Pm kisan beneficiary list ನಲ್ಲಿ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

Written by Admin

Updated on:

Spread the love

Pm kisan beneficiary list : ಪಿಎಂ ಕಿಸಾನ್ ಯೋಜನೆಯ18ನೇ ಕಂತಿನ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದೆ.

ಹೌದು, ಈ ಲಿಸ್ಟ್ ನಲ್ಲಿರುವ ರೈತರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಜಮೆಯಾಗಲಿದೆ. ಹಾಗಾದರೆ ಈ ಪಟ್ಟಿಯಲ್ಲಿ ಯಾವ ಯಾವ ರೈತರ ಹೆಸರಿದೆ?  ಯಾವ ರೈತರ ಹೆಸರು ಕೈಬಿಡಲಾಗಿದೆ? ಯಾರ ಹೆಸರು ಸೇರಿಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

Pm kisan beneficiary list

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಈಗಾಗಲೇ ದೇಶಾದ್ಯಂತ 9 ಕೋಟಿಗೂ ಹೆಚ್ಚು ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಈ ಯೋಜನೆಯು ಅತೀ ಮಹತ್ವದ್ದಾಗಿದೆ. ಈ ಯೋಜನೆಯನ್ನು ರೈತರ ಆರ್ಥಿಕ ಅಭಿವೃದ್ಧಿಗಾಗಿ ಜಾರಿಗೆ ತರಲಾಗಿದೆ. ಆದರೆ ಈ ಯೋಜನೆಯ ಸೌಲಭ್ಯ ನಿಜವಾದ ಫಲಾನುಭವಿಗಳಿಗೆ ಇನ್ನೂ ತಲುಪುತ್ತಿಲ್ಲ. ಅರ್ಹತೆ ಇಲ್ಲದವರು ತಮ್ಮ ಹೆಸರು ನೋಂದಣಿ ಮಾಡಿ ಸೌಲಭ್ಯ ಪಡೆಯುತ್ತಿದ್ದಾರೆ. ಇದರಿಂದಾಗಿ ಕೆಲವು ನಿಜವಾದ ಫಲಾನುಭವಿಗಳಿಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುತ್ತಿಲ್ಲ.

Pm kisan beneficiary list ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಫಲಾನುಭವಿಗಳ ಪಟ್ಟಿ

ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ಯಾವ ಯಾವ ರೈತರ ಹೆಸರಿದೆ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮ ಜಿಲ್ಲೆ ಆಯ್ಕೆ ಮಾಡಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ Pm kisan beneficiary list ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.

ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತುಗಳು ಜಮೆಯಾಗಿವೆ?

ಪಿಎಂ ಕಿಸಾನ್ ಯೋಜನೆಯ ದೇಶದ ರೈತರಿಗೆ ಇಲ್ಲಿಯವರೆಗೆ ಅವರ ಖಾತೆಗೆ 17 ಕಂತುಗಳು ಜಮೆಯಾಗಿವೆ. ಇದೊಂದು ದೇಶದ ರೈತರಿದೆ ಖುಷಿಯ ಸಮಾಚಾರವಾಗಿದೆ. ಒಟ್ಟು 17 ಕಂತುಗಳಿಂದ 34 ಸಾವಿರ ರೂಪಾಯಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ. ಯಾರು ಆರಂಭದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೋ ಅವರಿಗೆ 17 ಕಂತುಗಳು ಜಮೆಯಾಗಿವೆ.

ಇದನ್ನೂ ಓದಿ Gruhalakshmi eligible non eligible list 2024 ಗೃಹಲಕ್ಷ್ಮೀ ಹಣ ಜಮೆ

ಯಾವ ರೈತರು ಯಾವಾಗ ತಮ್ಮ ಹೆಸರು ನೋಂದಣಿ ಮಾಡಿಸಿದ್ದಾರೋ ಆಗಿನಿಂದ ಅವರ ಖಾತೆಗೆ ಕಂತುಗಳು ಜಮೆಯಾಗಿವೆ.

Pm kisan beneficiary list ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಯಾವಾಗ ಜಮೆಯಾಗಲಿದೆ?

ಪಿಎಂ ಕಿಸಾನ್ ಯೋಜನೆಯ 18 ನೇ ಕಂತು  october ತಿಂಗಳ ಆರಂಭದಲ್ಲಿ ಜಮೆಯಾಗುವ ಸಾಧ್ಯತೆಯಿದೆ. ಹಾಗಾಗಿ ರೈತರು ತಮಗೆ ಮುಂದಿನ ಕಂತು ಜಮೆಯಾಗಬೇಕಾದರೆ ಇಕೆವೈಸಿ ಮಾಡಿಸಿಕೊಳ್ಳಬೇಕಾಗುತ್ತದೆ.

Pm kisan beneficiary list

ರೈತರೇಕೆ ಇಕೆವೈಸಿ ಮಾಡಿಸಬೇಕು?

ಪಿಎಂ ಕಿಸಾನ್ ಯೋಜನೆಯ ಇಕವೈಸಿ ಮಾಡಿಸಿದರೆ ಮಾತ್ರ ಮುಂದಿನ ಕಂತು ಜಮಯಾಗುತ್ತದೆ. ಹೌದು, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿದ ರೈತರಿಗೆ ಪಾರದರ್ಶಕವಾಗಿ ಹಣ ಜಮೆ ಮಾಡುವುದಕ್ಕಾಗಿ ಇಕೆವೈಸಿಯನ್ನು ಕಡ್ಡಾಯಗೊಳಿಸಲಾಗಿದೆ.  ರೈತರಿಗೆ ಇನ್ನೂ ಇಕೆವೈಸಿ ಮಾಡಿಸಲು ಕಾಲಾವಕಾಶ ನೀಡಲಾಗಿದೆ.

ಯಾವ ರೈತರು ಇಕೆವೈಸಿ ಮಾಡಿಸಿಲ್ಲವೋ ಆ ರೈತರು ತಮ್ಮ ಜಮೀನಿನ ಪಹಣಿ (ಆರ್.ಟಿ.ಸಿ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಹಾಗೂ ಇತ್ತೀಚಿನ ಎರಡು ಭಾವಚಿತ್ರದೊಂದಿಗೆ ಇಕವೈಸಿ ಮಾಡಿಸಿಕೊಳ್ಳಬೇಕು. ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಿಎಸ್.ಸಿ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯ 18ನೇ ಕಂತು ಯಾವ ದಿನಾಂಕದಂದು ಜಮೆಯಾಗುತ್ತದೆ ಎಂಬ ಮಾಹಿತಿ ಚೆಕ್ ಮಾಡಲು ಈ  ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ  ಮೇಲೆ ಕ್ಲಿಕ್ ಮಾಡಿ ನೋಡಬಹುದು.

Leave a Comment