What is Crop Insurance? ಬೆಳೆ ವಿಮೆ ಎಂದರೇನು? ಇಲ್ಲಿದೆ ಮಾಹಿತಿ – 2024

Written by Admin

Updated on:

Spread the love

What is Crop Insurance ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಮಾಡುವ ಬೆಳೆ ವಿಮೆ ಎಂದರೇನು (what is crop insurance)? ಬೆಳೆ ವಿಮೆ ಹೇಗೆ ಕೆಲಸ ಮಾಡುತ್ತದೆ? Crop insurance ಮಾಡಿಸುವುದರಿಂದ ರೈತರಿಗಾಗುವ ಪ್ರಯೋಜನೆಗಳೇನು? ಬೆಳೆ ಹಾನಿಯಾದಾಗ ರೈತರೇನು ಮಾಡಬೇಕು? ಯಾರಿಗೆ ಸಂಪರ್ಕಿಸಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

What is Crop insurance (ಬೆಳೆ ವಿಮೆ ಎಂದರೇನು)

ಪ್ರಕೃತಿ ವಿಕೋಪದಿಂದಾಗಿ ಅಂದರೆ ಆಲಿಕಲ್ಲು ಮಳೆ (Hailstorm), ಭೂ ಕುಸಿತು (Land Slide), ಬೆಳೆ ಮುಳುಗಡೆ (Inundation), ಮೇಘ ಸ್ಪೋಟ (cloud Burst) ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡ (Natural fire due to Lightning) ಸಂದರ್ಭದಲ್ಲಿ ಬೆಳೆ ಹಾನಿಯಾದರೆ ರೈತರಿಗೆ ಪರಿಹಾರ ನೀಡುವುದೇ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ.

ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟ ಉಂಟಾದರೆ ವೈಯಕ್ತಿಕ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಈ ಯೋಜನೆಯಡಿಯಲ್ಲಿ ಅವಕಾಶ ನೀಡಲಾಗಿದೆ.

What is Crop Insurance
What is Crop insurance? Detail information is here

ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದಾಗ ರೈತರೇನು ಮಾಡಬೇಕು?

ಪ್ರಕೃತಿ ವಿಕೋಪದಿಂದಾಗಿ ಒಂದು ವೇಳೆ ಅಧಿಸೂಚಿತ ಘಟಕದಲ್ಲಿ ಶೇಕಡಾ 25ಕ್ಕಿಂತ  ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ. ಇಂತಹ ಸ್ಥಳೀಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು.

ಬಿತ್ತನೆ ವಿಫಲಗೊಂಡಲ್ಲಿ ಬೆಳೆ ವಿಮೆ ಹೇಗೆ ನಿರ್ಧರಿಸಲಾಗುವುದು?

ಮುಂಗಾರು ಹಿಂಗಾರು ಹಂಗಾಮನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇಕಡಾ 75ಕ್ಕಿಂ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ (Prevented Sowing/ Planting Risk) ವಿಮಾ ಮೊತ್ತದ ಗರಿಷ್ಠ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸಬಹುದು.

ಯಾವ ಬೆಳೆಗೆ ಎಷ್ಟು ವಿಮೆ ನಿಗದಿ ಮಾಡಲಾಗಿದೆ? (How much is insured for which crop)

ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಇಂಡೆಮ್ನಿಟಿ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ. 90 ರಷ್ಟು ಹಾಗೂ ಮಳೆಯಾಶ್ರಿತ ಬೆಳೆಗಳಿಗೆ ಶೇ. 90 ರಷ್ಟು ನಿಗದಿಪಡಿಸಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಪ್ರಮಾಣದ (Scale of Finance) ಆಧಾರದ ಮೇಲೆ ನಿರ್ಧರಿಸಲಾಗುವುದು.

