Crop loan status ಬೆಳೆ ಸಾಲಮನ್ನಾ ಜಮೆ ಸ್ಟೇಟಸ್ ಇಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

Crop loan status ಬೆಳೆ ಸಾಲಮನ್ನಾ ಯಾವ ಯಾವ ರೈತರಿಗೆ ಜಮೆಯಾಗಿದೆ ಯಾವ ರೈತರಿಗೆ ಜಮೆಯಾಗಿಲ್ಲ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದ್ರಿ, ಕೇವಲ ಒಂದೇ ನಿಮಿಷದಲ್ಲಿ ನಿಮಗೆಷ್ಟು ಬೆಳೆ ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. ಇದರೊಂದಿಗೆ ನಿಮಗೆ ಬೆಳೆ ಸಾಲಮನ್ನಾ ಆಗಿಲ್ಲವಾದಲ್ಲಿ ನಿಮಗೇಕೆ ಬೆಳೆ ಸಾಲಮನ್ನಾ ಆಗಿಲ್ಲ  ಬೆಳೆ ಸಾಲಮನ್ನಾಗೆ ಇರುವ ಷರತ್ತುಗಳೇನು ಅಂದರೆ ಯಾವ ಯಾವ ರೈತರು ಬೆಳೆ ಸಾಲಮನ್ನಾ ಪಡೆಯಲಿದ್ದಾರೆ ಎಂಬುದರ ಮಾಹಿತಿಗಳನ್ನು ಇಲ್ಲಿನೀಡಲಾಗಿದೆ.

crop loan status
farmer can check crop loan waive status in mobile

Crop loan status ಬೆಳೆ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಬೆಳೆ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಲು ರೈತರು ಈಗ ಎಲ್ಲಿಯೂ ಹೋಗಬೇಕಿಲ್ಲ. ಅಂದರೆ ಬ್ಯಾಂಕಿಗೆ ಹೋಗಬೇಕಿಲ್ಲ. ಅಲ್ಲಿ ಹೋಗಿ ನಿಮಗೆ ಬೆಳೆ ಸಾಲಮನ್ನಾ ಆಗಿದೆಯೋ ಇಲ್ಲವೋ ಇದರೊಂದಿಗೆ ನಿಮಗೆ ಎಷ್ಟು ಬೆಳೆ ಸಾಲಮನ್ನಾ ಆಗಿದೆ ಎಂಬುದು ಕೇಳುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

Crop loan status  ಬೆಳೆ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಲು ಈ

https://clws.karnataka.gov.in/clws/pacs/citizenreport/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Crop loan Waiver ಪೇಜ್ ಕಾಣಿಸುತ್ತದೆ. ಅಲ್ಲಿ Payment and Loan Status Report ಕೆಳಗಡೆ ನೀವು Enter Aadhar Nubmer ಬಾಕ್ಸ್  ನಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ Fetch Report ಮೇಲೆ ಕ್ಲಿಕ್ ಮಾಡಬೇಕು. ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನೀವು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ ಎಂಬುದು ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ಜಿಲ್ಲೆ, ತಾಲೂಕು ಕಾಣಿಸುತ್ತದೆ. ಅದರ ಮುಂದೆ ನೀವು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ? ಯಾವ ಬ್ರ್ಯಾಂಚ್ ನಲ್ಲಿ ಸಾಲ ಪಡೆದಿದ್ದೀರಿ? ಇದರೊಂದಿಗೆ ನಿಮ್ಮ ಹೆಸರು ಹಾಗೂ ತಂದೆಯ ಹೆಸರು ಕಾಣಿಸುತ್ತದೆ. ನಿಮ್ಮ ರೇಶನ್ ಕಾರ್ಡ್ ವೆರಿಫೈ ಆಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ. ಅದರ ಮುಂದುಗಡೆ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಕಾಣಿಸುತ್ತದೆ. ಅದರ ಮುಂದುಗಡೆ 31-12-2017 ರವರೆಗೆ ನೀವು ಎಷ್ಟು ಸಾಲ ಪಡೆದಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಸ್ಟೇಟಸ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ ಎರಡೂ ವೆರಿಫೈ ಆಗಿದೆಯೇ? ಎಂಬ ಮಾಹಿತಿ ಕಾಣಿಸುತ್ತದೆ.

crop loan report

Crop loan status ನಿಮಗೆ ಎಷ್ಟು ಸಲ ಸಾಲ ಮನ್ನಾ ಹಣ ಬಿಡುಗಡೆ ಮಾಡಲಾಗಿದೆ?

