Crop Insurance Calculate: ಯಾವ ಬೆಳೆಗೆ ಎಷ್ಟು ವಿಮೆ ಜಮೆ 2024 ಇಲ್ಲೇ ಚೆಕ್ ಮಾಡಿ

Written by Admin

Updated on:

Spread the love

Crop Insurance calculate ಯಾವ ಬೆಳೆಗೆ ಎಷ್ಟು  ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನು ರೈತರು ಈಗ ತಮ್ಮ ಬಳಿಯಿರುವ ಮೊಬಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಬಹುತೇಕ ರೈತರು ಬೆಳೆ ವಿಮೆ ಮಾಡಿಸುತ್ತಾರೆ? ಆದರೆ ಯವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? (How to Calculate Crop Insurance compensation) ಹೇಗೆ ಲೆಕ್ಕ ಮಾಡುತ್ತಾರೆ? ರೈತರೆಷ್ಟು ಬೆಳೆ ವಿಮೆ ಹಣ ಪಾವತಿಸಬೇಕು? ಬೆಳೆ ಹಾನಿಯಾದಾಗ ರೈತರಿಗೆ ಯಾವ ಆಧಾರದ ಮೇಲೆ ಎಷ್ಟು ವಿಮೆ ಹಣ ಜಮೆ ಮಾಡಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರತಿ ವರ್ಷ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗಳಿಗೆ  ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗುವುದು. ಆಗ ರೈತರು ಆಯಾ ತಾಲೂಕಿಗೆ ನಿಗದಿ ಮಾಡಲಾದ ಬೆಳೆಗಳಿಗೆ ವಿಮೆ ಮಾಡಿಸುತ್ತಾರೆ. ಆದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಪಾವತಿಸಬೇಕು ಹಾಗೂ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಗೊತ್ತಿರುವುದಿಲ್ಲ.

ಬೆಳೆ ವಿಮೆ ಜಮೆ ಆಗುವಾಗ ಪಕ್ಕದ ರೈತರಿಗೆ ಇಷ್ಟು ಹಣ ಜಮೆಯಾಯಿತು. ಆದರೆ ನನಗೆ ಅವರಷ್ಟು ಬೆಳೆ ವಿಮೆ ಹಣ ಜಮೆಯಾಗಿಲ್ಲ ಎಂಬುದು ಆಗಾಗ ಕೇಳಿ ಬರುವ ಪ್ರಶ್ನೆಯಾಗಿದೆ. ಹಾಗಾಗಿ ರೈತರಿಗೆ ಎಲ್ಲಿಯೂ ಸಂಶಯ ಬರದ ಹಾಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

Crop Insurance Calculate
Crop Insurance compensation calculation in mobile

ನೀವು ಯಾವ ಜಿಲ್ಲೆಯಲ್ಲಿದ್ದೀರೋ ಆ ಜಿಲ್ಲೆಗೆ ಕೆಲವು ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿರುತ್ತದೆ. ಆದರೆ ಅದೇ ಬೆಳೆಗೆ ವಿಮೆ ಮಾಡಿಸಲು ಇನ್ನೊಂದು ಜಿಲ್ಲೆಗೆ ವಿಮೆ ಮಾಡಿಸುವ ಸೌಲಭ್ಯ ಇರಲಿಕ್ಕಿಲ್ಲ. ಏಕೆಂದರೆ ಆಯಾ ಪ್ರದೇಶವಾರು ಹೆಚ್ಚು ಬೆಳೆಯುವ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಬೆಳೆ ವಿಮೆ ಮಾಡಿಸಲು ಭಿನ್ನವಾಗಿರುತ್ತದೆ.

ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? (Crop Insurance Calculate Compensation) ಇಲ್ಲೇ ಮಾಡಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರು ವಿಮೆ ಮಾಡಿಸುವಾಗ ಹಾಗೂ ವಿಮೆ ಮಾಡಿಸಿದ ನಂತರ ಎಷ್ಟು ವಿಮೆ ಹಣ ಜಮೆಯಾಗುವ ಸಾಧ್ಯತೆಯಿದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷ ಅಂದರೆ ಯಾವ ವರ್ಷ ಬೆಳೆವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ನೀವು ಕಳೆದ ವರ್ಷ ನಿಮಗೆಷ್ಟು ಬೆಳೆ ವಿಮೆ ಜಮೆಯಾಗಬೇಕಿತ್ತು ಅಥವಾ ಎಷ್ಟು ಜಮೆಯಾಗಲಿದೆ ಎಂಬುದನ್ನು ಸಹ ಚೆಕ್ ಮಾಡಬಹುದು. ಆದರೆ ಇಲ್ಲಿ ನೀವು ವರ್ಷ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನೀವು ಮುಂಗಾರು ಬೆಳೆ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅಥವಾ ಹಿಂಗಾರು ಬಳೆ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಎಂಬುದನ್ನು ಆಯ್ಕೆಮಾಡಿಕೊಳ್ಳಬೇಕು.

ಉದಾಹರಣೆಗೆ ನೀವು 2023-24ನೇ ಸಾಲಿನಲ್ಲಿ ಮುಂಗಾರು ಬೆಳೆಗಳಲ್ಲಿಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನು ಚೆಕ್ ಮಾಡಬೇಕೆಂದುಕೊಂಡಿದ್ದೀರಿ ಅಂದುಕೊಳ್ಳೋಣ.

ಮುಂಗಾರು ಬೆಳೆ ವಿಮೆ ಕ್ಯಾಲ್ಕುಲೇಟ್ (Crop Insurance Calculate) ಮಾಡುವುದೇ ಹೇಗೆ?

Crop Insurance Calculate: ಯಾವ ಬೆಳೆಗೆ ಎಷ್ಟು ವಿಮೆ ಜಮೆ 2024 ಇಲ್ಲೇ ಚೆಕ್ ಮಾಡಿ

ವರ್ಷದ ಆಯ್ಕೆಯಲ್ಲಿ 2023-24, ಋತು ಆಯ್ಕೆಯಲ್ಲಿ Khariff ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ / ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುವುದು. ಅಲ್ಲಿ Farmers ಕೆಳಗಡೆ ನಿಮಗೆ Premium Calculator ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುವುದು. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ Crop Insurance Status 2023-24 ಮೊಬೈಲ್ ನಲ್ಲೇ ಚೆಕ್ ಮಾಡಿ

ಯಾವ ಬೆಳೆಗೆ ಎಷ್ಟು ಎಕರೆಗೆ ಬೆಳೆ ವಿಮೆ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಎಷ್ಟು ಎಕರೆಗೆ ಬೆಳೆವಿಮೆ ಮಾಡಿಸಿದ್ದೀರೋ ಅದನ್ನು ಆಯ್ಕೆ ಮಾಡಿಕೊಂಡು Show Premium ಮೇಲೆ ಕ್ಲಿಕ್ ಮಾಡಬೇಕು.

Crop Insurance Calculate: ಯಾವ ಬೆಳೆಗೆ ಎಷ್ಟು ವಿಮೆ ಜಮೆ 2024 ಇಲ್ಲೇ ಚೆಕ್ ಮಾಡಿ

ಆಗ  ನೀವು ನಮೂದಿಸಿದ ಎಕರೆ, ಒಟ್ಟು ಎಷ್ಟು ಬೆಳೆ ವಿಮೆ ಪರಿಹಾರ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ. ಇದರೊಂದಿಗೆ ರಾಜ್ಯ, ಕೇಂದ್ರ ಹಾಗೂ ನಿಮ್ಮ ಪಾವತಿಸಿದ ಒಟ್ಟು ಬೆಳೆ ವಿಮೆ ಹಣ ಕಾಣಸುತ್ತದೆ. ಅದರ ಮುಂದುಗಡೆ ನೀವೆಷ್ಟು ಹಣ ಪಾವತಿಸಿದ್ದೀರಿ ಎಂಬ ಮಾಹಿತಿಯೂ ಕಾಣಿಸುತ್ತದೆ.

