Bele vime jama : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸಿದ ಬಹುತೇಕ ರೈತರಿಗೆ ವಿಮೆ ಹಣ ಜಮೆಯಾಗುತ್ತಿಲ್ಲ.ಯಾವ ಕಾರಣಕ್ಕಾಗಿ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆಯಾಗುತ್ತಿಲ್ಲ. ಬೆಳೆ ವಿಮೆ ಜಮೆಯಾಗಲು ರೈತರೇನೇನು ಮಾಡಬೇಕು ಎಂಬದರ ಮಾಹಿತಿ ಇಲ್ಲಿದೆ.
Bele vime jama ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಜಮೆಯಾಗಲು ಮೊದಲೇನು ಮಾಡಬೇಕು?
ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಬೇಕಾದರೆ ಬೆಳೆ ಹಾನಿಯಾಗಿದ್ದರೆ ಮೊದಲು ಯಾವ ವಿಮಾ ಕಂಪನಿಗೆ ವಿಮೆ ಹಣ ಪಾವತಿಸಿದ್ದಾರೋ ಆ ವಿಮಾ ಕಂಪನಿಗೆ ದೂರು ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬರುತ್ತಾರೆ. ನಂತರ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದ ಕುರಿತು ಬೆಳೆ ಪರಿಶೀಲನೆ ಮಾಡುತ್ತಾರೆ.
ಯಾವ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂಬುದನ್ನೆಲ್ಲಾ ಚೆಕ್ ಮಾಡುತ್ತಾರೆ. ನಂತರ ಬೆಳೆ ಹಾನಿಯಾಗಿದ್ದರ ಕುರಿತು ವರದಿ ತಯಾರಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ಆಗ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ.
Bele vime jama ಬೆಳೆ ವಿಮೆ ಜಮೆಯಾಗಬೇಕಾದರೆ ರೈತರ ಬಳಿ ಫ್ರೂಟ್ಸ್ ಐಡಿ ಇರಬೇಕು?
ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆಯಾಗಬೇಕಾದರೆ ರೈತರು ಫ್ರೂಟ್ಸ್ ಐಡಿ ಮಾಡಿಸಿರಬೇಕು. ಹೌದು, ರೈತರು ಎಫ್ಐಡಿ ಇದ್ದರೆ ಮಾತ್ರ ರೈತರಿಗೆ ಬರ ಪರಿಹಾರ ಹಣ ಜಮೆಯಾಗುವ ಸಾಧ್ಯತೆಯಿದೆ. ಹಾಗಾದರೆ ರೈತರ ಬಳಿ ಫ್ರೂಟ್ಸ್ ಐಡಿ (ಎಫ್ಐಡಿ) ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.
ನಿಮ್ಮ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ Search ಮೇಲೆ ಕ್ಲಿಕ್ ಮಾಡಬೇಕು. ಆಗ ರೈತರ ಬಳಿ ಆಧಾರ್ ಕಾರ್ಡ್ ಇದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.
Bele vime jama ರೈತರು ಬೆಳೆ ಸಮೀಕ್ಷೆ ಮಾಡಿಸಿರಬೇಕು?
ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆ ಹಾಕಿದ್ದಾರೋ ಆ ಕುರಿತು ಬೆಳೆ ಸಮೀಕ್ಷೆ ಆಗಿರಬೇಕು. ಹೌದು, ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆ ಬಿತ್ತಿದ್ದಾರೆ ಎಂಬುದರ ಕುರಿತು ಬೆಳೆ ಸಮೀಕ್ಷೆ ಆಗಿರಲೇಬೇಕು. ಆಗ ಮಾತ್ರ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆಯಾಗಲಿದೆ.
72 ಗಂಟೆಯೊಳಗೆ ವಿಮಾ ಕಂಪನಿಗೆ ದೂರು ನೀಡಿರಲೇಬೇಕು?
ಪ್ರಾಕೃತಿಕ ವಿಕೋಪಗಳಾದ ಅತೀ ಮಳೆ, ಬರಗಾಲ, ಗುಡುಗು ಸಿಡಿಲಿನಿಂದ, ಭೂ ಕುಸಿತದಿಂದಾಗಿ ಬೆಳೆ ಹಾನಿಯಾಗಿದ್ದರೆ 72 ಗಂಟೆಯೊಳಗೆ ರೈತರು ದೂರು ನೀಡಿರಲೇಬೇಕು.
ಇದನ್ನೂ ಓದಿ : Mobile Number ಹಾಕಿ ಬರ ಪರಿಹಾರ ಜಮೆಯಾಗುತ್ತೋ ಇಲ್ಲವೋ ಚೆಕ್ ಮಾಡಿ 2024
ಆಗ ಮಾತ್ರ ರೈತರ ಬೆಳೆವಿಮೆ ಹಣ ಜಮೆಯಾಗಲಿದೆ.
Bele vime jama ರೈತರ ಹೆಸರು ಎಲ್ಲಾ ದಾಖಲೆಯಲ್ಲಿ ಒಂದೇ ರೀತಿಯಾಗಿರಬೇಕು?
ಬೆಳೆ ವಿಮೆ ಪಾವತಿಸಿದ ನಂತರ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಬೇಕಾದರೆ ಆಧಾರ್ ಕಾರ್ಡ್ , ಜಮೀನಿನ ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ರೈತರ ಹೆಸರು ಒಂದೇ ರೀತಿಯಾಗಿರಬೇಕು. ಒಂದಕ್ಷರವೂ ವ್ಯತ್ಯಾಸವಾಗಿದ್ದರೆ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.
Bele vime jama ನಿಮ್ಮ ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ರೈತರು ಬೆಳೆ ವಿಮೆ ಪಾವತಿಸಿದ ನಂತರ ತಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಋತು ಆಯ್ಕೆಯಲ್ಲಿ Kharif ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗಲಿದೆ. ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ Check status ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಆಯ್ಕೆಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Search ಮೇಲೆ ಕ್ಲಿಕ್ ಮಾಡಿ ರೈತರು ತಮ್ಮ ಅರ್ಜಿಯ ಸ್ಟೇಟಸನ್ನು ಚೆಕ್ ಮಾಡಿಕೊಳ್ಳಬಹುದು.