Krishi Honda subsidy ಕೃಷಿ ಹೊಂಡಕ್ಕೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ 2024

Written by Admin

Published on:

Spread the love

Krishi Honda subsidy  ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಶೇ. 50 ರಷ್ಟು ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ರೈತರು ಅರ್ಜಿ ಎಲ್ಲಿ ಸಲ್ಲಿಸಬೇಕು? ಯಾವ ಯಾವ ಕೃಷಿ ಚಟಿವಟಿಕೆಗೆ ಸಬ್ಸಿಡಿ ನೀಡಲಾಗುವುದು ಎಂಬುದರ ಸಂಪೂರ್ಣ ಮಾಹಿತಿ ಬೇಕಾದರೆ ಲೇಖನದ ಕೊನೆಯವರೆಗೆ ಓದಿ.

Krishi Honda subsidy  ಏನಿದು ಕೃಷಿ ಹೊಂಡ ಯೋಜನೆ?

ಮಳೆಯ ನೀರು ಪೋಲಾಗುವುದನ್ನ ತಡೆದು ಅವಶ್ಯ ಬಿದ್ದಾಗ ಬಿತ್ತನೆ ಮಾಡಿದ ಬೆಳೆಗಳಿಗೆ ಹರಿಸಲು ಸಂಗ್ರಹಿಸಿಡುವುದಕ್ಕೆ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ.  ಹೌದು, 2023-24ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ಪಡೆಬಹುದು.

Krishi Honda subsidy

Krishi Honda subsidy  ಯಾವ ಯಾವ ಅಳತೆಯ ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ನೀಡಲಾಗುವುದು?

ರೈತರ ಜಮೀನುಗಳಲ್ಲಿ ಮಳೆ ನೀರು ಪೋಲಾಗುವುದನ್ನು ತಡೆಯುವುದಕ್ಕಾಗಿ ವಿವಿಧ ಅಳತೆಗೆ ಸಬ್ಸಿಡಿ ನೀಡಲಾಗುವುದು. ಎಲ್ಲಾ ರೀತಿಯ ಮಣ್ಣುಗಳಲ್ಲಿ ಮಳೆ ನೀರು ಸಂಗ್ರಹಣೆಗಾಗಿ ವಿವಿಧ ಅಳತೆಯ 10x10x3 ಮೀಟರ್,  12x12x3 ಮೀಟರ್,  15x15x3 ಮೀಟರ್, 21x21x3 ಮೀಟರ್ ಅಳತೆಯ ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ನೀಡಲಾಗುವುದು.

Krishi Honda subsidy  ಕೃಷಿ ಹೊಂಡ ಸೇರಿದಂತೆ ಮತ್ಯಾವುದಕ್ಕೆ ಸಬ್ಸಿಡಿ ನೀಡಲಾಗುವುದು?

ಕೃಷಿ ಹೊಂಡದಲ್ಲಿ ಆಕಸ್ಮಿಕ ಅವಘಡಗಳು, ಪ್ರಾಣ ಹಾನಿ ಸಂಭವಿಸದಂತೆ ತಡೆಯಲು ಕಡ್ಡಾಯವಾಗಿ ತಂತಿ ಬೇಲಿ ನಿರ್ಮಾಣ ಮಾಡಲಾಗುವುದು. ಈ ತಂತಿ ಬೇಲಿ ನಿರ್ಮಾಣಕ್ಕೂ ಸಬ್ಸಿಡಿ ನೀಡಲಾಗುವುದು.  ಅದೇ ರೀತಿ ಕೃಷಿ ಹೊಂಡದಲ್ಲಿ ಸಂಗ್ರಹಣೆಯಾದ ನೀರನ್ನು ಬೆಳೆಗಳಿಗೆ ಬಳಸಿಕೊಳ್ಳಲು ಡೀಸೆಲ್ , ಪೆಟ್ರೋಲ್ ಅಥವಾ ಸೋಲಾರ್ ಪಂಪ್ ಸೆಟ್ ಖರೀದಿಗೂ ಕೃಷಿ ಭಾಗ್ಯ ಯೋಜನೆಯಡಿ ಸಬ್ಸಿಡಿ ನೀಡಲಾಗುವುದು.

