Grampanchayat: ಸಾರ್ವಜನಿಕರಿಗೆ ಈಗ ಗ್ರಾಮ ಪಂಚಾಯತಿ ಮಾಹಿತಿಗಳೆಲ್ಲಾ ವ್ಯಾಟ್ಸ್ ಆ್ಯಪ್ ನಲ್ಲೇ ಸಿಗುತ್ತದೆ.
ಹೌದ್ರಿ, ನಿಮ್ಮ ಮೊಬೈಲ್ ನಲ್ಲಿ ವ್ಯಾಟ್ಸ್ ಆ್ಯಪ್ ಇದ್ದರೆ ಸಾಕು, ಕೇವಲ ಒಂದೇ ನಿಮಿಷದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸಿಗುವ ಸೌಲಭ್ಯಗಳು ಹಾಗೂ ಗ್ರಾಮ ಪಂಚಾಯತಿಯ ಎಲ್ಲಾ ಮಾಹಿತಿಗಳು ಸಿಗುತ್ತವೆ.ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ನೋಡಿ ಸ್ಟೇಪ್ ಬೈ ಸ್ಟೆಪ್ ಮಾಹಿತಿ.
Grampanchayat ಗ್ರಾಮ ಪಂಚಾಯತಿಯ ವ್ಯಾಟ್ಸ್ ಆ್ಯಪ್ ನಂಬರ್ ಇಲ್ಲಿದೆ
ಗ್ರಾಮ ಪಂಚಾಯತಿ ವ್ಯಾಟ್ಸ್ ಆ್ಯಪ್ ಮೂಲಕ ಸಿಗುವ ಮಾಹಿತಿಗಳನ್ನು ನೋಡುವ ಮೊದಲು ಈ ಲೇಖನದಲ್ಲಿ ಬರೆದಿರುವ ಎಲ್ಲಾ ಮಾಹಿತಿಗಳ್ನುಸರಿಯಾಗಿ ಓದಿಕೊಳ್ಳಬೇಕು. ನಂತರ ಇಲ್ಲಿ ನೀಡಲಾದ ಮಾಹಿತಿಗಳ ಪ್ರಕಾರ ನೀವು ವ್ಯಾಟ್ಸ್ ಆ್ಯಪ್ ನಲ್ಲೇ ಗ್ರಾಮ ಪಂಚಾಯತಿಯ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಭಿವೃದ್ಧಿಪಡಿಸಿರುವ ಮಹತ್ವದ ಪಂಚಮಿತ್ರ ಎಂಬ ವ್ಯಾಟ್ಸ್ ಆ್ಯಪ್ ಚಾಟ್ ನಂಬರ್ ನ್ನು 8277506000 ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ : crop loan check ನಿಮ್ಮ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ 2024
ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ತಮಗೆ ಅವಶ್ಯಕತೆ ಇರುವ ಗ್ರಾಮ ಪಂಚಾಯತ್ ಗಳಲ್ಲಿ ಲಭ್ಯ ಸೇವೆಗಳಿಗೆ ಅರ್ಜಿ ಸಲ್ಲಿಸಲು, ವಿವಿಧ ಮಾಹಿತಿ, ವಿವರಗಳನ್ನು ಪಡೆಯಲು ಹಲವಾರು ವೆಬ್ಸೈಟ್ ಮತ್ತು ಪೋರ್ಟಲ್ ಗಳಿಗೆ ಭೇಟಿ ನೀಡಬೇಕಿತ್ತು. ಅಲ್ಲದೆ, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ಕುಂದುಕೊರತೆಗಳನ್ನು ದಾಖಲಿಸಿ ವಿವರಣೆ ಪಡೆಯಲು ಯಾವುದೇ ನಿರ್ಧಿಷ್ಟವಾದ ವೆಬ್ಸೈಟ್ ಅಥವಾ ಪೋರ್ಟಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಪಂಚಮಿತ್ರ ಎಂಬ ವಿನೂತನ ವ್ಯಾಟ್ಸ್ ಆ್ಯಪ್ ಚಾಟ್ ಅನ್ನು ಅನುಷ್ಠಾನಕ್ಕೆ ತರಲಾಗಿದೆ.
