಲಾಗಿದೆ. ಇಲ್ಲಿ ನುರಿತ ಕೃಷಿ ತಜ್ಞರು, ಕೃಷಿ ಅಧಿಕಾರಿಗಳು, ಕೃಷಿ ಸಚಿವರು, ಪ್ರಗತಿಪರ ರೈತರು ನೀಡುವ ಪಾರದರ್ಶಕ ಮಾಹಿತಿಗಳನ್ನು ನೀಡಲಾಗುವುದು. ಅನುಭವಸ್ಥ ಕೃಷಿ ಪದವೀಧರರು ಬರೆದ ರೈತೋಪಯೋಗಿ ಲೇಖನಗಳನ್ನುಸಹ ಇಲ್ಲಿ ಪ್ರಕಟಿಸಲಾಗುವುದು.
ಕೃಷಿಗೆ ಸಂಬಂಸಿಧ ಸರ್ಕಾರಿ ಯೋಜನೆಗಳು, ಜಮೀನು ಉಳುಮೆಯಿಂದ ಬೆಳೆ ಕಟಾವುವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳ ಲೇಖನಗಳು, ಪ್ರಗತಿಪರ ರೈತರ ಯಶೋಗಾಥೆಗಳು, ರೈತರು ಕಂಡು ಹಿಡಿದು ಕೃಷಿ ಯಂತ್ರೋಪಕರಗಳ ಮಾಹಿತಿಗಳನ್ನು ರೈತರಿಗೆ ನೀಡಲಾಗುವುದು. ಪ್ರಗತಿಪರ ರೈತರನ್ನು ಗುರುತಿಸಿ ಅವರಿಗೆ ಮುಖ್ಯವಾಹಿನಿಗೆ ತರುವ ಅಳಿಲು ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.