Agave benefit : ಯಾವುದೇ ಖರ್ಚಿಲ್ಲದೆ ಬೆಳೆಯುವ ಕತ್ತಾಳೆ ಈಗ ಬೆಳೆಯುತ್ತಿರುವ ತಾಂತ್ರಿಕತೆಯಿಂದ ಕಣ್ಮರೆಯಾಗಿದೆ.
ಇದು ರೈತರಿಗೆ ಅತೀ ಉಪಯುಕ್ತವಾಗಿದೆ. ಹಿಂದಿನ ಕಾಲದಲ್ಲಿ ಕತ್ತಾಳೆಯಿಂದ ರೈತರಿಗೆ ಏನೇನು ಸಿಗುತ್ತಿತ್ತು? ಇದರಿಂದ ರೈತರಿಗೆ ಹೇಗೆ ಲಾಭವಾಗುತ್ತಿತ್ತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೋಮಾರಿಗಳನ್ನು ಕೆಲಸಕ್ಕೆ ಬಾರದ ಕತ್ತಾಳೆ ಎಂದು ಮೂದಲಿಸುತ್ತಿದ್ದರು. ಆದರೆ ಇಂದಿನ ಜನತೆಗೆ ಈ ಗಿಡದ ಹೆಸರೇ ಗೊತ್ತಿಲ್ಲ. ಕತ್ತಾಳೆ ಹೀಗೂ ಇತ್ತೇ ಎಂದು ಕೇಳುವಂತಾಗಿದೆ.
Agave benefit ಕತ್ತಾಳೆ ಗಿಡಗಳು ಎಲ್ಲಿ ಹೆಚ್ಚು ಬೆಳೆಯುತ್ತಿತ್ತು?
ಕತ್ತಾಳೆ ಗಿಡಗಳನ್ನು ನಾವಾಗಿ ಬೆಳೆಸುವ ಅಗತ್ಯವೇ ಇಲ್ಲ. ಇವು ತಾನಾಗಿಯೇ ಜಮೀನನ ಬದುವಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಕಾಡು ಪ್ರಾಣಿಗಳಿಂದ ಹಾಗೂ ಇತರ ಪಶುಗಳಿಂದ ರೈತರ ಜಮೀನಿಗೆ ರಕ್ಷಣೆ ನೀಡುತ್ತಿತ್ತು.
ಕಾಕ್ವಸ್ ಜಾತಿಗೆ ಸೇರಿದ್ದ ಈ ಕತ್ತಾಳೆ ಒಣ ಭೂಮಿ ಹಾಗೂ ಕಡಿಮೆ ಮಳೆ ಬರುವಂತಹ ಪ್ರದೇಶದಲ್ಲಿ ಬೆಳೆಯುತ್ತದೆ. ಹಿಂದೆ ಜಮೀನು ಜಮೀನುಇಲ್ಲದ ರೈತರು ಹಾಗೂ ಸಣ್ಣ ರೈತರಿಗೆ ಆದಾಯ ನೀಡುತ್ತಿತ್ತು. ಸಣ್ಣ ರೈತರಿಗೆ ಇದೊಂದು ಉಪ ಕಸುಬು ಆಗಿತ್ತು.
Agave benefit ಕತ್ತಾಳೆ ರೈತರಿಗೆ ಹೇಗೆ ಆದಾಯ ನೀಡುತ್ತಿತ್ತು?
ಹಿಂದೆ ಕೃಷಿ ಚಟುವಟಿಕೆಗೆ ಬೇಕಾಗುವ ಹಗ್ಗಗಳು ಈ ಕತ್ತಾಳೆಗಳಿಂದಲೇ ತಯಾರಾಗುತ್ತಿತ್ತು. ಬೇಸಿಗೆ ಕಾಲದಲ್ಲಿ ಮನೆ ಮುಂದೆ, ಮರಗಳ ಕೆಳಗೆ, ಗುಡಿ ಕಟ್ಟೆಗಳ ಮೇಲೆ ಕುಳಿತು ಹಗ್ಗ ನೆಯುತ್ತಿದ್ದರು. ಆದರೆ ಇಂದು ಪ್ಲಾಸ್ಟಿಕ್ ದಿಂದ ತಯಾರಿಸಿದ ಹಗ್ಗಗಳು ಬಂದಿದ್ದರಿಂದ ಈ ಕತ್ತಾಳೆಯ ಹಗ್ಗಗಳನ್ನು ಯಾರೂ ಬಳಸುತ್ತಿಲ್ಲ. ಈ ಕತತ್ಾಳೆಯ ನಾರಿನ ಬೇಡಿಕೆ ಸಹ ತುಂಬಾ ಕಡಿಮೆಯಾಗಿದೆ.
Agave benefit ಜಮೀನುಗಳ ರಕ್ಷಣೆಗೆ ಕತ್ತಾಳೆ ಬೆಳೆಯುತ್ತಿದ್ದರು?
ಈ ಹಿಂದೆ ತೋಟಗಳ ರಕ್ಷಣೆಗೆ ಬೇಲಿಯಂತೆ ಕತ್ತಾಳೆಯನ್ನು ಬೆಳೆಸುತ್ತಿದ್ದರು.ಯಾವುದೇ ಖರ್ಚಿಲ್ಲದೆ ಬೇಲಿಗೆ ಕತ್ತಾಳೆ ಬೆಳೆಸುತ್ತಿದ್ದರು. ಇದು ಹೊಲಗಳಿಗೆ ಕಾಡು ಪ್ರಾಣಿಗಳು ನುಗ್ದದಂತೆ ರಕ್ಷಣೆ ನೀಡುತ್ತಿತ್ತು. ಈ ಸಸ್ಯೆಗಳು ದಟ್ಟವಾಗಿ ಬೆಳೆಯುತ್ತವೆ. ಇದರೊಂದಿಗೆ ಇದರ ಎಲೆಗಳಲ್ಲಿ ಎರಡು ಬದಿಗಳಲ್ಲಿ ಮುಳ್ಳುಗಳಿರುವುದರಿಂದ ಯಾವುದೇ ಕಾಡು ಪ್ರಾಣಿಗಳು ಹೊಲಗಳಿಗೆ ಪ್ರವೇಶಿಸುತ್ತಿರಲಿಲ್ಲ.
