Weather forecast : ಇಂದಿನಿಂದ 6 ದಿನ ಈ ಜಿಲ್ಲೆಗಳಲ್ಲಿ ಮಳೆ

Written by Admin

Published on:

Spread the love

Weather forecast: ರಾಜ್ಯದ ವಿವಿಧೆಡೆ ಮುಂದಿನ ಆರು ದಿನಗಳ ಕಾಲ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Six days rain ಯಾವ ಯಾವ ಜಿಲ್ಲೆಗಳಲ್ಲಿ ಮಳೆ

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರಡವಾ, ಕೊಡಗು, ಹಾವೇರಿ, ಮೈಸೂರು, ಮಂಡ್ಯ,ಸ ಚಿಕ್ಕಮಗಳೂರು, ಜಿಲ್ಲೆಯಲ್ಲಿ ಒಂದೆರಡು ಕಡೆ ಗುರುವಾರ ಮಳೆಯಾಗುವ ಸಾಧ್ಯತೆಯಿದೆ.

weather forecast

ಕೋಲಾರ ಜಿಲ್ಲೆ ಹೊರತುಪಡಿಸಿ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಜಿಲ್ಲೆಗಳಲ್ಲಿ ಶನಿವಾರದಿಂದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿಯೂ ಒಂದೆರಡು ಕಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದೇ ಏಪ್ರೀಲ್ 15 ರವರೆಗೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳು ರಾಜ್ಯದಲ್ಲಿ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಿಲ್ಲಎಂದು ಇಲಾಖೆ ಹೇಳಿದೆ.

ಬಿಸಿಲಿನ ಝಳಕ್ಕೆ ತತ್ತರಿಸುತ್ತಿರುವ ಜನತೆ

ಕಳೆದ 15 ದಿನಗಳಿಂದ ರಾಜ್ಯದ ಎಲ್ಲಾ ಕಡೆ ಬಿಸಿಲಿನ ಝಳ ಹೆಚ್ಚಾಗಿದೆ. ಬೆಳಗ್ಗೆ 9 ಗಂಟೆಯಿಂದಲೇ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗ್ಗೆ ಹೊತ್ತಲ್ಲೇ ಹೊರಗಡೆ ಕೆಲಸ ಮುಗಿಸಿ ಬಂದರೂ ಸಹ ಮನೆಯ ಛಾವಣೆಯೂ ಕಾದು ಕೆಂಪಾಗಿರುತ್ತದೆ.  ಮನೆಯ ಸುತ್ತಮುತ್ತಲಿನ ಗೋಡೆಗಳು ಬಿಸಲಿಗೆ ಕಾದಿರುತ್ತವೆ.

ಫ್ಯಾನ್ ಗಾಳಿಯಲ್ಲಿ ಕೂಡಪ್ಲೇಇಲ್ಲ, ಇಂತಹ ಬಿಸಿ ಗಾಳಿ ಬೀಸುತ್ತಿರುತ್ತದೆ. ರಾತ್ರಿ ಹೊತ್ತಾದರೂ ತಂಪಾದ ಗಾಳಿ ಬೀಸುತ್ತದೆ ಎಂದು ಭಾವಿಸಿದ್ದರೆ ಇಡೀ ರಾತ್ರಿ ಫ್ಯಾನಿನ ಬಿಸಿ ಗಾಳಿಗೆ ನಿದ್ದೆಯೇ ಬರುತ್ತಿಲ್ಲ.  ಹಾಗಾಗಿ ರಾತ್ರಿ ಹೊತ್ತಲ್ಲಿಯೂ ಸಹ ಫ್ಯಾನಿನ ಬಿಸಿಗಾಳಿಯಲ್ಲಿ ನಿದ್ದೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ Job card list ನಲ್ಲಿ ನಿಮ್ಮ ಹೆಸರಿದೆಯೇ ಮೊಬೈಲ್ ನಲ್ಲೇ ಚೆಕ್ ಮಾಡಿ 2024

