Land Measurement ರೈತರು ತಮ್ಮ ಜಮೀನಿನ ಅಳತೆ ಮಾಡಲು ಈಗ ಟೇಪ್ ಹಿಡಿಯಬೇಕಿಲ್ಲ. ಕೋಲು ಬೇಕಿಲ್ಲ. ಹಗ್ಗವೂ ಬೇಕಿಲ್ಲ, ಹಗ್ಗ ದಾರ ಹಿಡಿಯಲು ಈಗ ನಾಲ್ಕು ಜನರೂ ಬೇಕಿಲ್ಲ.
ನೀವೊಬ್ಬರೇ ನಿಮ್ಮ ಮೊಬೈಲ್ ನಲ್ಲಿ ಯಾವಾಗ ಬೇಕಾದರೂ ಜಮೀನಿನ ಅಳತೆ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಯಾರ ಸಹಾಯವೂ ಇಲ್ಲದೆ ಮೊಬೈಲ್ ನಲ್ಲಿ ಡೌನ್ಲೋಡ್ ಹೇಗೆ ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ.
ಇಲ್ಲಿ ತಿಳಿಸಿದ ಸ್ಟೆಪ್ ಸ್ಟೆಪ್ ಪ್ರಕಾರ ನೀವು ಕೇವಲ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಜಮೀನಿನ ಅಳತೆಯನ್ನು ಮಾಡಬಹುದು.
ಹಿಂದೆ ಜಮೀನಿನ ಅಳತೆ ಮಾಡಲು ರೈತರು, ಸಾರ್ವಜನಿಕರು ಹಗ್ಗ, ಕೋಲುಗಳನ್ನು ಬಳಸುತ್ತಿದ್ದರು. ಇದಕ್ಕಾಗಿ ನಾಲ್ಕೈದು ಜನ ಬೇಕಾಗುತ್ತಿದ್ದರು. ಆದರೂ ಸಹ ನಿಖರವಾಗಿ ಅಳತೆ ಮಾಡಕ್ಕಾಗುತ್ತಿರಲಿಲ್ಲ. ಅಂದರೆ ಎಷ್ಟು ಫೀಟ್, ಮೀಟರ್ ಇದೆ ಎಂಬ ಅಳತೆ ಗೊತ್ತಾಗುತ್ತಿರಲಿಲ್ಲ. ಕೇವಲ ಅಂದಾಜಿನ ಪ್ರಕಾರ ಜಮೀನಿನ ಅಳತೆ ಮಾಡಲಾಗುತ್ತಿತ್ತು. ಆದರೆ ಈಗ ಯಾರ ಸಹಾಯವೂ ಇಲ್ಲದೆ ನಿಖರವಾದ ಅಳತೆ ಮಾಪನ ಸಿಗುತ್ತದೆ.
ಹೌದು, ಕಂದಾಯ ಇಲಾಖೆಯು ಅಭಿವೃದ್ಧಿ ಪಡಿಸಿದ ದಿಶಾಂಕ್ ಎಂಬ ಆ್ಯಪ್ ಸಹಾಯದಿಂದ ರೈತರು, ಸಾರ್ವಜನಿಕರು ತಮ್ಮ ಜಮೀನಿನ ಅಳತೆ ಮಾಡಬಹುದು. ಈ ಆ್ಯಪ್ ನ್ನು 1960ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಸಹಾಯದಿಂದ ರೈತರು ಯಾವುದೇ ಜಮೀನಿನ ಅಳತೆಯನ್ನು ಕೇವಲ ಒಂದೇ ನಿಮಿಷದಲ್ಲಿ ಮಾಡಬಹುದು.
Land Measurement ಜಮೀನಿನ ಅಳತೆ ಮಾಡುವಾಗ ಯಾವ ಯಾವ ಮಾಹಿತಿ ದೊರೆಯಲಿದೆ?
