Crop insurance jame ನಿಮಗೇಕೆ ಬೆಳೆ ವಿಮೆ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ 2024

Written by Admin

Published on:

Spread the love

Crop insurance jame : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಪಾವತಿಸುವುದಕ್ಕಿಂತ ಮೊದಲು ರೈತರು ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳುವುದು ಅತೀ ಮಹತ್ವದ್ದಾಗಿದೆ.

ಹೌದು, ಬಹುತೇಕ ರೈತರು ಬೆಳೆ ವಿಮೆ ಪಾವತಿಸುತ್ತಾರೆ. ಆದರೆ ಯಾವ ವಿಮಾ ಕಂಪನಿಗೆ ಹಣ ಪಾವತಿಸಿರುತ್ತಾರೆ ಹಾಗೂ ಬೆಳೆ ವಿಮೆ ಜಮೆಯಾಗಲು ರೈತರು ಏನು ಮಾಡಬೇಕು? ಎಂಬುದರ ಬಗ್ಗೆ ತಿಳಿದಿರುವುದಿಲ್ಲ. ಕಳೆದ ಸಾಲಿನಲ್ಲಿ ವಿಮೆ ಪಾವತಿಸಿದ ಇನ್ನೂ ಬಹಳಷ್ಟು ರೈತರಿಗೆ ಹಣ ಜಮೆಯಾಗಿಲ್ಲ. ಯಾವ ಕಾರಣಕ್ಕಾಗಿ ಬೆಳೆ ವಿಮೆ ಜಮೆಯಾಗಿಲ್ಲ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Crop insurance jame ರೈತರು ಯಾವ ವಿಮಾ ಕಂಪನಿಗೆ ವಿಮೆ ಪಾವತಿಸಿದ್ದಾರೆ? ಇಲ್ಲಿದೆ ಮಾಹಿತಿ

ರೈತರು ವಿಮೆ ಹಣ ಕಟ್ಟಿರುತ್ತಾರೆ. ಆದರೆ ಯಾವ ವಿಮಾ ಕಂಪನಿಗೆ ಕಟ್ಟಿರುತ್ತಾರೆ. ತಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ.ಆ ವಿಮಾ ಕಂಪನಿಯ ಸಹಾಯವಾಣಿ ನಂಬರ್ ತಿಳಿದುಕೊಳ್ಳಲೇಬೇಕು. ಏಕೆಂದರೆ ನಿಮ್ಮ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಹಾಳಾದರೆ ನೀವು 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಬೇಕಾಗುತ್ತದೆ. ಆಗ ನಿಮಗೆ ವಿಮಾ ಕಂಪನಿಯ ಹಣ ಜಮೆಯಾಗುತ್ತದೆ.

ನಿಮ್ಮ ಜಿಲ್ಲೆಯ ವಿಮಾ ಕಂಪನಿ ತಿಳಿದುಕೊಳ್ಳಲು ಈ

https://samrakshane.karnataka.gov.in/HomePages/frmKnowYourInsCompany.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮಗೆ ಮೇಲಿನ ಲಿಂಕ್ ಓಪನ್ ಆಗದಿದ್ದರೆ ಈ

https://samrakshane.karnataka.gov.in/PublicHome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Know Your Insurance Co ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.ಅಲ್ಲಿ ನಿಮಗೆ ಜಿಲ್ಲೆಯ ಹೆಸರು ಹಾಗೂ ವಿಮಾ ಕಂಪನಿಯ ಹೆಸರು ಕಾಣಿಸುತ್ತದೆ. ನೀವು ನಿಮ್ಮ ಜಿಲ್ಲೆಯ ಎದುರುಗಡೆಯಿರುವ ವಿಮಾ ಕಂಪನಿಗೆ ವಿಮೆ ಹಣ ಪಾವತಿಸಿರುತ್ತೀರಿ.

