Bele salamanna status ನಿಮ್ಮೂರಿನಲ್ಲಿ ಯಾರು ಯಾರಿಗೆ ಬೆಳೆ ಸಾಲಮನ್ನಾ ಆಗಿದೆ? ಇಲ್ಲೇ ಚೆಕ್ ಮಾಡಿ

Written by Admin

Updated on:

Spread the love

Bele salamanna status : ರೈತರಿಗೆ ಗುಡ್ ನ್ಯೂಸ್. ಈಗ ಯಾವ ಯಾವ ರೈತರಿಗೆ ಬೆಳೆ ಸಾಲಮನ್ನಾ ಆಗಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ರೈತರೇ ತಮಗೆಲ್ಲಾ ಗೊತ್ತಿದ್ದ ಹಾಗೆ 2018 ರಲ್ಲಿ ಬೆಳೆ ಸಾಲಮನ್ನಾ ಮಾಡಲಾಗಿತ್ತು. ಆಗ ಕೆಲವು ರೈತರಿಗೆ ಬೆಳೆ ಸಾಲ ಮನ್ನಾ ಆಗಿದ್ದರೆ ಇನ್ನೂ ಕೆಲವರಿಗೆ ಬೆಳೆ ಸಾಲಮನ್ನಾ ಆಗಿದ್ದಿಲ್ಲ. ಏಕೆಂದರೆ  ಕೆಲವು ತಾಂತ್ರಿಕ ಕಾರಣಗಳಿಂದ ಕೆಲವು ರೈತರ ಬೆಳೆ ಸಾಲಮನ್ನಾ ಆಗಿದ್ದಿಲ್ಲ.  ತಾಂತ್ರಿಕ ದೋಷಗಳನ್ನು ಸರಿಪಡಿಸಿ ಸಾಲಮನ್ನಾ ಪ್ರಕ್ರಿಯೆ ಪೂರ್ಣ ಗೊಳಿಸಲಾಗುತ್ತಿದೆ. ಈಗ ಕೆಲವು ರೈತರಿಗೆ ಬೆಳೆ ಸಾಲಮನ್ನಾ ಆಗಿದೆ.

ರೇಶನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಪಹಣ ಪತ್ರಿಕೆಯಲ್ಲಿ ಹೆಸರು ವ್ಯತ್ಯಾಸವಿದ್ದರಿಂದ ಕೆಲವು ರೈತರು ಸಾಲಮನ್ನಾ ಭಾಗ್ಯದಿಂದ ಹೊರಗುಳಿದಿದ್ದರು. ಈಗ ದಾಖಲೆಗಳನ್ನು ಪರಿಶೀಲಿಸಿ ನಿಜವಾದ ಫಲಾನುಭವಿಗಳ ರೈತರ ಸಾಲಮನ್ನಾ ಆಗಿದೆ. ಅಂದರೆ ದಾಖಲಾತಿಗಳ ಪರಿಶೀಲನೆಯಾದ ನಂತರ ಕೆಲವರಿಗೆ ಸಾಲಮನ್ನಾ ಆಗಿದೆ.  ನಿಮ್ಮ ಬೆಳೆ ಸಾಲಮನ್ನಾ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ  ಚೆಕ್ ಮಾಡಬಹುದು.

Bele salamanna status ನಿಮ್ಮ ಬೆಳೆ ಸಾಲಮನ್ನಾ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ  ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಕೇವಲ ಒಂದೇ ನಿಮಿಷದಲ್ಲಿ ಬೆಳೆ ಸಾಲಮನ್ನಾ ಸ್ಟೇಟಸ್ ನ್ನು ಚೆಕ್ ಮಾಡಬಹುದು.

Bele salamanna status ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆದವರು ಸ್ಟೇಟಸ್ ಹೀಗೆ ಚೆಕ್ ಮಾಡಿ

ನೀವು ವಾಣಿಜ್ಯ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆದಿದ್ದರೆ ನಿಮ್ಮ ಸಾಲ ಮನ್ನಾ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ವಾಣಿಜ್ಯ ಬ್ಯಾಂಕಿಗೆ ಸಾಲಮನ್ನಾ ವರದಿ ಕಾಣಿಸುತ್ತದೆ. ಅಲ್ಲಿ ನೀವು ರೈತ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.  ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾರು ಯಾರು ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ ಅವರ ಸಾಲಮನ್ನಾ ರಿಪೋರ್ಟ್ ಓಪನ್ ಆಗುತ್ತದೆ.

ಇದನ್ನೂ ಓದಿ Pm kisan eligibility ಈ ಪಟ್ಟಿಯಲ್ಲಿರುವ ರೈತರಿಗೆ ಮಾತ್ರ ಪಿಎಂ ಕಿಸಾನ್ 18ನೇ ಕಂತಿನ ಹಣ ಜಮೆ

ನಿಮ್ಮ ಹೆಸರು, ಯಾವ ಬ್ಯಾಂಕಿನಲ್ಲಿ ಸಾಲ ಪಡೆಯಲಾಗಿದೆ, ಬ್ಯಾಂಕ್ ಶಾಖೆಯ ಹೆಸರು, ನಿಮ್ಮ ಸಾಲ ಯಾವ ಪ್ರಕಾರದ್ದು, ಹಾಗೂ ನೀವು ಎಷ್ಟು ಸಾಲ ಪಡೆದಿದ್ದೀರಿ ನಿಮಗೆ ಹಸಿರು ಪಟ್ಟಿಯಲ್ಲಿ ಸೇರಿಲಾಗಿದೆಯೇ? ನಿಮಗೆಷ್ಟು ಸಾಲ ಮನ್ನಾ ಆಗಿದೆ. ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಹಾಗೂ ಪಡಿತರ ಚೀಟಿ ಸಂಖ್ಯೆ ಸಂಖ್ಯೆಯ ಮಾಹಿತಿ ಇರುತ್ತದೆ.  ಈ ಆಧಾರದ ಮೇಲೆ ರೈತರು ತಮಗೆಷ್ಟು ಬೆಳೆಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

Bele salamanna status ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಪಡೆದ ಸಾಲಮನ್ನಾಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿದೆ ಸಾಲ ಪಡೆದಿದ್ದರೆ ಸ್ಟೇಟಸ್ ಚೆಕ್ ಮಾಡಲು ಈ

https://mahitikanaja.karnataka.gov.in/Revenue/LoanWaiverReportPACSNew?ServiceId=2060&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಮಾದರಿ ಕೆಳಗಡೆ ರೈತ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕ ಮಾಡಿಕೊಂಡು ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮ್ಮೂರಿನಲ್ಲಿ ಯಾರು ಯಾರಿಗೆ ಬೆಳೆ ಸಾಲಮನ್ನಾ ಆಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ಹಾಗಾಗಿ ಇಲ್ಲಿ ರೈತರು ತಮ್ಮ ಹೆಸರು ಈಗಲೇ ಚೆಕ್ ಮಾಡಿಕೊಳ್ಳಬಹುದು. ನಿಮ್ಮ ಹೆಸರಿನೊಂದಿಗೆ ನಿಮ್ಮ ಊರಿನಲ್ಲಿ ಯಾರು ಯಾರಿಗೆ ಬೆಳೆ ಸಾಲಮನ್ನಾ ಭಾಗ್ಯ ಸಿಕ್ಕಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

Leave a Comment