ಕೃಷಿ ಹೊಂಡಗಳಲ್ಲಿ ಸಂಗ್ರಹವಾದ ಮಳೆ ನೀರನ್ನು ಬೆಳೆಗಳಿಗೆ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿಗಾಗಿ ಬಳಸಿಕೊಳ್ಳಲು ಸೂಕ್ಷ್ಮ ನೀರಾವರಿ ಘಟಕ ಅನುಷ್ಠಾನಗೊಳಿಸಲು ಸಬ್ಸಿಡಿ ನೀಡಲಾಗುವುದು.

ಇದನ್ನೂ ಓದಿ Mutation check here ಜಮೀನನ ಮುಟೇಶನ್ ಮೊಬೈಲ್ ನಲ್ಲೇ ನೋಡಿ 2024

ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಪೋಲಾಗದಂತೆ ಅದೇ ಜಮೀನಿನಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಕ್ಷೇತ್ರ ಬದು ನಿರ್ಮಾಣ ಮಾಡಲು ಸಹ ರೈತರಿಗೆ ಸಬ್ಸಿಡಿ ನೀಡಲಾಗುವುದು.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಸ್ವೀಕೃತವಾದ ಅರ್ಹ ಅರ್ಜಿಗಳ ಜೇಷ್ಠತೆಯನ್ವಯ ಹಾಗೂ ಹೋಬಳಿಗೆ ನಿಗದಿಪಡಿಸಿದ ಗುರಿಗಳನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು.

Krishi Bhagya yojane subsidy
Krishi Bhagya yojane subsidy details

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು?

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡದಿಂದ ಎತ್ತಲು ಪಂಪ್ ಸೆಟ್, ಕೃಷಿ ಹೊಂಡ ಸುತ್ತಲೂ ತಂತಿ ಬೇಲಿ (GI Wire Fencing )  ಮಾಡಲು ಅಗತ್ಯ ದಾಖಲೆ ಸಲ್ಲಿಸಬೇಕಾಗುತ್ತದೆ. ಹೌದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಪಡೆದು ಸರಿಯಾಗಿ ಭರ್ತಿ ಮಾಡಬೇಕು. ರೈತರ ಭಾವಚಿತ್ರ ಸಲ್ಲಿಸಬೇಕು. ಎಫ್ಐಡಿ ಸಲ್ಲಿಸಬೇಕು. ಒಂದು ವೇಳೆ ರೈತರ ಬಳಿ ಎಫ್ಐಡಿ ಇಲ್ಲವಾದಲ್ಲಿ ಆಧಾರ್ ಪ್ರತಿ ಸಲ್ಲಿಸಬೇಕು. ರೈತರು ಪಹಣಿ ಪ್ರತಿ ಸಲ್ಲಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ರೈತರ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ ಸಲ್ಲಿಸಬೇಕು.

ರೈತರಿಗೆ ಎಷ್ಟು ಸಬ್ಸಿಡಿ ನೀಡಲಾಗುವುದು?

ಕೃಷಿ ಹೊಂಡ ಅಳತೆಗನುಸಾರವಾಗಿ ಸಬ್ಸಿಡಿ ನೀಡಲಾಗುವುದು. ಇದರೊಂದಿಗೆ ಬದು ನಿರ್ಮಾಣ, ಬೇಲಿ ತಂತಿ ನಿರ್ಮಾಣ, ಹನಿ ನೀರಾವರಿ ಅಥವಾ ತುಂತುರು ನೀರಾವರಿಗೂ ಸಬ್ಸಿಡಿ ನೀಡಲಾಗುವುದು. ಆದರೆ ಎಷ್ಟು ಸಬ್ಸಿಡಿ ನೀಡಲಾಗುವುದು ಅಂದರೆ ನೀವು ಖರೀದಿಸುವ ಉಪಕರಣಗಳ ಮೇಲೆ ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ಸಬ್ಸಿಡಿ ನೀಡಲಾಗುವುದು.

ಮೊದಲು ಸಲ್ಲಿಸಿದವರಿಗೆ ಆದ್ಯತೆಗನುಸಾರವಾಗಿ ಸೌಲಭ್ಯ ನೀಡಲಾಗುವುದು. ಅಂದರೆ ಮೊದಲು ಸೌಲಭ್ಯ ಪಡೆಯದೆ ಇರುವ ರೈತರಿಗೆ ಮೊದಲು ಆದ್ಯತೆ ನೀಡಲಾಗುತ್ತದೆ.

Leave a Comment

Join WhatsApp Group