Grampanchayat ವ್ಯಾಟ್ಸ್ ಆ್ಯಪ್ ನಲ್ಲಿ ಏನೇನು ಮಾಹಿತಿ ಪಡೆಯಬಹುದು?
ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಹೊಸ ಅಥವಾ ಅಸ್ತಿತ್ವದಲ್ಲಿರುವ ದೂರ ಸಂಪರ್ಕ ಮೂಲ ಸೌಕರ್ಯ, ಗೋಪುರಕ್ಕೆ ಅನುಮತಿ ಓವರ್ ಗ್ರೌಂಡ್ ಕೇಬಲ್ ಮೂಲ ಸೌಕರ್ಯ, ಭೂಗತ ಕೇಬಲ್ ಮೂಲ ಸೌಕರ್ಯ ಗಳ ಅನುಮಿತಿ, 9 / 11ಎ, ನಮೂನೆ 11 ಬಿ ಸೇರಿದಂತೆ ಇನ್ನಿತರ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು.
Grampanchayat ವ್ಯಾಟ್ಸ್ ಆ್ಯಪ್ ನಲ್ಲಿ ಚಾಟ್ ಹೇಗೆ ಮಾಡಬೇಕು?
ನಿಮ್ಮಮೊಬೈಲ್ ನಲ್ಲಿ ಪಂಚಮಿತ್ರದ ಇಲಾಖೆಯ ವ್ಯಾಟ್ಸ್ ಆ್ಯಪ್ ಚಾಟ್ ನಂಬರ್ 8277506000 ಅನ್ನು ಸೇವ್ ಮಾಡಿಕೊಂಡು ಚಾಟ್ ಆರಂಭಿಸಿದರೆ ಮೊದಲಿಗೆ ಭಾಷೆ ಕೇಳುತ್ತದೆ.
ಅಲ್ಲಿ ನೀವು ಕನ್ನಡ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಂತರ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮಾಹಿತಿ ನೀಡಿ ಲಾಗಿನ್ ಆಗಬೇಕು. ನಂತರ ತಾನಾಗಿಯೇ ಕೆಲ ಆಯ್ಕೆಗಳು ಆರಂಭವಾಗುತ್ತಾ ಸಾಗುತ್ತದೆ.
ಕ್ರಮ ಸಂಖ್ಯೆಗಳನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಹಾಗೂ ಗ್ರಾಮ ಆಯ್ಕೆ ಮಾಡಿಕೊಂಡು ನೀವು ಬಯಸುವ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಂಡು ಅಲ್ಲಿನ ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಯ ಮಾಹಿತಿ ಪಡೆಯಬಹುದು.
ನೀವು ಯಾವುದರ ಕುರಿತು ತಿಳಿದುಕೊಳ್ಳಬೇಕೆಂದುಕೊಂಡಿದ್ದೀರೋ ಅದನ್ನು ಸರಿಯಾಗಿ ನಮೂದಿಸಬೇಕಾಗುತ್ತದೆ. ಒಂದು ವೇಳೆ ನೀವು ತಪ್ಪಾಗಿ ನಮೂದಿಸಿದರೆ ಹಿಂದೆ ಹೋಗುವ ಆಯ್ಕೆ ಸಹ ಇರುತ್ತದೆ. ಇಲ್ಲಿ ಹಿಂದಿನ ಮೆನುವಿಗೆ ಹೋಗಿ ನೀವು ಕೇಳಲಿಚ್ಚಿಸುವ ಮಾಹಿತಿಯನ್ನು ಪಡೆದುಕೊಳ್ಳಬಹುದು.
Grampanchayat ಏನಿದು ಪಂಚಮಿತ್ರ ಪೋರ್ಟಲ್?
ಪಂಚಮಿತ್ರ ಪೋರ್ಟಲ್ ಮೂಲಕ ಗ್ರಾಮ ಪಂಚಾಯತ್ ಗಳ ಮಾಹಿತಿಗಳಾದ ಚುನಾಯಿತ ಜನಪ್ರತಿನಿಧಿಗಳ ವಿವರ, ಸಿಬ್ಬಂದಿ ವಿವರ, ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡವಳಿ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರಗಳು, ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರಗಳು, ಸೇರಿದಂತೆ ಇನ್ನಿುತರ ವಿವರಗಳನ್ನುಪಡೆಯಬಹುದು.