Crop loan ರೈತರು ತಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಈಗ ತಮ್ಮ ಬಳಿ ಫೋನ್ ಇದ್ದರೆ ಸಾಕು, ಯಾರ ಸಹಾಯವೂ ಇಲ್ಲದೆ ಕೇವಲ ಒಂದೇ ನಿಮಿಷದಲ್ಲಿ ತಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ರೈತರ ಜಮೀನಿನ ಮೇಲೆ ಕೆಲವರು ಸಾಲ ಪಡೆದಿರುತ್ತಾರೆ. ರೈತರು ಸಹ ಸಾಲ ಪಡೆದಿರುತ್ತಾರೆ. ಕೆಲವು ಸಾಲ ತೀರಿಸಿದ್ದರೂ ಸಹ ಜಮೀನಿನ ಮೇಲೆ ಸಾಲವಿದೆ ಎಂಬ ಮಾಹಿತಿ ಇರುತ್ತದೆ. ಆದರೆ ಬಹುತೇಕ ರೈತರಿಗೆ ತಮ್ಮ ಜಮೀನಿನ ಮೇಲೆ ಸಾಲ ಇರುವ ವಿಷಯವೇ ಗೊತ್ತಿರುವುದಿಲ್ಲ. ಅಂತಹ ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
Crop loan ರೈತರು ತಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ ? ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರು ತಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ಪೇಜ್ ಓಪನ್ ಆಗುತ್ತದೆ. ಅಲ್ಸಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು? ನಂತರ ಸರ್ವೆ ನಂಬರ್ ಹಾಕಬೇಕು.ಇದಾದ ನಂತರ Go ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ (*) ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ನಿಮ್ಮ ಹಿಸ್ಸಾ ನಂಬರ್ ನಮೂದಿಸಬೇಕು. ಹಿಸ್ಸಾ ನಂಬರ್ ಗೊತ್ತಿಲ್ಲದ್ದಿದ್ದರೆ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch details ಮೇಲೆ ಕ್ಲಿಕ್ ಮಾಡಬೇಕು.
Crop loan ಜಮೀನಿನ ಪಹಣಿಯಲ್ಲಿ ಏನೇನು ಮಾಹಿತಿ ಇರುತ್ತದೆ?
ಆಗ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ. ಅದರ ಎದುರುಗಡೆ ಆ ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮಾಲಿಕರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಎಂಬ ಮಾಹಿತಿ ಕಾಣಿಸುತ್ತದೆ.ಅದರ ಮುಂದುಗಡೆ ಕಾಣುವ View ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : Original Land Tippani ನಿಮ್ಮ ಜಮೀನಿನ ಓರಿಜನಲ್ ಟಿಪ್ಪಣಿ ಇಲ್ಲೇ ಚೆಕ್ ಮಾಡಿ 2024
ಆಗ ಇನ್ನೊಂದು ಪೇಜ್ ಕಾಣಿಸುತ್ತದೆ.ಅದು ನಿಮ್ಮ ಜಮೀನಿನ ಪ್ರಸ್ತತ ಪಹಣಿ (ಆರ್.ಟಿ.ಸಿ) ಆಗಿರುತ್ತದೆ. ಅಲ್ಲಿ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ನಲ್ಲಿ ಒಟ್ಟು ಎಷ್ಟು ಎಕರೆ ಜಮೀನಿದೆ? ಅದರ ಮುಂದುಗಡೆ ಜಮೀನಿನ ಮಾಲಿಕರ ಹೆಸರು ತಂದೆಯ ಹೆಸರು ಕಾಣಿಸುತ್ತದೆ. ಜಮೀನಿನ ಮಾಲಿಕರ ಹೆಸರು ಜಂಟಿಯಾಗಿದಿದ್ದರೆ ಯಾರ ಯಾರ ಹೆಸರು ಜಂಟಿಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಂಟಿಯಾಗಿದೆ ಎಂಬ ಮಾಹಿತಿ ಇರುತ್ತದೆ. ಅದರ ಮುಂದುಗಡೆ ಮುಟೇಶನ್ ನಂಬರ್ ಇರುತ್ತದೆ.
ಒಂದು ವೇಳೆ ನೀವು ನಿಮ್ಮ ಜಮೀನಿನ ಮೇಲೆ ಸಾಲ ಪಡೆದಿದ್ದರೆ Crop loan ) ಎಷ್ಟು ಸಾಲ ಪಡೆದಿದ್ದೀರಿ ಹಾಗೂ ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ? ಎಂಬ ಮಾಹಿತಿ ಕಾಣಿಸುತ್ತದೆ. ಇದರೊಂದಿಗೆ ಪ್ರಸ್ತುತ ಸಾಲಿನಲ್ಲಿಯಾವ ಬೆಳೆ ಬಿತ್ತಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
ನಿಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆದಿದ್ದರೆ ನಿಮಗೆ ಕೊಳವೆ ಬಾವಿ ಇದೆ ಎಂಬ ಮಾಹಿತಿ ಸಹ ಕಾಣಿಸುತ್ತದೆ.