ನೀವೆಷ್ಟು ಬೆಳೆ ವಿಮೆ ಪಾವತಿಸಿದರೆ ಎಷ್ಟು ಹಣ ಜಮೆಯಾಗಲಿದೆ?

ಉದಾಹರಣೆಗೆನೀವು ಒಂದು ಎಕರೆಗೆ ತೊಗರಿ ಬೆಳೆ ವಿಮೆ ಮಾಡಿಸಿದ್ದೀರೆಂದುಕೊಳ್ಳೋಣ. ಪ್ರಾಕೃತಿಕ ವಿಕೋಪದಿಂದಾಗಿ ನಿಮ್ಮ ಬೆಳೆ ಹಾನಿಯಾದರೆ ನಿಮಗೆ ಸುಮಾರು 19 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ. ಇದರಲ್ಲಿ ಕೇಂದ್ರ, ರಾಜ್ಯಹಾಗೂ ನಿಮ್ಮ ಪಾಲಿನ ಒಟ್ಟು ವಿಮೆ ಪಾವತಿಸಿದ ಹಣ 3694 ರೂಪಾಯಿ, ನೀವು ಪಾವತಿಸಿದ್ದು388 ರೂಪಾಯಿ, ಕೇಂದ್ರ ಸರ್ಕಾರ ಪಾವತಿಸಿದ್ದು 1653 ರೂಪಾಯಿ ಹಾಗೂ ರಾಜ್ಯ ಸರ್ಕಾರ ಪಾವತಿಸಿದ್ದು 1653 ರೂಪಾಯಿ. ಹೀಗೆ ಒಟ್ಟು 3694 ರೂಪಾಯಿ ಬೆಳೆ ವಿಮೆ ಹಣ ಪಾವತಿಯಾಗಿರುತ್ತದೆ.

Crop Insurance Calculate: ಯಾವ ಬೆಳೆಗೆ ಎಷ್ಟು ವಿಮೆ ಜಮೆ 2024 ಇಲ್ಲೇ ಚೆಕ್ ಮಾಡಿ

ಬೆಳೆ ವಿಮೆ ಹಣ ಯಾವಾಗ ಜಮೆಯಾಗಲಿದೆ?

ರೈತರು ಬೆಳೆ ವಿಮೆ ಮಾಡಿಸಿದರಷ್ಟೇ ಸಾಲದು, ಪ್ರಾಕೃತಿಕ ವಿಕೋಪಗಳಾದಆಲಿಕಲ್ಲು ಮಳೆ (Hailstorm), ಭೂ ಕುಸಿತು (Land Slide), ಬೆಳೆ ಮುಳುಗಡೆ (Inundation), ಮೇಘ ಸ್ಪೋಟ (cloud Burst( ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡ (Natural fire due to Lightning) ಸಂದರ್ಭದಲ್ಲಿ ನಿಮ್ಮ ಬೆಳೆ ಹಾನಿಯದಾರೆ ರೈತರು 72 ಗಂಟೆಯೊಳಗೆ ವಿಮೆ ಕಂಪನಿಗೆ ದೂರು ನೀಡಬೇಕಾಗುತ್ತದೆ. ಆಗ ವಿಮೆ ಕಂಪನಿಯ ಸಿಬ್ಬಂದಿಗಳು ನಿಮ್ಮಜಮೀನಿಗೆ ಬಂದು ಬೆಳೆ ಹಾನಿಯಾಗಿರುವ ಬಗ್ಗೆ ಪರಿಶೀಲನೆ ನಡೆಸುತ್ತಾರೆ.

ಇದನ್ನೂ ಓದಿ What is Crop Insurance? ಬೆಳೆ ವಿಮೆ ಎಂದರೇನು? ರೈತರಿಗಾಗುವ ಪ್ರಯೋಜನದ ಮಾಹಿತಿ – 2024

ಯಾವ ಪ್ರಮಾಣದಲ್ಲಿಬೆಳೆ ಹಾನಿಯಾಗಿದೆ ಎಂಬುದನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ಬೆಳೆ ಹಾನಿ ಪರಿಹಾರಕ್ಕಾಗಿ ವರದಿ ಸಲ್ಲಿಸುತ್ತಾರೆ. ನಂತರ ನಿಮಗೆ ಬೆಳೆ ವಿಮೆ ಪರಿಹಾರ ಹಣ ಜಮೆಯಾಗುವ ಸಾಧ್ಯತೆಯಿದೆ.

