Bhagyalakshmi ಯೋಜನೆಯಡಿ ಮಗಳ ಹೆಸರಿಗೆ 1 ಲಕ್ಷ ಜಮೆ? ಸ್ಟೇಟಸ್ ಇಲ್ಲೇ ಚೆಕ್ ಮಾಡಿ

Written by Admin

Updated on:

Spread the love

Bhagyalakshmi: ಭಾಗ್ಯಲಕ್ಷ್ಮೀ ಯೋಜನೆ ಯಾರು ಯಾರು ತಮ್ಮ ಮಗಳ ಹೆಸರಿಗೆ ಬಾಂಡ್ ಪಡೆದಿದ್ದಾರೋ ಅಂತಹವರು ತಮ್ಮ ಮಗಳ ಹೆಸರಿಗೆ ಭಾಗ್ಯಲಕ್ಷ್ಮೀ ಹಣ ಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

Bhagyalakshmiಯೋಜನೆ ಎಂದರೇನು? ಈ ಯೋಜನೆಯಡಿ ಯಾರು ಯಾರು ತಮ್ಮ ಮಗಳ ಹೆಸರಿಗೆ ಬಾಂಡ್ ಪಡೆಯಬಹುದು? ಬಾಂಡ್ ಪಡೆದ ನಂತರ ಮಗಳ ಹೆಸರಿಗೆ ಎಷ್ಟು ವರ್ಷಕ್ಕೆ ಮಗಳ ಹೆಸರಿಗೆ ಹಣ ಜಮೆಯಾಗುವುದು? ಭಾಗ್ಯಲಕ್ಷ್ಮೀ ಬಾಂಡ್ ಮೇಲೆ ಸಾಲ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

Bhagyalakshi

Bhagyalakshmiಯೋಜನೆಯಡಿ ಯಾರು ಯಾರು ಬಾಂಡ್ ಪಡೆದಿದ್ದಾರೋ ಹಾಗೂ ಅವರ 18 ವಯಸ್ಸು ಪೂರ್ಣಗೊಂಡಿದೆಂಯೋ ಅಂತಹ ಬಾಲಕೀಯರ ಖಾತೆಗೆ ಹಣ ಜಮೆಯಾಗುತ್ತಿದೆ. ಹೌದು, ಯಾರು ಯಾರು ಭಾಗ್ಯಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ್ದಾರೋ ಅವರ ಖಾತೆಗೆ ಪ್ರಸಕ್ತಸಾಲಿನಿಂದ  ಹಣ ಜಮೆಯಾಗಲಿದೆ. ನಿಮ್ಮ ಖಾತೆಗೆ ಹಣ ಜಮೆಯಾಗುತ್ತೋ ಇಲ್ಲವೋ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Bhagyalakshmi ಬಾಂಡ್ ಸ್ಟೇಟಸ್ ಮೊಬೈಲ್ ನಲ್ಲಿ ನೋಡುವುದು ಹೇಗೆ?

ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮೊಬೈಲ್ ನಲ್ಲೇ ನೋಡಲು ಈ

http://blakshmi.kar.nic.in:8080/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭಾಗ್ಯಲಕ್ಷ್ಮೀ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಭಾಗ್ಯಲಕ್ಷ್ಮೀ ಯೋಜನೆಯ ಕುರಿತಂತೆ ಮಾಹಿತಿ ಇರುತ್ತದೆ.  ಯೋಜನೆ ಆರಂಭಾವಾದಾಗ  ಭಾಗ್ಯಲಕ್ಷ್ಮೀ ಯೋಜನೆಯಡಿ ನಿಬಂಧನೆಗಳ ಮಾಹಿತಿ ಇರುತ್ತದೆ. Bhagyalakshmi status ಚೆಕ್ ಮಾಡಲು ಮೇಲ್ಗಡೆ Home ಪಕ್ಕದಲ್ಲಿರುವ query/search ಕೆಳಗಡೆ ಕಾಣುವ Multi Search ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ District ನಲ್ಲಿ ನಿಮ್ಮ ಜಿಲ್ಲೆ, Project ನಲ್ಲಿ ತಾಲೂಕು, cercle ನಲ್ಲಿ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮಗುವಿನ ಹೆಸರು ನಮೂದಿಸಬೇಕು. ಹುಟ್ಟಿದ ದಿನಾಂಕ ನಮೂದಿಸಿ ಅಲ್ಲಿ ಕಾಣುವ ಕೋಡ್ ನಂಬರ್ ನ್ನು ಕೆಳಗಡೆ ಇಮೇಜ್ ಕೋಡ್ ಬಾಕ್ಸ್ ನಲ್ಲಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.

Bhagyalakshi bond

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Child Id ಕೆಳಗಡೆ ಕಾಣುವ ನಂಬರ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮಾಹಿತಿ ಕಾಣುತ್ತದೆ.