ನಿಮಗೆ ಇಲ್ಲಿಯವರೆಗೆ ಎಷ್ಟುಸಲ ಸಾಲಮನ್ನಾ ಹಣ ಬಿಡುಗಡೆ ಮಾಡಲಾಗಿದೆ ಎಂ ಮಾಹಿತಿ ಕಾಣಿಸುತ್ತದೆ.ಅದರೆ ಮೊದಲು ನಿಮ್ಮ ಹೆಸರು ತಂದೆಯ ಹೆಸರು ಕಾಣಿಸುತ್ತದೆ. ಅದರ ಮುಂದುಗಡೆ ನಿಮ್ಮ ಬ್ಯಾಂಕಿನ ಹೆಸರು ಕಾಣಿಸುತ್ತದೆ.

ಇದನ್ನೂ ಓದಿ Land mutation ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ 2024

ನಿಮಗೆ ಎಷ್ಟು ಸಾಲಮನ್ನಾ ಹಣ ಬಿಡುಗಡೆಯಾಗಿದೆ ಹಾಗೂ ಯಾವ ದಿನಾಂಕದಂದು ಬಿಡುಗಡೆಯಾಗಿದೆಎಂಬ ಮಾಹಿತಿ ನಿಮಗೆ ಕಾಣಿಸುತ್ತದೆ.

ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲಮನ್ನಾ ಆಗಬೇಕೇ?

ಪ್ರಸಕ್ತ ಸಾಲಿನಲ್ಲಿ ಬೆಳೆಸಾಲಮನ್ನಾ ಆಗಬೇಕೋ ಇಲ್ಲವೋ? ಬೆಳೆ ಸಾಲಮನ್ನಾ ಆಗಬೇಕಾದರೆ ಯಾವ ಕಾರಣಕ್ಕಾಗಿ ಆಗಬೇಕು ಆಗಬಾರದೆಂದರೆ ಯಾವ ಕಾರಣಕ್ಕಾಗಿ ಬೆಳೆ ಸಾಲಮನ್ನಾ ಆಗಬಾರದು ಎಂಬುದರ ಕುರಿತು ಕಾಮೆಂಟ್ ಮಾಡಬಹುದು.

ಪ್ರಸಕ್ತ ಸಾಲಿನಲ್ಲಿ ಅಂದರೆ ಮುಂಗಾರು ಹಾಗೂ ಹಿಂಗಾರು ಮಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ 226 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿತು. ಆದರೆ ಬರಗಾಲ ಪರಿಹಾರ ಹಣ ಪ್ರತಿ ಎಕರೆಗೆ ಕೇವಲ 2 ಸಾವಿರ ರೂಪಾಯಿ ಮಾತ್ರ ಬಿಡುಗಡೆ ಮಾಡಿತು. ಇದನ್ನು ಸರ್ಕಾರ ತಾತ್ಕಾಲಿಕವಾಗಿ 2 ಸಾವಿರ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಬರಗಾಲ ಪರಿಹಾರ ಹಣ ಬಿಡುಗಡೆ ಮಾಡಿದರೆ ರೈತರ ಖಾತೆಗೆ ಜಮೆ ಮಾಡಲಾಗುವುದೆಂದು ಹೇಳಿದೆ. ಆದರೆ ಇನ್ನೂವರೆಗೆ ಕೇಂದ್ರ ಸರ್ಕಾರದಿಂದ ಬರಗಾಲ ಪರಿಹಾರ ಹಣ ಬಿಡುಗಡೆಯಾಗಿಲ್ಲ.  ಹಾಗಾಗಿ ರಾಜ್ಯ ಸರ್ಕಾರವೇ ಮುತುವರ್ಜಿವಹಿಸಿ ರಾಜ್ಯದಲ್ಲಿ ರೈತರ ಬೆಳೆ ಸಾಲಮನ್ನಾ ಮಾಡಬೇಕೆಂದು ರೈತರ ಒತ್ತಾಯವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಾದರೂ ಸಾಲಮನ್ನಾ ವಿಷಯ ಸೇರಿಸಬಹುದು.

Leave a Comment