Bhagyalakshmi status ಭಾಗ್ಯಲಕ್ಷ್ಮೀ ಯೋಜನೆಯಡಿ ನಿಮ್ಮ ಮಗಳ ಹೆಸರಿಗೆಷ್ಟು ಹಣ ಜಮೆ ಇಲ್ಲೇ ಚೆಕ್ ಮಾಡಿ 2024

Written by Admin

Updated on:

Spread the love

Bhagyalakshmi status : ಭಾಗ್ಯಲಕ್ಷ್ಮೀ ಯೋಜನೆಯಡಿ ನೋಂದಣಿ ಮಾಡಿಸಿದ ಪಾಲಕರು ತಮ್ಮ  ಮಗುವಿನ ಹೆಸರಿಗೆ ಎಷ್ಟು ಹಣ ಜಮೆಯಾಗಿದೆ? ಎಷ್ಟು ಹಣ ಜಮೆಯಾಗಲಿದೆ ಎಂಬುದನ್ನು ಈಗ  ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ತಮಗೆಲ್ಲಾ ಗೊತ್ತಿದ್ದ ಹಾಗೆ,  2006-07ನೇ ಸಾಲಿನಲ್ಲಿಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಇಬ್ಬರು ಹೆಣ್ಣುಮಕ್ಕಳ ಹೆಸರು ನೋಂದಣಿ ಮಾಡಿ ಈ ಯೋಜನೆಯಡಿ ಸೌಲಭ್ಯ ಸಿಗಲಿದೆ. ಈ ಯೋಜನೆಯ ಸ್ಟೇಟಸ್ ನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Bhagyalakshmi status

ಹೌದು, ಈ ಸ್ಟೇಟಸ್ ಸಹಾಯದಿಂದಾಗಿ ಬಾಂಡ್ ವಿತರಿಸಲಾಗಿದೆಯೋ ಇಲ್ಲವೋ? ಬಾಂಡ್ ಹೆಸರಿನಲ್ಲಿ ಎಷ್ಟು ಹಣ ಜಮೆ ಮಾಡಲಾಗಿದೆ?  ಬಾಂಡ್ ಎಲ್ಐಸಿಯಿಂದ ಪ್ರಿಂಟ್ ಆಗಿದೆಯೋ ಇಲ್ಲವೋ ಸೇರಿದಂತೆ ಇನ್ನಿತರ ಮಾಹಿತಿಗಳನ್ನು  ಮೊಬೈಲ್ ನಲ್ಲೇ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Bhagyalakshmi status ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮೊಬೈಲ್ ನಲ್ಲಿ ನೋಡುವುದು ಹೇಗೆ?

ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮೊಬೈಲ್ ನಲ್ಲೇ ನೋಡಲು ಈ

http://blakshmi.kar.nic.in:8080/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭಾಗ್ಯಲಕ್ಷ್ಮೀ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಭಾಗ್ಯಲಕ್ಷ್ಮೀ ಯೋಜನೆಯ ಕುರಿತಂತೆ ಮಾಹಿತಿ ಇರುತ್ತದೆ.  ಯೋಜನೆ ಆರಂಭಾವಾದಾಗ  ಭಾಗ್ಯಲಕ್ಷ್ಮೀ ಯೋಜನೆಯಡಿ ನಿಬಂಧನೆಗಳ ಮಾಹಿತಿ ಇರುತ್ತದೆ. Bhagyalakshmi status ಚೆಕ್ ಮಾಡಲು ಮೇಲ್ಗಡೆ Home ಪಕ್ಕದಲ್ಲಿರುವ query/search ಕೆಳಗಡೆ ಕಾಣುವ Multi Search ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ District ನಲ್ಲಿ ನಿಮ್ಮ ಜಿಲ್ಲೆ, Project ನಲ್ಲಿ ತಾಲೂಕು, cercle ನಲ್ಲಿ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮಗುವಿನ ಹೆಸರು ನಮೂದಿಸಬೇಕು. ಹುಟ್ಟಿದ ದಿನಾಂಕ ನಮೂದಿಸಿ ಅಲ್ಲಿ ಕಾಣುವ ಕೋಡ್ ನಂಬರ್ ನ್ನು ಕೆಳಗಡೆ ಇಮೇಜ್ ಕೋಡ್ ಬಾಕ್ಸ್ ನಲ್ಲಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Child Id ಕೆಳಗಡೆ ಕಾಣುವ ನಂಬರ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Bhagyalakshmi status  ಮಾಹಿತಿ ಕಾಣುತ್ತದೆ.

