Crop insurance calculation : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿದ ರೈತರಿಗೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಿದೆ ಎಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತಬಾಂಧವರಿಗೆ ಬಹುತೇಕ ರೈತರು ಬೆಳೆ ವಿಮೆ ಹಣ ಪಾವತಿಸಿರುತ್ತಾರೆ. ಆದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬುದೇ ಗೊತ್ತಿರುವುದಿಲ್ಲ. ನಮ್ಮ ಕರ್ನಾಟಕ ರೈತ ಬಾಂಧವರಿಗೆ ಮನೆಯಲ್ಲಿಯೇ ಕುಳಿತು ಬೆಳೆ ವಿಮೆ ಹಣ ಎಷ್ಟು ಹಣ ಜಮೆ ಆಗಲಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
Crop insurance calculation ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ? ಇಲ್ಲೇ ಚೆಕ್ ಮಾಡಿ
ಕರ್ನಾಟಕ ರಾಜ್ಯದ ರೈತರು ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಯಾವ ಯಾವ ಬೆಳೆಗಳಿಗೆ ವಿಮೆ ಹಣ ಎಷ್ಟು ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/publichome.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Farmers ಕೆಳಗಡೆ Premium Calculator ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.
ಆಗ ನೀವು ಯಾವ ಬೆಳೆಗೆ ವಿಮೆ ಮಾಡಿಸಿದ್ದೀರೋ ಆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ನೀವು ಎಷ್ಟು ಎಕರೆಗೆ ವಿಮೆ ಮಾಡಿಸಿದ್ದೀರೋ ಆ ಎಕರೆ ನಮೂದಿಸಬೇಕು. ಎಕರೆ ಹಾಗೂ ಗುಂಟೆ ಇದ್ದರೆ ಗುಂಟೆ ನಮೂದಿಸಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ಪ್ರತಿ ಹೆಕ್ಟೇರಿಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿ ಕಾಣಿಸುತ್ತದೆ. ಇದರೊಂದಿಗೆ ಕೆಳಗಡೆ ನೀವು ನಮೂದಿಸಿದ ಎಕರೆಗೆ ನೀವು ನಮೂದಿಸಿದ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿ ಕಾಣಿಸುತ್ತದೆ. ಇದರೊಂದಿಗೆ ಕೇಂದ್ರ, ರಾಜ್ಯ ಹಾಗೂ ರೈತರ ವಿಮೆ ಹಣ ಸೇರಿ ಒಟ್ಟು ಎಷ್ಟು ವಿಮೆ ಹಣ ಪಾವತಿಸಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರಲ್ಲಿ ರೈತರ ಪಾಲೆಷ್ಟು, ಕೇಂದ್ರ ಸರ್ಕಾರದ ಪಾಲೆಷ್ಟು, ರಾಜ್ಯ ಸರ್ಕಾರದ ಪಾಲೆಷ್ಟು ಎಲ್ಲಾ ಮಾಹಿತಿ ಕಾಣಿಸುತ್ತದೆ.
ಇದನ್ನೂ ಓದಿ : Mutation check here ಜಮೀನನ ಮುಟೇಶನ್ ಮೊಬೈಲ್ ನಲ್ಲೇ ನೋಡಿ 2024
ಉದಾಹರಣೆಗೆ ನೀವು ಒಂದು ಎಕರೆಗೆ ತೊಗರಿ ಬೆಳೆಗೆ ವಿಮೆ ಮಾಡಿಸಿದ್ದರೆ ನಿಮಗೆ 19436 ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ.
ನೀವು ಒಂದು ಎಕರೆಗೆ ಹೆಸರು ಬೆಳೆಗೆ ವಿಮೆ ಮಾಡಿಸಿದ್ದರೆ ನಿಮಗೆ 13456 ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ಅದೇ ರೀತಿ ಹತ್ತಿ ಬೆಳೆಗೆ ಎಕರೆಗೆ 20 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ.
ರೈತರು ತಾವು ಯಾವ ಬೆಳೆಗೆ ವಿಮೆ ಮಾಡಿಸಿದ್ದಾರೋ ಆ ಬೆಳೆಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೆಚ್ಚಿನ ಮಾಹಿತಿಗೆ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು. ಅಥವಾ ಬೆಳೆ ವಿಮೆ ಸಹಾಯವಾಣಿ ನಂಬರ್ ಗೆ ಕರೆ ಮಾಡಬಹುದು.
Crop insurance calculation ಬಗ್ಗೆ ಜಿಲ್ಲಾವಾರು ವಿಮಾ ಕಂಪನಿಗಳ ಸಹಾಯವಾಣಿ ನಂಬರ್ ಗಳು
ರಾಜ್ಯದ ವಿವಿಧ ಜಿಲ್ಲೆಗಳಿಗೆ ಒಟ್ಟು ಎಂಟು ವಿಮಾ ಕಂಪನಿಗಳನ್ನು ನಿಯೋಜಿಸಲಾಗಿದೆ.
ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ ಸಹಾಯವಾಣಿ ನಂಬರ್ 1800 200 5142, ಎಸ್.ಬಿ.ಐ ವಿಮಾ ಕಂಪನಿಯ ಸಹಾಯವಾಣಿ 1800 180 1551, 1800 209 1111, ಹೆಚ್.ಡಿಎಫ್ಸಿ ಅರ್ಗೋ 1800 266 0700, ಫ್ಯೂಚರ್ ಜನರಲಿ ಸಹಾಯವಾಣಿ ನಂಬರ್ 1800 266 4141, ಐಸಿಐಸಿ ಲೋಂಬೋರ್ಡ್ ಸಹಾಯವಾಣಿ1800 103 7712, ಬಜಾಜ್ ಅಲಾಯನ್ಸ್ ಜಿಐಸಿ 1800 209 5959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂ. ಲಿಮಿಟೆಡ್ ಸಹಾಯವಾಣಿ ನಂಬರ್1800 102 4088 ಗೆ ಸಂಪರ್ಕಿಸಲು ಕೋರಲಾಗಿದೆ.