Belehani parihara ಈ ರೈತರ ಖಾತೆಗೆ 360 ಕೋಟಿ ಬರ ಪರಿಹಾರ ಜಮೆ ನಿಮಗೆಷ್ಟು ಜಮೆ? ಇಲ್ಲೇ ಚೆಕ್ ಮಾಡಿ

Written by Admin

Updated on:

Spread the love

Belehani parihara : 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಹಾನಿಯಾದ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ.

ಹೌದು, ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳ ರೈತರ ಖಾತೆಗೆ ಹಂತ ಹಂತವಾಗಿ ಬರ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ. ಯಾವ ಯಾವ ಜಿಲ್ಲೆಯ ರೈತರಿಗೆ ಬರ ಪರಿಹಾರ ಜಮೆ ಮಾಡಲಾಗಿದೆ. ಯಾವ ಯಾವ ತಾಲೂಕಿನ ರೈತರ ಖಾತೆಗೆ ಜಮೆ ಎಷ್ಟೆಷ್ಟು ಬರ ಪರಿಹಾರ ಹಣ ಜಮೆ ಮಾಡಲಾಗಿದೆ? ತಮ್ಮ ಖಾತೆಗೆ ಎಷ್ಟು ಬರಗಾಲ ಪರಿಹಾರ ಹಣ ಜಮೆ ಮಾಡಲಾಗಿದೆ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Belehani parihara

ವಿಜಯಪುರ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಅರ್ಹ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತಿದೆ.  ಈವರೆಗೆ ವಿಜಯಪುರ ಜಿಲ್ಲೆಯ ರೈತರ ಖಾತೆಗೆ 2,59,063 ರೈತರ ಖಾತೆಗಳಿಗೆ 360 ಕೋಟಿ ರೂಪಾಯಿ ಬರ ಪರಿಹಾರ ಜಮೆ ಮಾಡಲಾಗಿದೆ. ಬರ ಪರಿಹಾರ ಧನ ಜಮೆಯಾದ ಬಗ್ಗೆ ಪರಿಹಾರ ಜಾಲತಾಣದ ವೆಬ್ಸೈಟ್ ನಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.

Belehani parihara ಯಾವ ತಾಲೂಕಿನ ರೈತರಿಗೆ ಎಷ್ಟು ಬರ ಪರಿಹಾರ ಜಮೆ ಮಾಡಲಾಗಿದೆ?

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ 19295 ಫಲಾನುಭವಿಗಳ ಪೈಕಿ 18186 ರೈತರ ಖಾತೆಗಳಿಗೆ 3545.24 ಲಕ್ಷ, ಬಬಲೇಶ್ವರ ತಾಲೂಕಿನ 20020 ಫಲಾನುಭವಿಗಳ ಪೈಕಿ 19294 ರೈತರ ಖಾತೆಗಳಿಗೆ 3136 ಲಕ್ಷ ರೂಪಾಯಿ ಜಮೆ ಮಾಡಲಾಗಿದೆ. ಲಕ್ಷ ಬಸವನಬಾಗೇವಾಡಿ ತಾಲೂಕಿನ 27174 ಫಲಾನುಭವಿಗಳ ಪೈಕಿ 25307 ರೈತರ ಖಾತೆಗಳಿಗೆ  3346 ಲಕ್ಷ, ಬಿಜಾಪುರ ತಾಲೂಕಿನ 18912 ಫಲಾನುಭವಿಗಳ ಪೈಕಿ 17743 ರೈತರ ಖಾತೆಗಳಿಗೆ 2388 ಲಕ್ಷ, ಚಡಚಣ ತಾಲೂಕಿನ 19840 ಫಲಾನುಭವಿಗಳ ಪೈಕಿ 18409 ರೈತರ ಖಾತೆಗೆ 2497 ಲಕ್ಷ ರೂಪಾಯಿ, ದೇವರಹಿಪ್ಪರಗಿ ತಾಲೂಕಿನ 21088 ಫಲಾನುಭವಿಗಳ ಪೈಕಿ 19452 ರೈತರ ಖಾತೆಗೆ 2295 ಲಕ್ಷ ರೂಪಾಯಿ ಜಮೆ ಮಾಡಲಾಗಿದೆ.

ಇದನ್ನೂ ಓದಿ Crop insurance amount ಹಣ ಬಿಡುಗಡೆ: ನಿಮಗೆಷ್ಟು ಜಮೆ? ಮೊಬೈಲ್ ನಲ್ಲೇ ಚೆಕ್ ಮಾಡಿ 2024

ಇಂಡಿ ತಾಲೂಕಿನ 45542 ಫಲಾನುಭವಿಗಳ ಪೈಕಿ 42320 ರೈತರ ಖಾತೆಗೆ 6471 ಲಕ್ಷ, ಕೋಲಾರ ತಾಲೂಕಿನ 10336 ಫಲಾನುಭವಿಗಳ ಪೈಕಿ 9783 ರೈತರ ಖಾತೆಗೆ 1919 ಲಕ್ಷ, ಮುದ್ದೇಬಿಹಾಳ ತಾಲೂಕಿನ 21860 ಫಲಾನುಭವಿಗಳ ಪೈಕಿ 20035 ರೈತರ ಖಾತೆಗೆ 2569 ಲಕ್ಷ, ನಿಡಗುಂದಿ ತಾಲೂಕಿನ 7785 ಫಲಾನುಭವಿಗಳ ಪೈಕಿ 23324 ರೈತರ ಖಾತೆಗೆ 3387 ಲಕ್ಷ, ತಾಳಿಕೋಟೆ ತಾಲೂಕಿನ 20516 ಫಲಾನುಭವಿಗಳ ಪೈಕಿ 19418 ರೈತರ ಖಾತೆಗೆ 2147 ಲಕ್ಷ, ತಿಕೋಟಾ ತಾಲೂಕಿನ 10149 ಫಲಾನುಭವಿಗಳ ಪೈಕಿ9526 ರೈತರ ಖಾತೆಗೆ 1146 ಲಕ್ಷ ರೂಪಾಯಿ ಜಮೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Belehani parihara ನಿಮ್ಮ ಖಾತೆಗೆ ಬರ ಪರಿಹಾರ ಜಮೆಯಾಗಿದೆಯೇ? ಇಲ್ಲೇ ಚೆಕ್ ಮಾಡಿ

ನಿಮ್ಮ ಖಾತೆಗೆ ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು  ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಚೆಕ್ ಮಾಡಲು ಈ

https://parihara.karnataka.gov.in/service92/       

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಬರ ಪರಿಹಾರ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು  ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ವಿಪತ್ತು ಮಾಡಿ ಬರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು.

bele hani

ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ಸರ್ ನಾಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆಗೆ Belehani parihara ಹಣ ಜಮೆಯಾಗಿರುವ ಮಾಹಿತಿ ಕಾಣಿಸುತ್ತದೆ.

1 thought on “Belehani parihara ಈ ರೈತರ ಖಾತೆಗೆ 360 ಕೋಟಿ ಬರ ಪರಿಹಾರ ಜಮೆ ನಿಮಗೆಷ್ಟು ಜಮೆ? ಇಲ್ಲೇ ಚೆಕ್ ಮಾಡಿ”

Leave a Comment