Crop damage compensation different : ರೈತ ಬಾಂಧವರೇ ನಮಸ್ಕಾರ. ಇಂದಿನ ಲೇಖನದಲ್ಲಿ ನಿಮಗೆ ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಈ ಎರಡೂ ಪರಿಹಾರದ ವ್ಯತ್ಯಾಸದ ಬಗ್ಗೆ ತಿಳಿಸುತ್ತೇನೆ. ಇದೇನಪಾ… ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಬೇರೆ ಇದೆಯೇ? ಬೆಳೆ ಹಾನಿಯಾದಾಗ ಪರಿಹಾರ ಬೇರೆ ಬೇರೆ ರೀತಿಯಲ್ಲಿ ಜಮೆಯಾಗುತ್ತದೆಯೇ? ಹಾಗಾದರೆ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ಯಾವಾಗ ಜಮೆಯಾಗುತ್ತದೆ? ಹೇಗೆ ಜಮೆ ಮಾಡಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
Crop damage compensation different ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಎರಡೂ ವ್ಯತ್ಯಾಸ ಹೇಗೆ?
ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಎರಡು ಬೇರೆ ಬೇರೆಯಾಗಿದೆ. ಬಹುತೇಕ ರೈತರಿಗೆ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ವ್ಯತ್ಯಾಸದ ಬಗ್ಗೆ ಗೊತ್ತೇ ಇಲ್ಲ. ಎರಡೂ ಒಂದೇ ಎಂದು ಭಾವಿಸುತ್ತಾರೆ.
ಬೆಳೆ ವಿಮೆ ಪರಿಹಾರ ಹಣ ಜಮೆಯಾಗಬೇಕಾದರೆ ರೈತರು ಬೆಳೆ ವಿಮೆ ಹಣವನ್ನು ಪಾವತಿಸಬೇಕು. ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಮಾ ಮೊತ್ತವನ್ನು ಪಾವತಿಸುತ್ತದೆ. ನಂತರ ಬೆಳೆ ಹಾನಿಯಾದಾಗ ಬೆಳೆ ಹಾನಿಯಾದ ಪ್ರಮಾಣದ ಆಧಾರದ ಮೇಲೆ ವಿಮೆ ಹಣ ರೈತರ ಖಾತೆಗೆ ಜಮೆ ಮಾಡಲಾಗುವುದು.
Crop damage compensation different ಬೆಳೆ ವಿಮೆ ಪರಿಹಾರ ಹೇಗೆ ಯಾರಿಗೆ ಜಮೆ ಮಾಡಲಾಗುವುದು?
ಬೆಳೆ ವಿಮೆ ಹಣವನ್ನು ಎಲ್ಲಾ ರೈತರಿಗೆ ಜಮೆಯಾಗುವುದಿಲ್ಲ. ಅದೇ ರೀತಿ ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ಪರಿಹಾರ ಹಣ ಜಮೆಯಾಗುವುದಿಲ್ಲ. ಬಹುತೇಕ ರೈತರು ಬೆಲೆ ವಿಮೆ ಮಾಡಿಸಿದ ಮಾತ್ರಕ್ಕೆ ಹಣ ಜಮೆಯಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ರೈತ ಬಾಂಧವರೇ ಬೆಳೆ ವಿಮೆ ಮಾಡಿಸದ ಮಾತ್ರಕ್ಕೆ ಹಣ ಯಾವುದೇ ಕಾರಣಕ್ಕೂ ಜಮೆ ಆಗುವುದಿಲ್ಲ.
ಬೆಳೆ ವಿಮೆ ಹಣ ಜಮೆಯಾಗಲು ರೈತರೇನು ಮಾಡಬೇಕು?
ಬೆಳೆ ವಿಮೆ ಮಾಡಿಸಿದ ನಂತರ ರೈತರು ವಿಮೆ ಹಣ ಜಮೆಯಾಗಬೇಕಾದರೆ ಬೆಳೆ ಹಾನಿಯಾದ ನಂತರ 72 ಗಂಟೆಯೊಳಗೆ ತಿಳಿಸಬೇಕಾಗುತ್ತದೆ. ನೀವು ಯಾವ ವಿಮಾ ಕಂಪನಿಗೆ ವಿಮೆ ಪಾವತಿಸಿದ್ದೀರೋ ಆ ವಿಮಾ ಕಂಪನಿಗೆ ದೂರು ನೀಡಬೇಕಾಗುತ್ತದೆ. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ನಿಮ್ಮಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡಿದ ನಂತರ ಬೆಳೆ ಹಾನಿಯಾಗಿದ್ದ ಪ್ರಮಾಣದ ಪ್ರಕಾರ ವಿಮೆ ಹಣ ಜಮೆ ಮಾಡಲಾಗುವುದು.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಿ ಖಾರೀಪ್ ಬೆಳೆ ಆಯ್ಕೆ ಮಾಡಿಕೊಂಡು ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.
Crop damage compensation different ಬೆಳೆ ಹಾನಿ ಪರಿಹಾರ ಜಮೆಯಾಗಲು ರೈತರೇನು ಮಾಡಬೇಕು?
ಬೆಳೆ ಹಾನಿ ಪರಿಹಾರ ಜಮೆಯಾಗಲು ಆರಂಭದಲ್ಲಿ ರೈತರೇನು ಮಾಡಬೇಕಿಲ್ಲ. ರಾಜ್ಯ ಸರ್ಕಾರವೇ ಅತೀವೃಷ್ಟಿ ಹಾಗೂ ಅನಾವೃಷ್ಟಿ ಸಂದರ್ಭದಲ್ಲಿ ಪರಿಹಾರ ಹಣ ಘೋಷಣೆ ಮಾಡುತ್ತದೆ. ಎಕರೆಗೆ ಇಂತಿಷ್ಟು ಹಣ ಜಮೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಬರಗಾಲ ಪರಿಹಾರ ಘೋಷಣೆ ಮಾಡುತ್ತದೆ.
ಇದನ್ನೂ ಓದಿ : Check your crop loan ನಿಮ್ಮ ಸಾಲವೆಷ್ಟಿದೆ? ಇಲ್ಲೇ ಚೆಕ್ ಮಾಡಿ 2024
ಆಗ ರೈತರ ಜಮೀನುಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ಪರಿಶೀಲಿಸುತ್ತಾರೆ. ನಂತರ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗುವುದು.
ಬರಗಾಲ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಬರಗಾಲ ಪರಿಹಾರ ಹಣ ಜಮೆಯ ಸ್ಟೇಟಸ್ ಚೆಕ್ ಮಾಡಲು ಈ
https://parihara.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಸೆಲೆಕ್ಟ್ ಕಾಲಾಮಿಟಿಯಲ್ಲಿ ಖಾರೀಪ್ ಆಯ್ಕೆ ಮಾಡಿಕೊಳ್ಳಬೇಕು. ನಂತರ 2023-24 ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಬರಗಾಲ ಪರಿಹಾರ ಸ್ಟೇಟಸ್ ಚೆಕ್ ಮಾಡಬಹುದು.