Ekyc pending list : ಫ್ರೂಟ್ಸ್ ಐಡಿ ಪಡೆದು ಇಕೆವೈಸಿ ಆಗದೆ ಇರುವ ರೈತರ ಪಟ್ಟಿ ಬಿಡುಗಡೆಯಾಗಿದೆ. ಯಾವ ಯಾವ ರೈತರ ಇಕೆವೈಸಿ ಆಗಿಲ್ಲವೋ ಅಂತಹ ರೈತರು ತಮ್ಮ ಹೆಸರಿಗೆ ಎಫ್ಐಡಿ ಇದ್ದು, ಇಕೆವೈಸಿ ಆಗಿಲ್ಲವೇ ಎಂಬುದನ್ನು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ತಮಗೆಲ್ಲಾ ಗೊತ್ತಿದ್ದ ಹಾಗೆ, ಈಗ ಪ್ರತಿಯೊಬ್ಬ ರೈತರ ಹೆಸರಿಗೆ ಫ್ರೂಟ್ಸ್ ಐಡಿ (ಎಪ್ಐಡಿ) ಇರುವುದು ಕಡ್ಡಾಯವಾಗಿದೆ. ಯಾವ ರೈತರ ಹೆಸರಿಗೆ ಎಫ್ಐಡಿ ಇಲ್ಲವೋ ಅಂತಹ ರೈತರ ಖಾತೆಗೆ ಬರ ಪರಿಹಾರ, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಹಣ ಜಮೆಯಾಗುವುದಿಲ್ಲ. ಇದರೊಂದಿಗೆ ಸರ್ಕಾರದ ಸೌಲಭ್ಯಗಳು ಪಡೆಯಲು ಎಫ್ಐಡಿ ಇರುವುದು ಕಡ್ಡಾಯವಾಗಿದೆ.
Ekyc pending list ನಿಮ್ಮ ಹೆಸರಿಗೆ ಇಕೆವೈಸಿ ಆಗಿಲ್ಲವೇ? ಇಲ್ಲೇ ಚೆಕ್ ಮಾಡಿ
ರೈತರು ತಮ್ಮ ಹೆಸರಿಗೆ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನ ಚೆಕ್ ಮಾಡಬಹುದು. ಯಾರ ಯಾರ ಹೆಸರಿಗೆ ಇಕೆವೈಸಿ ಆಗಿಲ್ಲವೋ ಅಂತಹವರ ಹೆಸರು ಬಿಡುಗಡೆಯಾಗಿದೆ. ಯಾರ ಯಾರ ಹೆಸರಿಗೆ ಇಕೆವೈಸಿ ಆಗಿಲ್ಲವೋ ಅಂತಹರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಚೆಕ್ ಮಾಡಲು ಈ
https://fruitspmk.karnataka.gov.in/MISReport/EKYCPendingList.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇಕೆವೈಸಿ ಪೆಂಡಿಂಗ್ ಲಿಸ್ಟ್ ಕಾಣಿಸುತ್ತದೆ. ಜಿಲ್ಲೆ ಹಾಗೂ ಯಾವ ಜಿಲ್ಲೆಯಿಂದ ಎಷ್ಟು ರೈತರು ಇಕೆವೈಸಿ ಆಗಿಲ್ಲ ಎಂಬುದು ಕಾಣಿಸುತ್ತದೆ. ನಿಮ್ಮ ಹೆಸರು ಚೆಕ್ ಮಾಡಲು ನಿಮ್ಮ ಜಿಲ್ಲೆ ಮೇಲೆ ಮುಂದಿರುವ ನಂಬರ್ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮಗೆ ಎಕ್ಸೆಲ್ ಶೀಟ್ ಡೌನ್ಲೋಡ್ ಆಗುತ್ತದೆ. ಆ ಶೀಟ್ ಓಪನ್ ಮಾಡಬೇಕು. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ನೀವು ಇಕೆವೈಸಿ ಮಾಡಿಸಿಕೊಳ್ಳಬೇಕು.
Ekyc pending list ಇಕೆವೈಸಿ ಮಾಡಲು ಯಾವ ಯಾವ ದಾಖಲೆ ಬೇಕು?
ಇಕೆವೈಸಿ ಮಾಡಿಸಲು ರೈತರ ಬಳಿ ಮೊದಲು ಆಧಾರ್ ಕಾರ್ಡ್ ಇರಬೇಕು. ಜಮೀನಿನ ಪಹಣಿ ಅಂದರೆ ಎಲ್ಲಾ ಸರ್ವೆ ನಂಬರ್ ಗಳ ಪಹಣಿ ಇರಬೇಕು. ನಿಮ್ಮ ಬ್ಯಾಂಕ್ ಪಾಸ್ ಬುಕ್ ಇರಬೇಕು.