ಎಸಿ, ಕೂಲರ್ ಇದ್ದರೆ ಮಾತ್ರ ಸ್ವಲ್ಪ ನೆಮ್ಮದಿಯ ನಿದ್ದೆ ಬರುತ್ತದೆ. ಕಳೆದ ವರ್ಷ ಏಪ್ರೀಲ್ ತಿಂಗಳಲ್ಲಿ ಒಂದೆರಡು ಮಳೆಯಾಗಿತ್ತು. ಹಾಗಾಗಿ ಇಷ್ಟೊಂದು ಪ್ರಮಾಣದಲ್ಲಿ ಬಿಸಿಲು ಇರಲಿಲ್ಲ. ಆದರೆ ಈ ವರ್ಷ ಮಾರ್ಚ್ ತಿಂಗಳಿಂದಲೇ ಸೆಖೆ ಹೆಚ್ಚಾಗಿದೆ.  ಮುಂಗಾರು ಮಳೆ ಕೈಕೊಟ್ಟಿರುವುದರೊಂದಿಗೆ ಹಿಂಗಾರು ಹಂಗಾಮಿಗೂ ಹನಿ ನೀರಿಲ್ಲ. ಹೀಗಾಗಿ ಪ್ರಸಕ್ತ ವರ್ಷ ಬಿಸಿಲಿನ ತಾಪ ಹೆಚ್ಚಾಗಿದೆ.

Weather forecast ನಿಮ್ಮೂರಿನಲ್ಲಿ ಮಳೆಯಾಗುವುದೇ?

ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತದೆ ಎಂಬ ಮಾಹಿತಿ ಕೇಳಲು ರೈತರು,ಸಾರ್ವಜನಿಕರು ಈಗ ಮನೆಯಲ್ಲಿಯೇ ಕುಳಿತು ಮಳೆ ಮಾಹಿತಿ ಪಡೆಯಬಹುದು. ಹೌದು, ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು,  ನಿಮಗೆ ನಿಮ್ಮೂರಿನ ಸುತ್ತಮುತ್ತ ಮಳೆ ಯಾವಾಗ ಬರುತ್ತದೆ ಎಂಬ ಮಾಹಿತಿ ಸಿಗುತ್ತದೆ.  ಇನ್ನೇಕೆ ತಡೆ ಮುಂದಿನ ನಾಲ್ಕೈದು ದಿನ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ಈಗಲೇ ವಿಚಾರಿಸಿಕೊಳ್ಳಿ. ಮಳೆಯ ಮಾಹಿತಿ ಪಡೆದು ನೀವು ಪ್ಲ್ಯಾನ್ ಹಾಕಿಕೊಳ್ಳಬಹುದು.

rain alert in karnataka

ಮಳೆಯ ಮಾಹಿತಿ ನೀಡಲು ಆ್ಯಪ್ ಗಳಿವೆ

ಹೌದು, ಮೂರ್ನಾಲ್ಕು ದಿನ ಮೊದಲೇ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ರಾಜ್ಯ ಕೇಂದ್ರ ಸರ್ಕಾರಗಳು ಆ್ಯಪ್ ನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಸಹಾಯದಿಂದ ಸಾರ್ವಜನಿಕರು ಮಳೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

Weather forecast ಮೇಘದೂತ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ ಮಳೆಯ ಮಾಹಿತಿ ಪಡೆಯಿರಿ

ಮೇಘದೂತ್ ಎಂಬ ಆ್ಯಪ್ ನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಂಡರೆ ಸಾಕು, ಐದು ದಿನ ಮೊದಲು ನಿಮ್ಮ ಊರಿನ ಸುತ್ತಮುತ್ತ ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ. ಗಾಳಿಯಾ ಯಾವ ದಿಕ್ಕಿನಿಂದ ಯಾವ ದಿಕ್ಕಿನ ಕಡೆ ಬೀಸುತ್ತದೆ? ಗಾಳಿಯ ವೇಗ ಎಷ್ಟಿದೆ  ಎಂಬ ಮಾಹಿತಿಯೂ ಸಿಗುತ್ತದೆ? ನಿಮ್ಮ ಮೊಬೈಲ್ ನಲ್ಲಿ ಒಮ್ಮೆ ಆ್ಯಪ್ ಇನಸ್ಟಾಲ್ ಮಾಡಿಕೊಂಡರೆ ಸಾಕು, ನೀವು ಆಗಾಗ ಮಳೆಯ ಮಾಹಿತಿ ಪಡೆದುಕೊಳ್ಳಬಹುದು.

ಮೇಘದೂತ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಅಧವಾ ಈ ಮೇಘದೂತ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.

Leave a Comment