Parihara payment Report : ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಆಧಾರ್ ನಂಬರ್ ಹಾಕಿ ತಮಗೆ ಎಷ್ಟು ಬರ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.
ಹೌದು, ರೈತ ಮಿತ್ರರೆ, ನೀವು ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಆಧಾರ್ ನಂಬರ್ ಹಾಕಿ ತಮಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವತಿಯಿಂದ ಬಿಡುಗಡೆಯಾದ ಹಣ ಎಷ್ಟು ಜಮೆ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Parihara payment Report ಆಧಾರ್ ನಂಬರ್ ಹಾಕಿ ಬರ ಪರಿಹಾರ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಆಧಾರ್ ನಂಬರ್ ಹಾಕಿ ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಲು ಈ
https://parihara.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪರಿಹಾರ ಹಣ ಸಂದಾಯ ವರದಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Select Calamity Type ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. ನಂತರ Select Year Type 2023-24 ಆಯ್ಕೆಮಾಡಿಕೊಳ್ಳಬೇಕು. Enter Valid 12 Digit Aadhar ನಲ್ಲಿ ನಿಮ್ಮ ಆಧಾರ್ ನಂಬರ್ ಹಾಕಬೇಕು. ನಂತರ Enter Captcha ನಲ್ಲ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ವಿವರಗಳನ್ನು ಪಡೆಯಲು / Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಯಾವ ಬ್ಯಾಂಕಿಗೆ ಎಷ್ಟು ಹಣ ಜಮಯಾಗಿದೆ.ಯಾವ ದಿನಾಂಕದಂದು ಹಣ ಜಮೆಯಾಗಿದೆ.
ಒಂದು ವೇಳೆ ಬರ ಪರಿಹಾರ ಹಣ ಜಮೆಯಾಗಿಲ್ಲವಾದರೆ ನಿಮಗೆ ಹಣ ಸಂದಾಯವಾಗಿಲ್ಲ Payment not Made ಎಂಬ ಸಂದೇಶ ಕಾಣಿಸುತ್ತದೆ.
Parihara payment Report ಬರ ಪರಿಹಾರ ಸೋಮವಾರದ ಒಳಗಾಗಿ ನಿರ್ಧಾರ
ರಾಜ್ಯದ ಬರ ಪರಿಹಾರದ ಬೇಡಿಕೆಗೆ ಸಂಬಂಧಿಸಿದ ಕೇಂದ್ರ ಸರ್ಕಾರ ಮುಂದಿನ ಸೋಮವಾರದ ಒಳಗಾಗಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ.
ಕರ್ನಾಟಕ ವಿಪರೀತ ಬರಗಾಲ ಎದುರಿಸಿದ್ದಲ್ಲದೆ ಹಲವಾರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಕೇಂದ್ರ ತಂಡ ಕೂಡ ಕರ್ನಾಟಕಕ್ಕೆ ಬಂದು ಅಧ್ಯಯನ ನಡೆಸಿತ್ತು. ಆದರೆ ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸಿ, ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಸಂಬಂಧಿಸಿ, ಕೇಂದ್ರ ಅಟಾರ್ನಿ ಜನರಲ್ (ಎಜಿ) ಸುಪ್ರಿಂಕೋರ್ಟ್ ಗೆ ಅಧಿಕೃತ ಹೇಳಿಕೆ ನೀಡಿರುವುದರಿಂದ ಕೇಂದ್ರದಿಂದ ಪರಿಹಾರ ಪ್ರಮಾಣ ಪ್ರಕಟವಾಗುವ ನಿರೀಕ್ಷೆ ಹೆಚ್ಚಿದೆ.
ಪ್ರಕರಣಕ್ಕೆ ಸಂಬಂಧಿಸಿ ಕ್ರಮಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಸಮ್ಮತಿ ನೀಡಿದೆ. ಹೀಗಾಗಿ ಯಾವುದೇ ವಾದ – ಪ್ರತಿವಾದ ಮಂಡನೆಯ ಅಗತ್ಯವಿಲ್ಲ ಎಂದು ನ್ಯಾ.ಬಿ.ಆರ್. ಗವಾಯಿ ನೇತೃತ್ವದ ದ್ವಿಸದಸ್ಯ ಪೀಠಕ್ಕೆ ತಿಳಿಸಿದ ಅಟಾರ್ನಿ ಜನರಲ್ ವೆಂಕಟರಮಣಿ ಮುಂದಿನ ಸೋಮವಾರದ ಒಳಗಾಗಿ ಇದಕ್ಕೆ ಸಂಬಂಧಿಸಿದಂತೆ ಒಂದು ನಿರ್ಧಾರ ಹೊರಬೀಳಲಿದೆ. ಹೀಗಾಗಿ ಸೋಮವಾರಕ್ಕೆ ವಿಚಾರಣೆ ನಿಗದಿಪಡಿಸಬಹುದು ಎಂದು ಕೋರಿದರು. ಕರ್ನಾಟಕ ಬರ ಪರಿಹಾರ ವಿಚಾರ ಸಂಬಂಧ ಒಂದು ವಾರದೊಳಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ವೆಂಕಟರಮಣಿ ಅವರು ಸೋಮವಾರ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : DBT status ಯಾವ ಯೋಜನೆಯಿಂದ ನಿಮಗೆಷ್ಟು ಹಣ ಜಮೆ? ಇಲ್ಲೇ ಚೆಕ್ ಮಾಡಿ 2024
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಅನುದಾನ ಬಿಡುಗಡೆ ಅಥವಾ ಯೋಜನೆಗಳ ಬಗ್ಗೆ ಸರ್ಕಾರಗಳು ಯಾವುದೇ ಘೋಷಣೆ ಮಾಡುವಂತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸಿದ ಬಳಿಕ ಈ ಹೇಳಿಕೆಯನ್ನು ಸುಪ್ರಿಂ ಕೋರ್ಟ್ ಮುಂದಿಟ್ಟಿದೆ. ಸುಮಾರು 17 ಸಾವಿರ ಕೋಟಿ ರೂಪಾಯಿ ಪರಿಹಾರದ ಬೇಡಿಕೆಯನ್ನುರಾಜ್ಯ ಕೇಂದ್ರದ ಮುಂದಿಟ್ಟಿದೆ.
Bele parihara