Bele vime hana bidugade ಈ ಜಿಲ್ಲೆಯ ರೈತರಿಗೆ 284 ಕೋಟಿ ಬೆಳೆ ವಿಮೆ ಹಣ ಬಿಡುಗಡೆ

Written by Admin

Published on:

Spread the love

Bele vime hana bidugade : ರೈತರಿಗೆ ಗುಡ್ ನ್ಯೂಸ್. ಯುಗಾದಿ ಹಬ್ಬಕ್ಕೆ ರೈತರಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಿದೆ.

ಹೌದು, ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸದ ರೈತರ ಖಾತೆಗೆ 284 ಕೋಟಿರೂಪಾಯಿ ಬೆಳೆ ವಿಮೆ ಹಣ ಬಿಡುಗಡೆಯಾಗಿದೆ. ಹಾಗಾದರೆ ಯಾವ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆಯಾಗಿದೆ ಯಾವ ರೈತರ ಖಾತೆಗೆ ವಿಮೆ ಹಣ ಜಮೆಯಾಗಿದೆ? ಬೆಳೆ ವಿಮೆ ಹಣ ಜಮೆಯಾಗಿದ್ದನ್ನು ರೈತರು ಎಲ್ಲಿ ಚೆಕ್ ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ.

belevime bidugade

ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಆಗಿದೆ. ಯುಗಾದಿ ಹಬ್ಬದ ಒಂದೇ ದಿನ ಮೊದಲು ಬೆಳೆ ವಿಮೆ ಹಣ ಬಿಡಗಡೆಯಾಗಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

87 ಸಾವಿರ ರೈತರಿಗೆ 284 ಕೋಟಿ ರೂಪಾಯಿ ಮುಂಗಾರು ಹಂಗಾಮಿನ ಬೆಳೆ ವಿಮೆ ಹಣ ಬಿಡುಗಡೆಯಾಗಿದೆ.  ಯಾವ ಯಾವ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡಗಡೆಯಾಗಿದೆ ಇಲ್ಲೇ ಚೆಕ್ ಮಾಡಬಹುದು.

Bele vime hana bidugade  ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ

2023-24 ನೇ ಸಾಲೀನ ಮುಂಗಾರು ಹಂಗಾಮಿನ ಬೆಳೆ ವಿಮೆ ಹಣ ಜಮೆಯಾಗಿದೆಯೋಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು 2023-24 ರ ಕೆಳಗಡೆ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.  ಫಾರ್ಮರ್ಸ್ ಕಾಲಂ ಕೆಳಗಡೆ ಕಾಣುವ Check Status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊದು ಪೇಜ್ ತೆರೆದುಕೊಳ್ಳುತ್ತದೆ.

ರೈತರು ಇಲ್ಲಿ ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಬೆಳೆ ವಿಮೆ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತಾರೋ ಆ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ಮೇಲೆ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಒಂದು ವೇಳೆ ಕ್ಯಾಪ್ಚ್ಯಾ ಕೋಡ್ ಸರಿಯಾಗಿ ಕಾಣಿಸದಿದ್ದರೆ ರಿಫ್ರೆಶ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಕ್ಯಾಪ್ಚ್ಯಾ ಕೋಡ್ ಅಪ್ಡೇಟ್ ಆಗುತ್ತದೆ. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.

Bele vime hana bidugade  ರೈತರಿಗೆ ವಿಮೆ ಹಣ – ಜಿಲ್ಲಾಧಿಕಾರಿಗೆ ಅಭಿನಂದನೆ

bele vime

ಲೋಕಸಭಾ ಚುನಾವಣೆ ಕೆಲಸದ ಒತ್ತಡದಲ್ಲಿದ್ದರೂ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಬರಬೇಕಿದ್ದ ವಿಮಾ ಹಣವನ್ನು ಕೊಡಿಸುವಲ್ಲಿ ಮುಂದಾಗಿರುವುದು ರೈತ ಸಮುದಾಯಕ್ಕೆ ಹೆಮ್ಮೆ ತಂದಿದೆ.

ವಿಮೆ ಹಣ ರೈತರ ಖಾತೆಗೆ ಜಮಾ ಮಾಡಿಸುವಲ್ಲಿ ಅವರು ಮುಂದಾಗಿರುವುದು ಸಂತಸದಾಯಕವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ ಹಾಗೂ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಇವರಿಗೆ ಹಸಿರು ಶಾಲು ಹೊದಿಸಿ ಅಭಿನಂದಿಸಲಾಯಿತು.

ಇದನ್ನೂ ಓದಿ Land Old Pahani ನಿಮ್ಮ ಜಮೀನಿನ 20 ವರ್ಷ ಹಳೆಯ ಪಹಣಿ ಮೊಬೈಲ್ ನಲ್ಲೇ ಚೆಕ್ ಮಾಡಿ

2023-24 ನೇ ಸಾಲಿನ ಮುಂಗಾರಿನನಲ್ಲಿ ರೈತರು ವಿಮಾ ಕಂಪನಿಗಳಿಗೆ 15 ಕೋಟಿ ರೂಪಾಯಿ ವಿಮೆ ಹಣ ಪಾವತಿಸಿದ್ದರು. ಮಳೆ ಬಾರದೆ  ಸಂಪೂರ್ಣ ಬೆಳೆ ನಾಶವಾದ ಹಿನ್ನೆಲೆಯಲ್ಲಿ ರೈತರು ಬೆಳೆ ವಿಮೆ ಹಣ ನೀಡುವಂತೆ ಮನವಿ ಮಾಡಿದ್ದರು.

ಚಿತ್ರದುರ್ಗ ಜಿಲ್ಲೆಯ 87 ಸಾವಿರ ರೈತರಿಗೆ 284 ಕೋಟಿ ರೂಪಾಯಿ ಹಣ ಸಂದಾಯವಾಗಿದೆ. ಇದರಿಂದ ಸಂತಸಗೊಂಡ ರೈತರು ಅಭಿನಂದಸಿ ಉಳಿದವರಿಗೆ ವಿಮಾ ಹಣ ಕೊಡಿಸುವಂತೆ ಮನವಿ ಸಲ್ಲಿಸಿದರು.

Leave a Comment