Insurance : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ನಿಮ್ಮೂರಿನಲ್ಲಿ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬುದನ್ನು ರೈತರು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ಹೌದು, 2024-25 ನೇ ಸಾಲಿಗೆ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಳೆ ವಿಮೆ ಮಾಡಿಸಲು ಕೆಲವು ಬೆಳೆಗಳಿಗೆ 30 ದಿನಗಳಿದ್ದರೆ ಇನ್ನೂ ಕೆಲವು ಬೆಳೆಗಳಿಗೆ 50 ಕ್ಕಿಂತ ಹೆಚ್ಚು ದಿನಗಳು ಬಾಕಿ ಇವೆ. ಈ ದಿನಾಂಕದೊಳಗೆ ರೈತರು ಬೆಳೆ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆದುಕೊಳ್ಳಲು ಕೋರಲಾಗಿದೆ.
Insurance ನಿಮ್ಮೂರಿನಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು?
ರೈತರು ತಮ್ಮೂರಿನಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/Premium/Crops_You_Can_Insure.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಒಂದು ವೇಳೆ ಈ ಮೇಲಿನ ಲಿಂಕ್ ಓಪನ್ ಆಗದಿದ್ದರೆ ನೀವು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ 2024-2025 ಆಯ್ಕೆ ಮಾಡಿಕೊಳ್ಳಬೇಕು.ನಂತರ ಋತು ಆಯ್ಕೆಯಲ್ಲಿ Kharif ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ Crop you can Insure ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗಲಿದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Display ಮೇಲೆ ಕ್ಲಿಕ್ ಮಾಡಬೇಕು.
Insurance ನಿಮ್ಮೂರಿನಲ್ಲಿ ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು?
ನೀವು ಕಲಬುರಗಿ ಜಿಲ್ಲೆ, ಸೇಡಂ ತಾಲೂಕು,ಮುಧೋಳ ಹೋಬಳಿ ಹಾಗೂ ಇಟಕಾಲ ಗ್ರಾಮದವರಾಗಿದ್ದರೆ ತೊಗರಿ, ಭತ್ತ, ಉದ್ದು, ಸೂರ್ಯಕಾಂತಿ, ಹೆಸರು ಹಾಗೂ ಹತ್ತಿ ಬೆಳೆಗಳಿಗೆ ವಿಮೆ ಮಾಡಿಸಬಹುದು.
Insurance ಪ್ರತಿ ಹೆಕ್ಟೇರಿಗೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ?
ತೊಗರಿ ಬೆಳೆಗೆ ಹೆಕ್ಟೇರಿಗೆ 48 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ಭತ್ತ ಬೆಳೆಗೆ 93 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ಉದ್ದು ಬೆಳೆಗೆ ಪ್ರತಿ ಹೆಕ್ಟೇರಿಗೆ 32 ಸಾವಿರ ರೂಪಾಯಿ ಜಮೆಯಾಗಲಿದೆ.
ಇದನ್ನೂ ಓದಿ : FID check ನಿಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ? ಇಲ್ಲೇ ಚೆಕ್ ಮಾಡಿ 2024
ಸೂರ್ಯಕಾಂತಿ ಬೆಳೆಗೆ 40 ಸಾವಿರ ರೂಪಾಯಿ, ಹತ್ತಿ ಬೆಳೆಗೆ 49 ಸಾವಿರ ಹಾಗೂ ಹೆಸರು ಬೆಳೆಗೆ 33 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ.
Insurance ಬೆಳೆ ವಿಮೆ ಹಣ ಯವಾಗ ಜಮೆಯಾಗಲಿದೆ?
ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಹಣ ಜಮೆಯಾಗುವುದಿಲ್ಲ. ಹೌದು, ಬೆಳೆ ವಿಮೆ ಮಾಡಿಸಿದ ನಂತರ ರೈತರ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾಳಾಗಿರಬೇಕು. ನಂತರ 72 ಗಂಟೆಯೊಳಗೆ ವಿಮಾ ಕಂಪನಿಗೆ ದೂರು ನೀಡಬೇಕು. ನಂತರ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನೆಗೆ ಬಂದು ಬೆಳೆ ಪರಿಶೀಲನೆ ಮಾಡಿದ ನಂತರ ವಿಮಾ ಹಣ ಜಮೆಯಾಗಲಿದೆ.
ರೈತರು ವಿಮಾ ಕಂಪನಿಗೆ ದೂರು ನೀಡಿದರೂ ಕೆಲವು ಸಲ ವಿಮೆ ಹಣ ಜಮೆಯಾಗುವುದಿಲ್ಲ.ಹೌದು, ದೂರು ನೀಡುವುದರೊಂದಿಗೆ ರೈತರ ಬಳಿ ಎಫ್ಐಡಿ ಇರಬೇಕು. ಆಧಾರ್ ಗೆ ಪಹಣಿ ಲಿಂಕ್ ಆಗಿರಬೇಕು. ಇದರೊಂದಿಗೆ ರೈತರ ಬೆಳೆ ಸಮೀಕ್ಷೆ ಆಗಿರಬೇಕು. ಆಗ ಮಾತ್ರ ಬೆಳೆ ವಿಮೆ ಹಣ ರೈತರ ಖಾತೆಗೆ ಹಣ ಜಮೆಯಾಗಲಿದೆ.