1400 crore crop insurance released ಬೆಳೆ ವಿಮೆ ಬಿಡುಗಡೆ- ಇಲ್ಲೇ ಚೆಕ್ ಮಾಡಿ

Written by Admin

Published on:

Spread the love

1400 crore crop insurance released : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಬಿಡುಗಡೆಯಾಗಿದೆ. ಅದೇನೆಂದರೆ ಯಾರು 2022-23 ಹಾಗೂ 2023-24ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ್ದಾರೋ ಅಂತಹ ರೈತರಿಗೆ ಸಂತಸದ ಸುದ್ದಿ ಇದಾಗಿದೆ.

1400 crore crop insurance released 1400 ಕೋಟಿ ಬೆಳೆ ವಿಮೆ ಬಿಡುಗಡೆ

ಇದೇ ತಿಂಗಳ ಮಾರ್ಚ್ ತಿಂಗಳ ಅಂತ್ಯದ ವೇಳೆಗೆ 13 ಲಕ್ಷ ರೈತರಿಗೆ1400 ಕೋಟಿ ರೂಪಾಯಿ ಮೊತ್ತವನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಕೃ ಬೆಳೆ ವಿಮೆ ಹಣ ಬಿಡುಗಡೆ ಚೆಲವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.

1400 crore crop insurance released

ಹೌದು, ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ ಮಾಡಲಾಗಿದೆ. ಯಾವ ಯಾವ ಬೆಳೆಗಳಿಗೆ ವಿಮೆ ಹಣ ಬಿಡುಗಡೆಯಾಗಿದೆ? ರೈತರು ತಮಗೆ ಬೆಳೆ ವಿಮೆ ಹಣ ಜಮೆಯಾಗಿದ್ದನ್ನು ಹೇಗೆ ಚೆಕ್ ಮಾಡಬೇಕು ಎಂಬುದರ ಮಾಹಿತಿ ನಿಮಗಾಗಿ ಇಲ್ಲಿ ನೀಡಲಾಗಿದೆ.

ಹೌದು, ರೈತ ಬಾಂಧವರೇ, ನೀವು ಬೆಳೆ ವಿಮೆ ಹಣ ಪಾವತಿಸಿದ್ದಾರೆ ನಿಮಗೆ ಈಗ ಸಂತಸದ ಸುದ್ದಿ ಇಲ್ಲಿ ನೀಡಲಾಗಿದೆ. ನೀವು 2022-23ನೇ ಸಾಲಿಗಾಗಿ ಮುಂಗಾರು ಹಂಗಾಮಿಗೆ ಅಂದರೆ ತೊಗರಿ, ಉದ್ದು, ಹೆಸರು, ಮುಸುಕಿನ ಜೋಳ, ಶೇಂಗಾ (ನೆಲಗಡಲೆ), ಹತ್ತಿ, ಸೋಯಾ ಸೇರಿದಂತೆ ಇತರ ಬೆಳೆಗಳಿಗೆ ವಿಮೆ ಮಾಡಿಸಿದ್ದರೆ ನೀವು ನಿಮ್ಮ ಸ್ಟೇಟಸ್ ಚೆಕ್ ಮಾಡಬಹುದು.

ಬೆಳೆ ವಿಮೆ ಸ್ಟೇಟಸ್ ಎಲ್ಲಿ ಚೆಕ್ ಮಾಡಬೇಕು?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಪಾವತಿಸಿದ ರೈತರು ತಮ್ಮ ಖಾತೆಗೆ ವಿಮೆ ಹಣ ಜಮೆಯಾಗಿರುವುದನ್ನು ಚೆಕ್ ಮಾಡಲು ಈಗ ಬ್ಯಾಂಕಿಗೆ ಹೋಗಬೇಕಿಲ್ಲ. ಅಲ್ಲಿ ಬ್ಯಾಂಕ್ ಸಿಬ್ಬಂದಿಗಳ ಬಳಿ ಹೋಗಿ ನಿಮಗೆ ವಿಮೆ ಹಣ ಜಮೆಯಾಗಿರುವ ಕುರಿತು ವಿಚಾರಿಸುವ ಅಗತ್ಯವೂ ಇಲ್ಲ, ನಿಮ್ಮಲ್ಲಿರುವ ಮೊಬೈಲ್ ನಲ್ಲೇ ನಿಮಗೆ ಹಣ ಜಮೆ ಆಗಿದ್ದನ್ನು ಚೆಕ್ ಮಾಡಬಹುದು.

