Nabors Land detail : ರೈತರು ತಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನುಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರು ತಮ್ಮ ಜಮೀನು ಜಂಟಿಯಾಗಿದೆಯೋ ಇಲ್ಲವೋ ಹಾಗೂ ಅವರ ರೈತರ ಹೆಸರಿಗೆ ಇದೆಯೋ ಹೆಸರು ಸರಿಯಾಗಿ ಇದೆಯೋ ಯಾರ ಹೆಸರಿನಿಂದ ವರ್ಗಾವಣೆಯಾಗಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು.
ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಯಾರ ಸಹಾಯವೂ ಇಲ್ಲದೆ ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಸುತ್ತಮುತ್ತಲಿನ ಜಮೀನು ಯಾರ ಹೆಸರಿಗೆ ಯಾವಾಗ ವರ್ಗಾವಣೆಯಾಗಿದೆ? ಹಾಗೂ ಆ ಜಮೀನಿನ ಮೇಲೆ ಸಾಲವೆಷ್ಟಿದೆ ಎಂಬುದನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Nabors Land detail ನಿಮ್ಮ ಜಮೀನಿನ ಅಕ್ಕಪಕ್ಕದ ಜಮೀನು ಯಾರ ಹೆಸರಿಗಿದೆ?
ರೈತರು ತಮ್ಮಲ್ಲಿರುವ ಮೊಬೈಲ್ ನಲ್ಲಿ ತಮ್ಮ ಜಮೀನಿನ ಸುತ್ತಮುತ್ತಲಿನ ಜಮೀನು ಯಾರ ಹೆಸರಿಗೆದೆ ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/service53/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಜಮೀನಿನ ದಾಖೆಲಗಳ್ನು ಮೂರು ಪ್ರಕಾರವಾಗಿ ಚೆಕ್ ಮಾಡುವ ಆಯ್ಕೆಗಳು ಕಾಣಿಸುತ್ತವೆ. Survey No Wise ಹಾಗೂ Owner Wise ಮತ್ತು Registration Number Date ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ಸರ್ವೆ ನಂಬರ್ ವೈಸ್ ಆಯ್ಕೆ ಮಾಡಿಕೊಳ್ಳಬೇಕು.
ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಸರ್ವೆ ನಂಬರ್ ಹಾಕಬೇಕು. ನಂತರ ಸರ್ನೋಕ್ ನಲ್ಲಿ ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ( * ) ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮಗೆ ಮತ್ತೆ ಕೆಳಗಡೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು View Mutation Data ಮೇಲೆ ಕ್ಲಿಕ್ ಮಾಡಬೇಕು.
ಇದನ್ನು ಓದಿ : Land Measurement ನಿಮ್ಮ ಜಮೀನಿನ ಅಳತೆ ಮೊಬೈಲ್ ನಲ್ಲಿ ಹೀಗೆ ಮಾಡಿ 2024
ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಸರ್ವೆ ನಂಬರ್ ಅಡಿಯಲ್ಲಿ ಬರುವ ಹಿಸ್ಸಾ ನಂಬರ್ ಗಳಲ್ಲಿ ಏನೇನು ಬದಲಾವಣೆಯಾಗಿದೆ ಹಾಗೂ ಯಾವಾಗ ಬದಲಾವಣೆ ಯಾಗಿದೆ ಎಂಬುದರ ಬಗ್ಗೆ ಮಾಹಿತಿ ಕಾಣಿಸುತ್ತದೆ. ಅಂದರೆ ಜಮೀನು ಯಾವಾಗ ಮಾರಾಟವಾಗಿದೆ? ಜಮೀನು ಯಾವಾಗ ಪೋಡಿಯಾಗಿದೆ? ಎಂಬ ಮಾಹಿತಿ ಕಾಣಿಸುತ್ತದೆ.
Nabors Land detail ಅಕಪಕ್ಕದ ಜಮೀನಿನ ಮಾಲಿಕರ ವಿವರ
ಅದರ ಕೆಳಗಡೆ ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದಲ್ಲಿ ಯಾವ ಜಮೀನು ಮಾಲಿಕರು ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದಾರೆ? ಎಂಬ ಮಾಹಿತಿ ಕಾಣಿಸುತ್ತದೆ.
ನೀವು ನಮೂದಿಸಿದ ಜಮೀನಿನ ಸರ್ವೆ ನಂಬರ್ ಅಡಿಯಲ್ಲಿ ಯಾವ ಯಾವ ಜಮೀನಿನ ಮಾಲಿಕರು ಬರುತ್ತಾರೆ. ಅವರ ಹೆಸರು ತಂದೆಯ ಹೆಸರು ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಎಂಬಿತ್ಯಾದಿ ಮಾಹಿತಿಗಳನ್ನು ನೀವು ನೋಡಬಹುದು. ಇದರ ಕೆಳಗಡೆ ನಿಮ್ಮ ಜಮೀನಿನ ಮಾಹಿತಿಯೊಂದಿಗೆ ಅಕ್ಕಪಕ್ಕದ ಜಮೀನು ಯಾರ ಯಾರ ಹೆಸರಿನಲ್ಲಿದೆ? ಜಮೀನು ಜಂಟಿಯಾಗಿದೆಯೇ? ಜಂಟಿಯಾಗಿದ್ದರೆ ಎಷ್ಟು ಎಕರೆ ಜಮೀನು ಜಂಟಿಯಾಗಿದೆ ಎಂಬ ಮಾಹಿತಿ ಇರುತ್ತದೆ.
ಜಮೀನು ಜಂಟಿಯಾಗಿದ್ದರೆ ಎಷ್ಟು ಎಕರೆ ಜಂಟಿಯಾಗಿದೆ ಎಂಬುದರ ಮಾಹಿತಿಯನ್ನು ಚೆಕ್ ಮಾಡಬಹುದು. ಇದರೊಂದಿಗೆ ಜಮೀನಿನಲ್ಲಿ ಬೆಳೆದ ಬೆಳೆ ಮಾಹಿತಿ ಚೆಕ್ ಮಾಡಬಹುದು. ಮುಂಗಾರು ಹಿಂಗಾರು ಬೆಳೆಯ ವಿವರವನ್ನು ಚೆಕ್ ಮಾಡಬಹುದು.