land RTC mutation check ಪಹಣಿ, ಮುಟೇಶನ್ ಮೊಬೈಲ್ ನಲ್ಲೇ ಚೆಕ್ ಮಾಡಿ 2024

Written by Admin

Updated on:

Spread the love

land RTC mutation check : ರೈತರು ತಮ್ಮ ಜಮೀನಿನ ದಾಖಲೆಗಳನ್ನು ಮೊಬೈಲ್ ನಲ್ಲೇ ಪಡೆಯಬಹುದು.

ಹೌದು, ಇಧಕ್ಕಾಗಿ ರೈತರು ಎಲ್ಲಿಯೂ ಹೋಗಬೇಕಿಲ್ಲ. ಯಾವ ಯಾವ ದಾಖಲೆಗಳನ್ನು ಮೊಬೈಲ್ ನಲ್ಲಿ ಆನ್ಲೈನ್ ನಲ್ಲಿ ಚೆಕ್ ಮಾಡಬಹುದು. ಇದಕ್ಕಾಗಿ ಯಾವ ದಾಖಲೆ ಬೇಕು? ಹೇಗೆ ಚೆಕ್ ಮಾಡಬೇಕು ಎಂಬುದನ್ನು ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

land RTC mutation check

ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಯಾವ ಯಾವ ದಾಖಲೆಗಳನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.  ಜಮಿನಿಗೆ ಸಂಬಂಧಿಸಿದ ಪಹಣಿ, ಆಕಾರಬಂದ್, ಮುಟೇಶನ್ ಹಾಗೂ ಖಾತಾ ಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಮೊಬೈಲ್ ನಲ್ಲಿ ಜಮೀನಿನ ಪಹಣಿ, ಆಕಾರಬಂದ್, ಖಾತಾ ಹಾಗೂ ಮುಟೇಶನ್ ಪ್ರತಿಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

land RTC mutation check ಜಮೀನಿನ ಮುಟೇಶನ್ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಜಮೀನಿನ ಮುಟೇಶನ್ ಚೆಕ್ ಮಾಡಲು ಈ

https://landrecords.karnataka.gov.in/Service11/MR_MutationExtract.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ನಮೂದಿಸಿ Fetch Details ಮೇಲೆ ಕ್ಲಿಕ್ ಮಾಡಬೇಕು.  ಆಗ ನೀವು ನಮೂದಿಸಿದ ಜಮೀನಿನ  ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ನಲ್ಲಿ ಜಮೀನಿನ ವರ್ಗಾವಣೆ ಹೇಗಾಗಿದೆ ಎಂಬ ಮಾಹಿತಿ ಇರುತ್ತದೆ. ಅಲ್ಲಿ ನಿಮ್ಮ ಹಿಸ್ಸಾ ನಂಬರ್ ಹಿಂದೆ ಕಾಣುವ Select ಮೇಲೆ  ಕ್ಲಿಕ್ ಮಾಡಿ ನಂತರ Preview ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಮೀನಿನ ಮುಟೇಶನ್ ಪ್ರತಿ ಓಪನ್ ಆಗುತ್ತದೆ.

land RTC mutation check ಜಮೀನಿನ ಪಹಣಿ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಯಾವುದು ಜಮೀನನ ಪಹಣಿಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರೈತರು ಜಿಲ್ಲೆ, ತಾಲೂಕು, ಹೋಬಳಿ ಗ್ರಾಮ ಹಾಗೂ ಯಾವ ಜಮೀನಿನ ಸರ್ವೆ ನಂಬರ್ ಪಹಣಿ ಪಡೆದುಕೊಳ್ಳಬೇಕೆಂದುಕೊಂಡಿದ್ದಾರೋ ಆ ಸರ್ವೆ ನಂಬರ್ ನಮೂದಿಸಿ Go ಮೇಲೆ ಕ್ಲಿಕ್ ಮಾಡಬೇಕು.  ನಂತರ Sunoc ನಲ್ಲಿ  * ಆಯ್ಕೆ ಮಾಡಿಕೊಳ್ಳಬೇಕು.  Hissa Number ನಲ್ಲಿ * ಆಯ್ಕೆ ಮಾಡಿಕೊಳ್ಳಬೇಕು. Period ನಲ್ಲಿ2021 2022-2023 ಆಯ್ಕೆ ಮಾಡಿಕೊಳ್ಳಬೇಕು. Year ನಲ್ಲಿ 2022-2023 ಆಯ್ಕೆ ಮಾಡಿಕೊಂಡು Fetch details ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ Pm kisan release date ರೈತರಿಗೆ ಗುಡ್ ನ್ಯೂಸ್ ಈ ದಿನ ಈ ರೈತರಿಗೆ ಪಿಎಂ ಕಿಸಾನ್ ಹಣ ಜಮೆ 2024

ಆಗ ನೀವು ನಮೂದಿಸಿ ಸರ್ವೆ ನಂಬರಿನಲ್ಲಿ ಬರುವ ಜಮೀನಿನ ಮಾಲಿಕರ ಹೆಸರು ಕಾಣುತ್ತದೆ. ಅವರ ಹೆಸರಿನಲ್ಲಿ ಎಷ್ಟು ಎಕರೆ ಜಮೀನಿದೆ ಎಂಬುದು ಕಾಣುತ್ತದೆ. ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಿದಾಗ ಪಹಣಿ ಓಪನ್ ಆಗುತ್ತದೆ.

land RTC mutation check ನಿಮ್ಮ ಜಮೀನಿನ ಖಾತಾ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಜಮೀನಿನ ಖಾತಾ ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://landrecords.karnataka.gov.in/service64/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ Search by Survey Number ಮೇಲೆ ಕ್ಲಿಕ್ ಮಾಡಿ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಹಾಕಿದ ನಂತರ  Go ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಿದ ನಂತರ ಖಾತಾ ನಂಬರ್ ಕಾಣುತ್ತದೆ. ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿದ ಮೇಲೆ Preview ಮೇಲೆ ಕ್ಲಿಕ್ ಮಾಡಿ ಖಾತಾ ಪ್ರತಿ ಪಡೆದುಕೊಳ್ಳಬಹುದು.

land RTC mutation

land RTC mutation check  ಜಮೀನಿನ ಆಕಾರಬಂದ್ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಜಮೀನಿನ ಆಕಾರಬಂದ್ ಚೆಕ್ ಮಾಡಲು ಈ

https://bhoomojini.karnataka.gov.in/service39/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ನಮೂದಿಸಬೇಕು . ನಂತರ Sunoc ನಲ್ಲಿ  * ಆಯ್ಕೆ ಮಾಡಿಕೊಳ್ಳಬೇಕು.  Hissa Number ನಲ್ಲಿ * ಆಯ್ಕೆ ಮಾಡಿಕೊಳ್ಳಬೇಕು. ನಂತರ View Akarband ಮೇಲೆ ಕ್ಲಿಕ್ ಮಾಡಿದರೆ ಸಾಕು, ಆಕಾರಬಂದ್ ಪ್ರತಿ ಓಪನ್ ಆಗುತ್ತದೆ.

Leave a Comment