Ekyc pending list ಫ್ರೂಟ್ಸ್ ಐಡಿ ನಿಮ್ಮ ಹೆಸರಿಗೆ ಇದೆಯೋ ಇಲ್ಲವೋ ಇಲ್ಲೇ ಚೆಕ್ ಮಾಡಿ
ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದ್ದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ ಚೆಕ್ ಮಾಡಬಹುದು. ಹೌದು, ಆನ್ನಲೈನ್ ನಲ್ಲಿ ಪ್ರೂಟ್ಸ್ ಐಡಿ ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮರ್ಸ್ ಡಿಟೇಲ್ ಕೆಳಗಡೆ ನಿಮ್ಮ ಆಧಾರ್ ನಂಬರ್ ನಮೂದಿಸಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದ್ದರೆ ನಿಮ್ಮ ಹೆಸರು, ಫ್ರೂಟ್ಸ್ ಐಡಿ ನಂಬರ್ ಕಾಣಿಸುತ್ತದೆ.ಈ ಫ್ರೂಟ್ಸ್ ಐಡಿ ನಂಬರ್ ಸಹಾಯದಿಂದ ನೀವು ಸರ್ಕಾರಿ ಯೋಜನೆಗಳ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆಯಬಹುದು.
Ekyc pending list ಫ್ರೂಟ್ಸ್ ಐಡಿ ಏಕೆ ಕಡ್ಡಾಯವಾಗಿದೆ?
ಈಗ ಫ್ರೂಟ್ಸ್ ಐಡಿ ಮಾಡಿಸುವುದು ಕಡ್ಡಾಯವಾಗಿದೆ. ಹೌದು, ಫ್ರೂಟ್ಸ್ ತಂತ್ರಾಂಶದಲ್ಲಿ ಭೂ ವಿವರಗಳನ್ನು ರೈತರು ನೋಂದಾಯಿಸಿಕೊಳ್ಳಬೇಕು. ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದ ನೋಂದಣಿಯು ಕಡ್ಡಾಯವಾಗಿದೆ. ಕೂಡಲೇ ರೈತರು ತಮ್ಮಮಾಲಿಕತ್ವಕ್ಕೆ ಒಳಪಡುವ ಎಲ್ಲಾ ಸರ್ವೆ ನಂಬರ್ ಗಳ ದಾಖಲಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಬೇಕಾಗುತ್ತದೆ.
ಇದನ್ನೂ ಓದಿ :
ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ವೈಯಕ್ತಿಕ ಮಾಹಿತಿ, ಜಮೀನಿನ, ಬೆಳೆಯ ವಿವರ ಹಾಗೂ ಈ ಹಿಂದೆ ಸರ್ಕಾರದಿಂದ ಪಡೆದ ಎಲ್ಲಾ ಇಲಾಖೆಗಳ ಸವಲತ್ತಿನ ವಿವರ ಒಳಗೊಂಡಿರುತ್ತದೆ. ರೈತರು ಸರ್ಕಾರದ ಯಾವುದೇ ಇಲಾಖೆಯಲ್ಲಿ ಸವಲತ್ತು ಪಡೆಯಲು ಪ್ರತಿ ಸಲ ದಾಖಲಾತಿ ನೀಡುವ ಅವಶ್ಯಕತೆ ಇರುವುದಿಲ್ಲ. ಕೃಷಿ ಇಲಾಖೆಯಿಂದ ಪಿಎಂ ಕಿಸಾನ್ ಹಾಗೂ ಬೆಳೆ ವಿಮೆ, ರೇಷ್ಮೆ ಇಲಾಖೆಯಿಂದ ಫ್ರೂಟ್ಸ್ ನೋಂದಾಯಿತ ರೈತರಿಗೆ ಸವಲತ್ತು ನೀಡಲಾಗುತ್ತಿದೆ. ಪಶು ಸಂಗೋಪನೆ ಇಲಾಖೆಯಿಂದ ಪಶುಭಾಗ್ಯ, ಕೆಎಂಎಫ್ ಪ್ರೋತ್ಸಾಹಧನ, ಸಹಕಾರ ಇಲಾಖೆಯಿಂದ ಬೆಂಬಲ ಬೆಲ ಯೋಜನೆ ಹಾಗೂ ಬೆಳೆ ಹಾನಿ ಪರಿಹಾರಕ್ಕೆ ಫ್ರೂಟ್ಸ್ ಐಡಿ ಬೇಕಾಗುತ್ತದೆ.
ಇಕೆವೈಸಿ ಎಲ್ಲಿ ಮಾಡಿಸಬೇಕು?
ರೈತರು ತಮ್ಮ ಇಕೆವೈಸಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಮಾಡಿಸಿಕೊಳ್ಳಬೇಕು. ಇಕೆವೈಸಿ ಮಾಡಿಸುವುದುಅತೀ ಮಹತ್ವದ್ದಾಗಿದೆ.