ಪ್ರವಾಹದಿಂದ ಬೆಳೆ ಮುಳುಗಡೆಯಾದರೆ ವಿಮೆ ಹೇಗೆ ನಿರ್ಧರಿಸಲಾಗುವುದು? (How to calculate crop Insurance)

ಹವಾಮಾನ ವೈಪರೀತ್ಯಗಳಾದ ಹೆಚ್ಚಿನ ಮಳೆ, ನೆರೆ ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ ತೀವ್ರ ಬರಗಾಲ ಮುಂತಾದವುಗಳಿಂದ ಯಾವುದೇ ಅಧಿಸೂಚಿತ ಘಟಕದಲ್ಲಿ ಬಿತ್ತನೆಯಾದ  ನಂತರ ಕಟಾವಿಗೆ ಮೊದಲು ನಿರೀಕ್ಷಿತ ಇಳುವರಿಯು ಪ್ರಾರಂಭಿಕ ಇಳುವರಿಯ ಶೇಕಡಾ 50ಕ್ಕಿಂತ ಕಡಿಮೆ ಇದ್ದರೆ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಲೆ ವಿಮಾ ನಷ್ಟ ಪರಿಹಾರದಲ್ಲಿಶೇಕಡಾ 25 ರಷ್ಟು ಹಣವನ್ನು ಮುಂಚಿತವಾಗಿ ವಿಮೆ ಸಂಸ್ಥೆಗಳು ನೀಡುವುದು. ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಮಾಹಿತಿ ಬಂದ ನಂತರ ಅಂತಿಮ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ಹೊಂದಾಣಿಕೆ ಮಾಡಬಹುದಾಗಿದೆ.

ಯಾವ ಯಾವ ರೈತರಿಗೆ ಬೆಳೆ ವಿಮೆ ಯೋಜನೆಯಡಿ ಒಳಪಡಿಸಲಾಗುವುದು?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು. ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೇ ಇದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈ ಬಿಡಲಾಗುವುದು.

ವಿವಿಧ ಘಟಕಗಳಲ್ಲಿ ಅಧಿಸೂಚಿಸಿದ ಬೆಳೆಗಳಿಗೆ ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ, ಪಾಸ್ ಪುಸ್ತಕ ಅಥವಾ ಕಂದಾಯ ರಸೀದಿಯನ್ನು ನೀಡಬೇಕು.

ಬೆಳೆ ವಿಮೆ ಸ್ಟೇಟಸ್ (Crop Insurance status) ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬೇಕಾದರೆ ರೈತರು