ಇದನ್ನೂ ಓದಿ farmers FID ಬರ ಪರಿಹಾರಕ್ಕೆ ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ ಎಫ್ಐಡಿ ಚೆಕ್ ಮಾಡಿ 2024
ಬೇಸಿಗೆ ಕಾಲದಲ್ಲೂ ಈ ಬೆಳೆಗಳು ಬಾಡುವುದಿಲ್ಲ. ಈ ಗಿಡಗಳಿಗೆ ಯಾವುದೇ ರೋಗಗಳು ಬರುವುದಿಲ್ಲ. ಹಾಗಾಗಿ ರೈತರ ಜಮೀನುಗಳಿಗೆ ಸದಾ ರಕ್ಷಣೆ ನೀಡುತ್ತವೆ ಈ ಕತ್ತಾಳೆ.
Agave benefit ಕತ್ತಾಳೆಯಿಂದ ನಾರು ಹೇಗೆ ತಯಾರಿಸುತ್ತಿದ್ದರು?
ಬೇಸಿಗೆ ಕಾಲದಲ್ಲಿ ರೈತರು ಕಾಡಿನಲ್ಲಿ ಹಾಗೂ ಜಮೀನಿನ ಬದುಗಳಲ್ಲಿ ಯಥೇಚ್ಚವಾಗಿ ಬೆಳೆಯುವ ಕತ್ತಾಳೆಯ ಎಲೆಗಳನ್ನು ಕತ್ತರಿಸಿ ಹತ್ತಿರದ ಹಳ್ಳಕೊಳ್ಳಗಳಲ್ಲಿ ನೆನೆಹಾಕುತ್ತಿದ್ದರು. ಒಂದು ವಾರದ ನಂತರ ಈ ಎಲೆಗಳನ್ನು ಹೊರಗೆ ತೆಗೆದು ಬಂಡೆಗಳಿಗೆ ಬಡಿದು ನಾರು ತೆಗೆಯುತ್ತಿದ್ದರು. ನಂತರ ಈ ನಾರನ್ನು ಬಿಸಿಲಿಗೆ ಒಣಗಿಸುತ್ತಿದ್ದರು. ಸಂಪೂರ್ಣವಾಗಿ ಒಣಗಿದ ನಂತರ ಇದರ ಬಣ್ಣ ನೋಡಕ್ಕೆ ಸುಂದರವಾಗಿ ಕಾಣಿಸುತ್ತಿತ್ತು. ಇದರ ವಾಸನೆ ಅಷ್ಟೇನು ಸರಿಯಾಗಿರುತ್ತಿರಲಿಲ್ಲ. ಬಿಸಿಲಿಗೆ ಒಣಗಿದ ನಾರಿನಿಂದ ಬಾರುಕೋಲು, ಸುತಳಿ ತಯಾರಿಸುತ್ತಿದ್ದರು. ಇದರೊಂದಿಗೆ ಮಣ್ಣಿನ ಮಡಕೆ, ಗಡಿಗೆಗಳನ್ನು ಇರಿಸಲು ಬೇಕಾಗುವ ಸಿಂಬೆಗಳನ್ನು ತಯಾರಿಸುತ್ತಿದ್ದರು, ರೈತರು ಸಾಕಿದ ದನಕರು, ಎಮ್ಮೆ ಹಾಗೂ ಎತ್ತುಗಳ ಕಟ್ಟಲು ಸಹ ಈ ನಾರನ್ನೇ ಬಳಸುತ್ತಿದ್ದರು. ಆದರೆ ಇಂದು ಇದು ಕಣ್ಮರೆಯಾಗಿದೆ.
Agave benefit ಕತ್ತಾಳೆಯ ಸಿಪ್ಪೆ ಬೆಳೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತಿತ್ತು?
ಕತ್ತಾಳೆಯ ನಾರು ತೆಗೆದ ನಂತರ ಉಳಿಯುವ ಸಿಪ್ಪೆ ರೈತರಿಗೆ ಉತ್ತಮ ಗೊಬ್ಬರ ಸಹ ಆಗುತ್ತಿತ್ತು. ಈ ಗಿಡಗಳು ರೈತರ ಬೆಳೆಗಳಿಗೆ ತಗಲುವ ರೋಗಕ್ಕೆ ಔಷಧವಾಗುತ್ತದೆ. ರೋಗ ನಿಯಂತ್ರಣವಾಗಿ ಕೆಲಸ ಮಾಡುವ ಈ ಕತ್ತಳೆ ನೋಡಕ್ಕೆ ಅಲ್ಲೊಂದು ಇಲ್ಲೊಂದು ಕಡಿಮೆ ಕಾಣಿಸುತ್ತಿದೆ.
ಈ ಕತ್ತಾಳೆಯನ್ನು ನಿಮ್ಮ ಕಡೆ ಏನೆಂದು ಕರೆಯುತ್ತಾರೆ ಎಂಬುದರ ಬಗ್ಗೆ ಸಣ್ಣ ಕಾಮೆಂಟ್ ಮಾಡಲು ಮನವಿ.