ಬಿತ್ತನೆ ವಿಫಲಗೊಂಡಲ್ಲಿ ಹೇಗೆ ಬೆಳೆ ವಿಮೆ ಪಾವತಿಸಲಾಗುವುದು?

ಮುಂಗಾರು ಹಿಂಗಾರು ಹಂಗಾಮನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಬಿತ್ತನೆ ಸಂದರ್ಭದಲ್ಲಿ ಬೆಳೆ ಹಾನಿಯಾದರೆ ಅಂದರೆ ಶೇಕಡಾ 75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ನೀಡುವುದು. ಇದಕ್ಕಾಗಿಯೂ ರೈತರು ದೂರು ನೀಡಬೇಕಾಗುತ್ತದೆ.  ಆಗಲೂ ವಿಮಾ ಸಿಬ್ಬಂದಿಗಳು ಜಮೀನಿಗೆ ಬಂದು ಪರಿಶೀಲನೆ ಮಾಡಿ ವಿಮೆ ಪರಿಹಾರಕ್ಕೆ ಸೂಚಿಸುತ್ತಾರೆ.

ಯಾವ  ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿ ನಿಯೋಜಿಸಲಾಗಿದೆ ? ಇಲ್ಲೇಚೆಕ್ ಮಾಡಿ

ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಸಹ ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ವಿಮಾ ಕಂಪನಿಗಳ ಮಾಹಿತಿ ಸಿಗುತ್ತದೆ. ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ಫಾರ್ಮರ್ಸ್  ಕೆಳಗಡೆ Know Your Insurance co.  ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಪಟ್ಟಿ ನಿಮಗೆ ಕಾಣಿಸುತ್ತದೆ. ಈ ಆಧಾರದ ಮೇಲೆ ನೀವು ವಿಮಾ ಕಂಪನಿಯನ್ನು ತಿಳಿದುಕೊಳ್ಳಬಹುದು. ಏಕೆಂದರೆ ಬಹುತೇಕ ರೈತರಿಗೆ ಯಾವ ವಿಮಾ ಕಂಪನಿಗೆ ಹಣ ಬೆಳೆ ವಿಮೆ ಮಾಡಿಸಿದ್ದಾರೆ ಎಂಬುದೇ ಗೊತ್ತಿರುವುದಿಲ್ಲ.

ಯಾವ್ಯಾವ ವಿಮಾ ಕಂಪನಿಗೆ (crop Insurance company) ಯಾವುದು ಉಚಿತ ಸಹಾಯವಾಣಿಯಿದೆ?

ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯ ಉಚಿತ ಸಹಾಯವಾಣಿ 1800 425 0505 ಇದೆ. ಯುನಿವರ್ಸಲ್ ಸ್ಯಾಂಪೋ ಉಚಿತ ಸಹಾಯವಾಣಿ 1800 200 5142, ಎಸ್.ಬಿ.ಐ ಉಚಿತ ಸಹಾಯವಾಣಿ 1800 180 1551, ಹೆಚ್.ಡಿ.ಎಫ್.ಸಿ ಅರ್ಗೋ ಉಚಿತ ಸಹಾಯವಾಣಿ 1800 266 0700 ಅದೇ ರೀತಿ ಫೂಚರ್ ಜನರಲ್ ಇನ್ಸುರೆನ್ ಉಚಿತ ಸಹಾಯವಾಣಿ 1800 266 4141 ಆಗಿದೆ. ಐಸಿಐಸಿ ಲ್ಯಾಂಬೋರ್ಡ್ ಉಚಿತ ಸಹಾಯವಾಣಿ 1800103 7712 ಆಗಿದೆ. ಬಜಾಜ್ ಅಲಾಯನ್ಸ್ ಗೆ 1800 209 5959 ಉಚಿತ ಸಹಾಯವಾಣಿಯಾಗಿದೆ.

Leave a Comment