Crop insurance village list : ರೈತರು ತಮ್ಮೂರಿನಲ್ಲಿ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು ರೈತ ಬಾಂಧವರೇ ಈಗ ನೀವು ನಿಮ್ಮ ಊರಿನಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು. ಆ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆ ಆಗಲಿದೆ ಕೇಂದ್ರ ಸರ್ಕಾರ ಎಷ್ಟು ವಿಮೆ ಪಾವತಿಸುತ್ತದೆ. ರಾಜ್ಯ ಸರ್ಕಾರವು ಎಷ್ಟು ವಿಮೆ ಪಾವತಿಸುತ್ತದೆ ಹಾಗೂ ರೈತರ ಪಾಲು ಎಷ್ಟಿದೆ ಎಂಬ ಮಾಹಿತಿಯನ್ನು ಈಗ ಕೇಳಲು ಎಲ್ಲಿಯೂ ಹೋಗಬೇಕಿಲ್ಲ. ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Crop insurance village list ನಿಮ್ಮೂರಿನ ಯಾವ ಯಾವ ಬೆಳೆಗೆ ವಿಮೆ ಮಾಡಿಸಿದರೆ ಎಷ್ಟು ವಿಮೆ ಹಣ ಜಮೆ?
ರೈತರು ಈಗ ಮನೆಯಲ್ಲಿಯೇ ಕುಳಿತು ತಮ್ಮೂರಿನ ಬೆಳೆ ವಿಮೆಯ ಲಿಸ್ಟ್ ಚೆಕ್ ಮಾಡಲು ಈ
https://samrakshane.karnataka.gov.in/publichome.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Farmers ಕೆಳಗಡೆ Premium Calculator, Crop you can Insure, Check status, Know your insurance co, Find Gram Panchayat ಆಯ್ಕೆಗಳು ಕಾಣಿಸುತ್ತವೆ. ಆಗ ನೀವು Crop you can Insure ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ಮುಂಗಾರು ಹಂಗಾಮಿನ ಬೆಳೆ ವಿಮೆ ಚೆಕ್ ಮಾಡಬೇಕಾದರೆ Khariff ಆಯ್ಕೆ ಮಾಡಿಕೊಳ್ಳಬೇಕು. ಹಿಂಗಾರು ಹಂಗಾಮಿನ ಬೆಳೆ ವಿಮೆ ಚೆಕ್ ಮಾಡಬೇಕಾದರೆ Rabi ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಡಿಸ್ಟ್ರಿಕ್ಟ್ ನಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Display ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.
Crop insurance village list ಯಾವ ಬೆಳೆಗೆ ಎಷ್ಟು ವಿಮೆಹಣ ಜಮೆಯಾಗಲಿದೆ?
ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನವರಾಗಿದ್ದರೆ ತೊಗರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 48 ಸಾವಿರ ರೂಪಾಯಿ ಬೆಳೆ ವಿಮೆ ಹಣ ಜಮೆಯಾಗಲಿದೆ.
ಪಪ್ಪಾಯ ಬೆಳೆಗೆ ವಿಮೆ ಮಾಡಿಸಿದರೆ ಪ್ರತಿ ಹೆಕ್ಟೇರಿಗೆ 1,34,000 ರೂಪಾಯಿ ಜಮೆ ಆಗಲಿದೆ.
ಭತ್ತ ಬೆಳೆಗೆ ಪ್ರತಿ ಹೆಕ್ಟೇರಿಗೆ 93250 ರೂಪಾಯಿ ಜಮೆ ಆಗಲಿದೆ. ಮೆಣಸಿನ ಕಾಯಿ ಬೆಳೆಗೆ ವಿಮೆ ಮಾಡಿಸಿದರೆ ಪ್ರತಿ ಹೆಕ್ಟೇರಿಗೆ 71 ಸಾವಿರ ರೂಪಾಯಿ ಹಣ ಜಮೆಯಾಗಲಿದೆ.
ಇದನ್ನೂ ಓದಿ : Mutation check here ಜಮೀನನ ಮುಟೇಶನ್ ಮೊಬೈಲ್ ನಲ್ಲೇ ನೋಡಿ 2024
ಉದ್ದು ಬೆಳೆಗೆ ವಿಮೆ ಮಾಡಿಸಿದರೆ ಪ್ರತಿ ಹೆಕ್ಟೇರಿಗೆ 32750 ರೂಪಾಯಿ ಹಣ ಜಮೆಯಾಗಲಿದೆ. ಸೂರ್ಯಕಾಂತಿ ಬೆಳೆಗೆ ಪ್ರತಿ ಹೆಕ್ಟೇರಿಗೆ 40750 ರೂಪಾಯಿ ಜಮೆ ಆಗಲಿದೆ. ಹತ್ತಿ ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮೆ ಮಾಡಿಸಿದರೆ 49750 ರೂಪಾಯಿ ಹಣ ಜಮೆ ಆಗಲಿದೆ. ಅದೇ ರೀತಿ ಹೆಸರು ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮೆ ಮಾಡಿಸಿದರೆ ನಿಮಗೆ 33250 ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ.
ನೀವು ಬೆಳೆ ವಿಮೆ ಮಾಡಿಸಿದ ನಂತರ ಬೆಳೆ ಹಾನಿಯಾದರೂ ಹಣ ಜಮೆಯಾಗಿಲ್ಲವೇ?
ಬೆಳೆ ವಿಮೆ ಮಾಡಿಸಿದ ನಂತರ ರೈತರ ಬೆಳೆ ಬರಗಾಲ ಅಥವಾ ಇನ್ಯಾವುದೋ ಕಾರಣದಿಂದ ಹಾನಿಯಾದರೆ ನೀವು ಯಾವ ವಿಮಾ ಕಂಪನಿಗೆ ವಿಮೆ ಪಾವತಿಸಿದ್ದೀರೋ ಆ ವಿಮಾಕಂಪನಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಹೌದು, ನಿಮಗೆ ನಿಮ್ಮ ಜಿಲ್ಲೆಯ ವಿಮಾ ಕಂಪನಿಗೆ ನಂಬರ್ ಗೊತ್ತಿಲ್ಲವೇ? ಇಲ್ಲಿದೆ ನೋಡಿ ಮಾಹಿತಿ.
ಬೆಳೆ ವಿಮೆ ಸಹಾಯವಾಣಿ ನಂಬರ್
ಪ್ರಧಾನಮಂತ್ರಿ ಫಸಲ್ ಬವಿಮಾ ಯೋಜನೆಯಡಿಯಲ್ಲಿ ರೈತರು ವಿಮೆ ಮಾಡಿಸಿದ ನಂತರ ನಿಮಗೇಕೆ ಬೆಳೆ ವಿಮೆ ಹಣ ಜಮೆಯಾಗಿಲ್ಲವೆಂಬುದನ್ನು ಹಾಗೂ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ನಂಬರ್ ಕೇಳಲು 1800 180 1551 ಗೆ ಕರೆ ಮಾಡಿ ವಿಚಾರಿಸಬಹುದು. ನೀವು ಮೇಲಿನ ನಂಬರಿಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ವಿಮಾ ಕಂಪನಿ ಹಾಗೂ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಪಡೆದುಕೊಳ್ಳಬಹುದು.