ರೈತರು ತಮ್ಮ ಜಮೀನಿನ ಅಳತೆ ಮಾಡುವುದರಿಂದ ತಮ್ಮ ಜಮೀನಿನಅಳತೆಯೊಂದಿಗೆ ತಮ್ಮ ಅಕ್ಕಪಕ್ಕದ ಜಮೀನಿನ ಅಳತೆ ತಿಳಿಯಬಹುದು. ಜಮೀನು ಒತ್ತುವರಿಯಾಗಿದ್ದರೆ ಎಷ್ಟು ಜಮೀನು ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನು ಇಲ್ಲೇ ಚೆಕ್ ಮಾಡಬಹುದು.
Land Measurement ರೈತರು ಮೊಬೈಲ್ ನಲ್ಲಿ ಜಮೀನಿನ ಅಳತೆ ಮಾಡುವುದು ಹೇಗೆ?
ರೈತರು ತಮ್ಮ ಮೊಬೈಲ್ ನಲ್ಲಿ ಜಮೀನಿನ ಅಳತೆ ಮಾಡಲು ಈ
https://play.google.com/store/apps/details?id=com.ksrsac.sslr&hl=en_IN&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ Dishaank ಆ್ಯಪ್ ಓಪನ್ ಆಗುತ್ತದೆ. ಅಲ್ಲಿ install ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಅಲೋ ದಿಶಾಂಕ್ ಟು ಅಕ್ಸೆಸ್ ದಿಸ್ ಡಿವೈಸ್ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಲ್ಲಿ ಜಿಪಿಎಸ್ ಆನ್ ಮಾಡಿಕೊಳ್ಳಬೇಕು. ಆಗ ನಿಮಗೆ ನಿಂತಿರುವ ಸ್ಥಳದ ಮಾಹಿತಿ ಅಲ್ಲಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಸರ್ವೆ ನಂಬರ್ ಕಾಣಿಸುತ್ತದೆ. ನಂತರ ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ನಂತರ ಅಲ್ಲಿ ಮಾಲಿಕರ ವಿವರಗಳು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಆ ಜಮೀನಿನ ಮಾಲಿಕರು ಯಾರ್ಯಾರು ಇದ್ದಾರೆ ಹಾಗೂ ಅಕ್ಕಪಕ್ಕದ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ.
ಇದನ್ನೂ ಓದಿ : Land map ನಿಮ್ಮಜಮೀನಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ 2024
ನಿಮಗೆ ಒಂದು ವೇಳೆ ನೀವು ನಿಂತಿರುವ ಸ್ಥಳದ ಪಾಯಿಂಟ್ ಕಾಣಿಸದಿದ್ದರೆ ಸರ್ವೆ ನಂಬರ್ ಹುಡುಕಿ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ನಮೂದಿಸಿದ ನೀವು ನಿಂತಿರುವ ಸ್ಥಳದ ಪಾಯಿಂಟ್ ಕಾಣಿಸುತ್ತದೆ.
ಅಲ್ಲಿ ಕಾಣಿಸುವ ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡಿ ಲೈನ್ ಆಯ್ಕೆ ಮಾಡಿಕೊಂಡು ಸರ್ವೆ ನಂಬರಿನ ಯಾವ ದಿಕ್ಕಿನಿಂದ ಅಳತೆ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ಕ್ಲಿಕ್ ಮಾಡಬೇಕು. ನಂತರ ಜಮೀನು ನಾಲ್ಕು ಮೂಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜಮೀನಿನ ಅಳತೆ ಪ್ರಕಾರಗಳು, ಮೀಟರ್, ಫೀಟ್, ಹೀಗೆ ಆಯ್ಕೆಗಳಿರುತ್ತವೆ. ಅದರಲ್ಲಿ ಯಾವುದರ ಮೂಲಕ ಅಳತೆ ಮಾಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಂಡು ಜಮೀನಿನ ಅಳತೆ ಮಾಡಬಹುದು.