ನಿಮ್ಮ ಬೆಳೆ ಹಾಳಾದಾಗ ನಿಮ್ಮ ಜಿಲ್ಲೆಯ ಎದುರುಗಡೆಯಿರುವ ವಿಮಾ ಕಂಪನಿಗೆ 72 ಗಂಟೆಯೊಳಗೆ ಕರೆ ಮಾಡಬೇಕಾಗುತ್ತದೆ. ಹಾಗಾದರೆ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಬೇಕಲ್ಲವೇ? ಇಲ್ಲಿದೆ ನೋಡಿ ಸಹಾಯವಾಣಿ ನಂಬರ್ ಗಳು

Crop insurance jame ವಿಮಾ ಕಂಪನಿಗಳ ಸಂಪರ್ಕಿಸುವ ನಂಬರ್ ಗಳು

crop insurance helpline number

ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ ಸಹಾಯವಾಣಿ ನಂಬರ್ 1800 200 5142, ಎಸ್.ಬಿ.ಐ ವಿಮಾ ಕಂಪನಿಯ ಸಹಾಯವಾಣಿ 1800 180 1551, 1800 209 1111, ಹೆಚ್.ಡಿಎಫ್ಸಿ ಅರ್ಗೋ 1800 266 0700, ಫ್ಯೂಚರ್ ಜನರಲಿ ಸಹಾಯವಾಣಿ ನಂಬರ್ 1800 266 4141, ಐಸಿಐಸಿ ಲೋಂಬೋರ್ಡ್  ಸಹಾಯವಾಣಿ1800 103 7712, ಬಜಾಜ್ ಅಲಾಯನ್ಸ್ ಜಿಐಸಿ 1800 209 5959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂ. ಲಿಮಿಟೆಡ್ ಸಹಾಯವಾಣಿ ನಂಬರ್1800 102 4088 ಗೆ ಸಂಪರ್ಕಿಸಲು ಕೋರಲಾಗಿದೆ. ಇಫ್ಕೋ ಟೋಕಿಯೋ ಜನರಲ್ ಇನ್ಸುರೆನ್ಸ್ ಕಂ ನಂಬರ್.

ಇದನ್ನೂ ಓದಿ crop loan check ನಿಮ್ಮ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ 2024

ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕುರಿತಂತೆ  ರೈತರು 080 2656 4535, ಅಥವಾ 080 2656 4536 ಗೆ ಂಪರ್ಕಿಸಬಹುದು.

Crop insurance jame ಬೆಳೆ ವಿಮೆ ಪಾವತಿಸಿದ ನಂತರ ಮತ್ತೇನು ಮಾಡಬೇಕು?

ಬೆಳೆ ವಿಮೆ ಹಣ ಪಾವತಿಸಿದ ನಂತರ ರೈತರು ತಮ್ಮಜಮೀನಿನಲ್ಲಿ ಯಾವ ಬೆಳೆ ಬಿತ್ತಿದ್ದಾರೆ ಎಂಬುದರ ಬಗ್ಗೆ ಬೆಳೆ ಸಮೀಕ್ಷೆ ಮಾಡಿರುವುದು ಕಡ್ಡಾಯವಾಗಿದೆ. ಬೆಳೆ ಸಮೀಕ್ಷೆಯಾದರೆ ಮಾತ್ರ ನಿಮಗೆ ಬೆಳೆ ವಿಮೆ ಹಣ ಜಮೆಯಾಗಲಿದೆ.

ಫ್ರೂಟ್ಸ್ ಐಡಿ ಸಹ ಕಡ್ಡಾಯ

ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಹಾಗೂ ಬರ ಪರಿಹಾರ ಹಣ ಜಮೆಯಾಗಬೇಕಾದರೂ ರೈತರು ಫ್ರೂಟ್ಸ್ ಐಡಿ ಮಾಡಿಸಿರಲೇಬೇಕು. ಯಾರು ಫ್ರೂಟ್ಸ್ ಐಡಿ ಮಾಡಿಸಿಲ್ಲವೋ ಅಂತಹ ರೈತರು ತಮ್ಮ ಆಧಾರ್ ಕಾರ್ಡ್, ಜಮೀನಿನ ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ಪಡೆದು ತಮ್ಮ ಹತ್ತಿರದ ರೈತ ಸಂಪರ್ಕಿ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಎಫ್ಐಡಿ ಮಾಡಿಸಿಕೊಳ್ಳಬಹುದು.

Leave a Comment