ಇದನ್ನೂ ಓದಿ Bara parihara compensation ಬರ ಪರಿಹಾರ 3ನೇ ಕಂತಿನ ಹಣ ನಿಮಗೆಷ್ಟು ಜಮೆ? ಇಲ್ಲೇ ಚೆಕ್ ಮಾಡಿ

ಸ್ಟೇಟಸ್ ನಲ್ಲಿ ಬಾಂಡ್ ವಿತರಿಸಲಾಗಿದೆಯೋ ಇಲ್ಲವೋ?  ಎಲ್ಐಸಿಯಿಂದ ಪ್ರಿಂಟ್ ಆಗಿದೆಯೋ ಇಲ್ಲವೋ? ಜಿಲ್ಲೆ, ತಾಲೂಕು, ಗ್ರಾಮ, ಮಗುವಿನ ಹೆಸರು, ತಂದೆ ತಾಯಿಯ ಹೆಸರು, ಯಾವ ವರ್ಗಕ್ಕೆ ಮಗು ಸೇರಿದೆ?  ಭಾಗ್ಯಲಕ್ಷ್ಮೀ ಪಾಲಿಸಿ ಮಾಡಿಸುವಾಗ ತಂದೆ ತಾಯಿಯ ವಯಸೆಷ್ಟಿತ್ತು.ಮಗುವಿನ ಹೆಸರಿಗೆ ಎಷ್ಟು ಹಣ ಜಮೆ ಮಾಡಲಾಗಿದೆ ಹಾಗೂ ಚೆಕ್ ನಂಬರ್ ಸೆರಿದಂತೆ ಇನ್ನಿತರ ಮಾಹಿತಿ ಇರುತ್ತದೆ.

Bhagyalakshi ಯೋಜನೆಯನ್ನು ಯಾವಾಗ ಜಾರಿಗೆ ತರಲಾಗಿದೆ?

2006-07 ನೇ ಸಾಲಿನಲ್ಲಿಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದೆ. ಬಿಪಿಎಲ್ ಕುಂಟುಬದ ಪಾಲಕರು ತಮ್ಮ ಮೊದಲ ಇಬ್ಬರು ಹೆಣ್ಣು ಮಕ್ಕಳ ಹೆಸರಿಗೆ  ಭಾಗ್ಯಲಕ್ಷ್ಮೀ ಯೋಜನೆಯ ಅಡಿ ನೋಂದಣಿ ಮಾಡಿಸಬಹುದು.

Bhagyalakshi ಯೋಜನೆ ಅಡಿಯಲ್ಲಿ ಏನೇನು ಸೌಲಭ್ಯ ಸಿಗಲಿದೆ?

ಭಾಗ್ಯಲಕ್ಷ್ಮೀ ಯೋಜನೆಯನ್ನು ಬಿಜೆಪಿ ಸರ್ಕಾರ ಅಧಿಕಾರವಿದ್ದಾಗ ಜಾರಿಗೆ ತಂದಿತ್ತು. ನಂತರ ಭಾಗ್ಯಲಕ್ಮೀ ಯೋಜನೆಯನ್ನು ಆಗಸ್ಟ್ 2008 ರಲ್ಲಿ ಮಾರ್ಪಡಿಸಲಾಗಿದೆ. ಮಾರ್ಪಡಿಸಿದ ದಿನಾಂಕ 1-8-2008 ರ ನಂತರ ಭಾಗ್ಯಲಕ್ಷ್ಮೀ ಯೋಜನೆಯಡಿ ನೋಂದಣಿಯಾದ ಕುಟುಂಬದ ಮೊದಲ  ಮಗುವಿನ ಹೆಸರಿನಲ್ಲಿ 19300 ರೂಪಾಯಿ ಹಾಗೂ ಎರಡನೇ ಮಗುವಿನ ಹೆಸರಿನಲ್ಲಿ 18350 ರೂಪಾಯಿ ಮೊತ್ತವನ್ನು ಠೇವಣಿ ಮಾಡಲಾಗಿರುತ್ತದೆ. ಮೊದಲು 10 ಸಾವಿರ ರೂಪಾಯಿ ಠೇವಣಿ ಇಲಡಾಗುತ್ತಿತ್ತು. 18 ವರ್ಷ ಪೂರ್ಣಗೊಂಡು ನಿಬಂದನೆಗಳನ್ನು ಪೂರೈಸಿದ ಕುಟುಂಬದ ಮೊದಲನೇ ಫಲಾನುಭವಿಗೆ 100097 ರೂಪಾಯಿ ಹಾಗೂ ಎರಡನೇ ಫಲಾನುಭವಿಗೆ 100052 ರೂಪಾಯಿ ದೊರೆಯುತ್ತದೆ.

ಫಲಾನುಭವಿಗೆ 15 ವರ್ಷ ತಲುಪಿದ ನಂತರ 10ನೇ ತರಗತಿಯಲ್ಲಿ ಉತ್ತೀರ್ಣಳಾಗಿ ಮುಂದಿನ ವಿಧ್ಯಾಭ್ಯಾಸ ಕೈಗೊಳ್ಳಲು ಆಸಕ್ತಿಯಿದ್ದಲ್ಲಿ ಬಾಂಡ್ ಅಂಗೀಕೃತ ಬ್ಯಾಂಕುಗಳಲ್ಲಿ ಅಡಮಾನವಿರಿಸಿ 50 ಸಾವಿರ ರೂಪಾಯಿಯವರೆಗೆ ಸಾಲ ಪಡೆಯಬಹುದು.

Leave a Comment