Bara Parihara amount ಬರ ಪರಿಹಾರ ಯಾರಿಗೆ ಎಷ್ಟು ಜಮೆ? ಮೊಬೈಲ್ ನಲ್ಲೇ ಚೆಕ್ ಮಾಡಿ 2024

Written by Admin

Updated on:

Spread the love

Bara Parihara amount ಬರಗಾಲ ಪರಿಹಾರ ಹಣ ಯಾವ ರೈತರಿಗೆ ಎಷ್ಟು ಜಮೆಯಾಗಿದೆ? ತಮಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈಗ ರೈತರು ಎಲ್ಲಿಯೂ ಹೋಗಬೇಕಿಲ್ಲ.

ಹೌದು, ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಕೇವಲ ಒಂದೇ ನಿಮಿಷದಲ್ಲಿ ಯಾರ ಸಹಾಯವೂ ಇಲ್ಲದೆ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Bara Parihara money

Bara Parihara amount  ಬರಗಾಲ ಪರಿಹಾರ ಯಾರಿಗೆ ಎಷ್ಟು ಜಮೆಯಾಗಿದೆ? ಹೀಗೆ ಚೆಕ್ ಮಾಡಿ

ರಾಜ್ಯದ ರೈತರಿಗೆ ಚುನಾವಣೆ ಸಂದರ್ಭದಲ್ಲಿಯೇ ಬರಗಾಲ ಪರಿಹಾರ ಹಣ ಕೇಂದ್ರ ಸರ್ಕಾರದ ವತಿಯಿಂದ ಬಿಡುಗಡೆಯಾಯಿತು. ಈ ಹಿಂದೆ ರಾಜ್ಯ ಸರ್ಕಾರದ ವತಿಯಿಂದ 2 ಸಾವಿರ ರೂಪಾಯಿ ರೈತರ ಖಾತೆಗೆ ಜಮೆಯಾಗಿತ್ತು.ಈಗ ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿದ ಹಣವನ್ನು ಸಹ ಈಗ ರೈತರ ಖಾತೆಗೆ ಜಮೆ ಮಾಡಲಾಗಿದೆ.

ಬರಗಾಲ ಪರಿಹಾರ ಜಮೆಯಾಗಿರುವುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು ಆಯ್ಕೆ ಮಾಡಿ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ವಿಪತ್ತು ಆಯ್ಕೆ ಮಾಡಿ ಬರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು.

Bara Parihara amount   ಸರ್ವೆ ನಂಬರ್ ನಮೂದಿಸಿ ಬರಗಾಲ ಪರಿಹಾರ ಜಮೆ ಚೆಕ್ ಮಾಡಿ

ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ಸರ್ ನಾಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ Village map ಈ ಮ್ಯಾಪ್ ನಲ್ಲಿ ಜಮೀನಿಗೆ ಹೋಗುವ, ಬಂಡಿದಾರಿ, ಕಾಲುದಾರಿ ಚೆಕ್ ಮಾಡಿ 2024

ಆಗ ನಿಮ್ಮ ಆಧಾರ್ ಸಂಖ್ಯೆ ಕೊನೆಯ ನಾಲ್ಕು ಅಂಕಿಗಳು ಕಾಣಿಸುತ್ತವೆ. ಅದರ ಮುಂದುಗಡೆ ಎಫ್ಐಡಿ ಸಂಖ್ಯೆಗಳು ಕಾಣಿಸುತ್ತವೆ  ನಿಮ್ಮ ಆಧಾರ್ ಕಾರ್ಡ್ ಕೊನೆಯ ಸಂಖ್ಯೆಯಿರುವ ಹಿಂದಿರುವ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮಗೆ ಯಾವ ಬ್ಯಾಂಕಿಗೆ ಎಷ್ಟು ಹಣ ಜಮೆಯಾಗಿದೆಎಂಬ ಮಾಹಿತಿ ಕಾಣಿಸುತ್ತದೆ.  ರಾಜ್ಯಸರ್ಕಾರವು ಬಿಡುಗಡೆಗೊಳಿಸಿದ ತಾತ್ಕಾಲಿಕ 2 ಸಾವಿರ ರೂಪಾಯಿ ಜಮೆಯ ಮಾಹಿತಿ ಸಹ ಇಲ್ಲೇ ಕಾಣಿಸುತ್ತದೆ.

baragala compensation

Bara Parihara amount  ಯಾವ ಬೆಳೆಗೆ ಎಷ್ಟು ಬರ ಪರಿಹಾರ ಜಮೆ?

ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಯಾವ ಬೆಳೆಗೆ  ಎಷ್ಟು ಪರಿಹಾರ ಜಮೆ?

ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್ (ಗರಿಷ್ಠ ಎರಡು ಹೆಕ್ಟೇರ್ ಗೆ) ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ಮಳೆಯಾಶ್ರಿತ / ಖುಷ್ಕಿ ಬೆಳೆಗೆ 8500 ರೂಪಾಯಿ ನಿಗದಿಪಡಿಸಲಾಗಿದೆ. ನೀರಾವರಿ ಬೆಳೆಗೆ 17000 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೂ ಬಹುವಾರ್ಷಿಕ /  ತೋಟಗಾರಿಕೆ ಬೆಳೆಗಳಿಗೆ 22500 ರೂಪಾಯಿವರೆಗೆ ಪರಿಹಾರ ನೀಡಲು ನಿಗದಿಪಡಿಸಲಾಗಿದೆ.

Bara Parihara amount  ಬರಗಾಲ ಪರಿಹಾರ ಜಮೆಯಾಗದಿದ್ದರೆ ರೈತರೇನು ಮಾಡಬೇಕು?

ರೈತರಿಗೆ ಬರಗಾಲ ಪರಿಹಾರ ಹಣ ಜಮೆಯಾಗದಿದ್ದರೆ ಕೂಡಲೇ ನಿಮ್ಮ ಗ್ರಾಮ ಪಂಚಾಯತಿಗೆ ಮಾಹಿತಿ ನೀಡಬೇಕು.ಏಕೆಂದರೆ ಗ್ರಾಮ ಪಂಚಾಯತಿಯಿಂದ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿಗಳನ್ನು ಅಪ್ಲೋಡ್ ಮಾಡಲಾಗುವುದು.

ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದೆಯೇ?

ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇರಲೇಬೇಕು. ರೈತರ ಹೆಸರಿಗೆ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ಅವರಿಗೆ ಬರಗಾಲ ಪರಿಹಾರ ಹಣ ಜಮೆ ಮಾಡಲಾಗುವುದು. ಯಾವ ರೈತರ ಹೆಸರಿಗೆ ಫ್ರೂಟ್ಸ್ ಐಡಿ ಇಲ್ಲವೋ ಅವರಿಗೆ ಬರ ಪರಿಹಾರ ಹಣ ಜಮೆಯಾಗುವುದಿಲ್ಲ. ಯಾರ ಹೆಸರಿಗೆ ಫ್ರೂಟ್ಸ್ ಐಡಿ ಇಲ್ಲವೋ ಕೂಡಲೇ ಅವರು ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬೇಕು.

1 thought on “Bara Parihara amount ಬರ ಪರಿಹಾರ ಯಾರಿಗೆ ಎಷ್ಟು ಜಮೆ? ಮೊಬೈಲ್ ನಲ್ಲೇ ಚೆಕ್ ಮಾಡಿ 2024”

Leave a Comment