ಈ ಕೆಳಗೆ ಕಾಣುವ ಲಿಂಕ್

What is Crop Insurance? ಬೆಳೆ ವಿಮೆ ಎಂದರೇನು? ಇಲ್ಲಿದೆ ಮಾಹಿತಿ - 2024

https://samrakshane.karnataka.gov.in/publichome.aspx

ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ Farmers  ಕಾಲಂ ಕೆಳಗಡೆ  check status ಎಂಬ ಮಾಹಿತಿ ಕಾಣಿಸುತ್ತದೆ.  ನಿಮಗೆ Proposal, Mobile No. Aadhaar ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು Mobile No ಮೇಲೆ ಕ್ಲಿಕ್ ಮಾಡಿ  ನಿಮ್ಮ  ಮೊಬೈಲ್ ನಂಬರ್ ಹಾಕಬೇಕಾಗುತ್ತದೆ. ನಂತರ ಕ್ಯಾಪ್ಚ್ಯಾಕೋಡ್ ಹಾಕಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನೀವು ಕ್ಯಾಪ್ಚ್ಯಾ ಕೋಡ್ ಸರಿಯಾಗಿ ನಮೂದಿಸಿದರೆ ಮಾತ್ರ ನಿಮಗೆ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ಪ್ರೊಪೋಸಲ್ ಸಂಖ್ಯೆ, ಮೊಬೈಲ್ ನಂಬರ್ ಕೊನೆಯ ಮೂರು ಅಂಕಿಗಳು, ನಿಮ್ಮ ಹೆಸರು ಕಾಣಿಸುತ್ತದೆ. ಅದರ ಮುಂದೆ ಸ್ಟೇಟಸ್ ಅಂದರೆ ನಿಮ್ಮ ಅರ್ಜಿಯ ಸ್ಟೇಟಸ್ ಕಾಣಿಸುತ್ತದೆ  ಅರ್ಜಿ ಬೆಳೆ ನೋಂದಣಿಯು ಪ್ರಗತಿಯಲ್ಲಿದೆಯೇ? ಅರ್ಜಿಯನ್ನುತೆಗೆದುಹಾಕಲಾಗಿದೆಯೇ ಅಥವಾ ಅಥವಾ ಸ್ವೀಕೃತವಾಗಿದೆಯೋ ಎಬುದು ಕಾಣಿಸುತ್ತದೆ. ನೀವು ಎಲ್ಲಿ ಬೆಳೆ ವಿಮೆ ಹಣ ಪಾವತಿಸಿದ್ದೀರಿ ಅದು ಪೇಮೆಂಟ್ ಸಕ್ಸೆಸ್ ಫುಲ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದುಗಡೆ ಕಾಣಿಸುವ ಸೆಲೆಕ್ಟ್  ಮೇಲೆ ಕ್ಲಿಕ್ ಮಾಡಬೇಕು.  ನಂತರ View Details ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಹೆಸರು, ವಿಳಾಸ ಹೋಬಳಿ, ಊರು, ಸರ್ವೆ ನಂಬರ್, ಯಾವ ಬೆಳೆಗೆ ವಿಮೆ ಮಾಡಿಸಿದ್ದೀರಿ ನೀವು ಎಷ್ಟು ಬೆಳೆ ವಿಮೆ ಹಣ ಪಾವತಿಸಿದ್ದೀರಿ? ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿಯೂ ಕಾಣಿಸುತ್ತದೆ. ಬಿತ್ತನೆ ಮಾಡಿದ ದಿನಾಂಕ ಎಂಬ ಮಾಹಿತಿಯೂ ನಿಮಗೆ ಕಾಣಿಸುತ್ತದೆ. ಈ ಆಧಾರದ ಮೇಲೆನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಚೆಕ್ ಮಾಡಬಹುದು.

ಬೆಳೆ ಸಾಲ ಪಡೆಯದ ರೈತರು ಯಾವಾಗ ಯೋಜನೆಗೆ ಸೇರಬಹುದು?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ಸಾಲ ಪಡೆಯದ ರೈತರು ಅಂದಾಜು ಉಪೇಕ್ಷಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಪಾಲ್ಗೊಳ್ಳಬಹುದು. ಬೆಳೆ ವಿಮೆಗೆ ನೋಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದ್ದಲ್ಲಿ ಯೋಜನೆಯಲ್ಲಿ ಭಾಗವಹಿಸಲು ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ಅವಧಿಯೊಳಗೆ ನೋಂದಾಯಿತ ಆರ್ಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು. ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನುರೈತರು ಭರಿಸಬೇಕು. ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನುರೈತರು ಭರಿಸಬೇಕು. ಅಥವಾ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸಬೇಕು. ಅಥವಾ ಹೆಚ್ಚುವರಿ ವಿಮಾ ಕಂತನ್ನು ರೈತರಿಗೆ ಮರು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ :  Crop Insurance Status 2023-24 ಮೊಬೈಲ್ ನಲ್ಲೇ ಚೆಕ್ ಮಾಡಿ

ಬೆಳೆ ಸಾಲ ಪಡೆಯದ ರೈತರನ್ನು ತಮ್ಮ ಅಧಿಕೃತ ಎಜೆಂಟರ ಮೂಲಕವೂ ಸಹ ಯೋಜನೆಯಡಿ ನೋಂದಾಯಿಸಲು ಅನುಮತಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು  ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಥವಾ ತಮ್ಮಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದು.

Leave a Comment