ಇದನ್ನೂ ಓದಿ Crop insurance calculate ರೈತರ ಯಾವ ಯಾವ ಬೆಳೆಗಳಿಗೆ ವಿಮೆ ಹಣ ಜಮೆ? ಇಲ್ಲೇ ಚೆಕ್ ಮಾಡಿ 2024

ಸ್ಟೇಟಸ್ ನಲ್ಲಿ ಬಾಂಡ್ ವಿತರಿಸಲಾಗಿದೆಯೋ ಇಲ್ಲವೋ?  ಎಲ್ಐಸಿಯಿಂದ ಪ್ರಿಂಟ್ ಆಗಿದೆಯೋ ಇಲ್ಲವೋ? ಜಿಲ್ಲೆ, ತಾಲೂಕು, ಗ್ರಾಮ, ಮಗುವಿನ ಹೆಸರು, ತಂದೆ ತಾಯಿಯ ಹೆಸರು, ಯಾವ ವರ್ಗಕ್ಕೆ ಮಗು ಸೇರಿದೆ?  ಭಾಗ್ಯಲಕ್ಷ್ಮೀ ಪಾಲಿಸಿ ಮಾಡಿಸುವಾಗ ತಂದೆ ತಾಯಿಯ ವಯಸೆಷ್ಟಿತ್ತು.ಮಗುವಿನ ಹೆಸರಿಗೆ ಎಷ್ಟು ಹಣ ಜಮೆ ಮಾಡಲಾಗಿದೆ ಹಾಗೂ ಚೆಕ್ ನಂಬರ್ ಸೆರಿದಂತೆ ಇನ್ನಿತರ ಮಾಹಿತಿ ಇರುತ್ತದೆ.

Bhagyalakshmi status ಏನಿದು ಭಾಗ್ಯಲಕ್ಮೀ ಯೋಜನೆ?

ಭಾಗ್ಯಲಕ್ಮೀ ಯೋಜನೆಯನ್ನು ಆಗಸ್ಟ್ 2008 ರಲ್ಲಿ ಮಾರ್ಪಡಿಸಲಾಗಿದೆ. ಮಾರ್ಪಡಿಸಿದ ದಿನಾಂಕ 1-8-2008 ರ ನಂತರ ಭಾಗ್ಯಲಕ್ಷ್ಮೀ ಯೋಜನೆಯಡಿ ನೋಂದಣಿಯಾದ ಕುಟುಂಬದ ಮೊದಲ  ಮಗುವಿನ ಹೆಸರಿನಲ್ಲಿ 19300 ರೂಪಾಯಿ ಹಾಗೂ ಎರಡನೇ ಮಗುವಿನ ಹೆಸರಿನಲ್ಲಿ 18350 ರೂಪಾಯಿ ಮೊತ್ತವನ್ನು ಠೇವಣಿಮಾಡಲಾಗಿರುತ್ತದೆ. 18 ವರ್ಷ ಪೂರ್ಣಗೊಂಡು ನಿಬಂದನೆಗಳನ್ನು ಪೂರೈಸಿದ ಕುಟುಂಬದ ಮೊದಲನೇ ಫಲಾನುಭವಿಗೆ 100097 ರೂಪಾಯಿ ಹಾಗೂ ಎರಡನೇ ಫಲಾನುಭವಿಗೆ 100052 ರೂಪಾಯಿ ದೊರೆಯುತ್ತದೆ.

Bhaguyalaksmischemebenefit

ಫಲಾನುಭವಿಗೆ 15 ವರ್ಷ ತಲುಪಿದ ನಂತರ 10ನೇ ತರಗತಿಯಲ್ಲಿ ಉತ್ತೀರ್ಣಳಾಗಿ ಮುಂದಿನ ವಿಧ್ಯಾಭ್ಯಾಸ ಕೈಗೊಳ್ಳಲು ಆಸಕ್ತಿಯಿದ್ದಲ್ಲಿ ಬಾಂಡ್ ಅಂಗೀಕೃತ ಬ್ಯಾಂಕುಗಳಲ್ಲಿ ಅಡಮಾನವಿರಿಸಿ 50 ಸಾವಿರ ರೂಪಾಯಿಯವರೆಗೆ ಸಾಲ ಪಡೆಯಬಹುದು.

Leave a Comment