2022-23ನೇ ಮುಂಗಾರು ಹಂಗಾಮಿನ ಬೆಳೆ ವಿಮೆ ಹಣ ಜಮೆಯಾಗಿದ್ದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಸಂರಕ್ಷಣೆ ಬೆಳೆ ವಿಮೆ ಚೆಕ್ ಮಾಡುವ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ವರ್ಷದ ಆಯ್ಕೆ  / Select Insurance Year 2022-23 ಆಯ್ಕೆ ಮಾಡಿಕೊಳ್ಳಬೇಕು.

crop insurance status

ಋತು ಆಯ್ಕೆ / Select Insurance Season  ನಲ್ಲಿ Kharif  ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆಯ ಇನ್ನೊಂದು ಪೇಜ್ ಕಾಣಿಸುತ್ತದೆ.

ಇದನ್ನೂ ಓದಿBaragala parihara status 2024 ನಿಮಗೆಷ್ಟು ಜಮೆ? ಇಲ್ಲೇ ಚೆಕ್ ಮಾಡಿ

Farmers ಕೆಳಗಡೆ check status ಕಾಣಿಸುತ್ತದೆ ನೀವು check status ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು Mobile No. ಆಯ್ಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಅಲ್ಲಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದನ್ನು ನೋಡಬಹುದು. ಅದೇ ರೀತಿ ನಿಮಗೆ ಎಷ್ಟು ಹಣ ಜಮಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

1400 crore crop insurance released ನಿಮಗೆ ವಿಮೆ ಹಣ ಜಮೆಯಾಗಿಲ್ಲವಾದರೆ ಏನು ಮಾಡಬೇಕು?

ನಿಮಗೆ ಬೆಳೆ ವಿಮೆ ಹಣ ಜಮೆಯಾಗದಿದ್ದರೆ ಅಲ್ಲಿ ಕಾಣುವ Select ಮೇಲೆ ಕ್ಲಿಕ್ ಮಾಡಬೇಕು ನಂತರ View Details ಮೇಲೆ ಕ್ಲಿಕ್ ಮಾಡಬೇಕು ಆಗ ನೀವು ಯಾವ ಬೆಳೆಗೆ ವಿಮೆ ಮಾಡಿಸಿದ್ದೀರಿ ಯಾವ ಸರ್ವೆ ನಂಬರಿಗೆ ವಿಮೆ ಮಾಡಿಸಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ.ಇದರೊಂದಿಗೆ ನಿಮ್ಮ ಹೆಸರು ತಂದೆಯ ಹೆಸರು ಕಾಣಿಸುತ್ತದೆ. ನೀವು ಎಷ್ಟು ವಿಮೆ ಹಣ ಪಾವತಿಸಿದ್ದೀರಿ ಹಾಗೂ ನಿಮಗೆಷ್ಟು ವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿ ಚೆಕ್ ಕಾಣಿಸುತ್ತದೆ.

crop insurance calculation

ನಿಮಗೆ ಬೆಳೆ ವಿಮೆ ಹಣ ಜಮೆಯಾಗಿಲ್ಲವಾದರೆ ಏನು ಮಾಡಬೇಕು?

ನಿಮಗೆ ಬೆಳೆ ವಿಮೆ ಹಣ ಜಮೆಯಾಗಿಲ್ಲವಾದರೆ ನೀವು ಕೆಳಗಡೆ ಕಾಮೆಂಟ್ ಮಾಡಬಹುದು. ನಂತರ ನಿಮಗೆ ವಿಮಾ ಕಂಪನಿಯ ನಂಬರ್ ನೀಡಲಾಗುವುದು.ಆ ನಂಬರಿಗೆ ಕರೆ ಮಾಡಿ ನಿಮಗೇಕೆ ವಿಮೆ ಹಣ ಜಮೆಯಾಗಿಲ್ಲ ಹಾಗೂ ಯಾವಾಗ ವಿಮೆ ಹಣ ಜಮೆಯಾಗಬಹುದು ಎಂಬುದರ ಮಾಹಿತಿಯನ್ನು ಕೇಳಬಹುದು.

ಇನ್ನೂ ಹೆಚ್ಚಿನ ಮಾಹಿತಿಗೆ  ಬೆಳೆ ವಿಮೆ ಪೇಜ್ ಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment