Aadhaar seeding ಬ್ಯಾಂಕಿನಲ್ಲಿ ರೈತರು ತಮ್ಮ ಆಧಾರ್ ಸೀಡಿಂಗ್ ಮಾಡಿಸಿದರೆ ಮಾತ್ರ ಮುಂದಿನ ಪಿಎಂ ಕಿಸಾನ್ 18ನೇ ಕಂತಿನ ಹಣ ಜಮೆಯಾಗಲಿದೆ.
ಹೌದು, ಯಾವ ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಿಲ್ಲವೋ ಅಂತಹ ರೈತರು ಕೂಡಲೇ ತಮ್ಮ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಕಾರ್ಡ್ ದೊಂದಿಗೆ ಬಯೋಮೆಟ್ರಿಕ್ ನೀಡಿ ಆಧಾರ್ ಸೀಡ್ ಮಾಡಿಸಬೇಕು. ಆಧಾರ್ ಸೀಡಿಂಗ್ ಎಲ್ಲಿ ಮಾಡಿಸಬೇಕು? ಹೇಗೆ ಮಾಡಿಸಬೇಕು? ನಿಮ್ಮ ಹೆಸರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
Aadhaar seeding ಆಧಾರ್ ಸೀಡಿಂಗ್ ಮಾಡಿಸುವ ಮುನ್ನ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯ ಮಂದಿನ ಕಂತು ನಿಮಗೆ ಜಮೆಯಾಗುವ ಮುನ್ನ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದು ಕೊಳ್ಳುತ್ತದೆ. ಅಲ್ಲಿ ನೀವು ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗಲಿದೆ. ಅಲ್ಲಿ ನಿಮ್ಮ ಹೆಸರು ನೀವು ಚೆಕ್ ಮಾಡಿಕೊಳ್ಳಬಹುದು.
Aadhaar seeding ಪಿಎಂ ಕಿಸಾನ್ ಯೋಜನೆಗೆ ಅರ್ಹತೆಯೊಂದಿಗೆ ಎಲ್ಲಾ ದಾಖಲೆಯಲ್ಲಿ ಹೆಸರು ಒಂದೇ ರೀತಿಯಾಗಿರಬೇಕು
ರೈತರ ಹೆಸರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದೇ ರೀತಿಯಾಗಿರಬೇಕು. ಹೆಸರು ಸ್ವಲ್ಪ ವ್ಯತ್ಯಾಸವಾಗಿದ್ದರೂ ಸಹ ಮುಂದಿನ 18ನೇ ಕಂತು ರೈತರಿಗೆ ಎಲ್ಲಾ ಅರ್ಹತೆಯಿದ್ದರೂ ಸಹ ಜಮೆಯಾಗುವುದಿಲ್ಲ. .
Aadhaar seeding ಪಿಎಂ ಕಿಸಾನ್ ರೈತರ ಇಕೆವೈಸಿ ಕಡ್ಡಾಯವಾಗಿ ಆಗಿರಬೇಕು?
ಪಿಎಂ ಕಿಸಾನ್ ಯೋಜನೆಯ 18ನೇ ಕಂತು ಪಡೆಯಲು ರೈತರು ಇಕೆವೈಸಿ ಕಡ್ಡಾಯವಾಗಿ ಮಾಡಿಸಿರಬೇಕು. ಇಲ್ಲದಿದ್ದರೆ ಅಂತಹ ರೈತರಿಗೆ ಹಣ ಜಮೆಯಾಗುವುದಿಲ್ಲ. ನಿಮ್ಮದು ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
Aadhaar seeding ಆಧಾರ್ ಸೀಡಿಂಗ್ ಹೇಗೆ ಮಾಡಿಸಬೇಕು?
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾದ ನಿಮ್ಮ ಬ್ಯಾಂಕ್ ಅಕೌಂಟ್ ವಿವಿಧ ಶಾಖೆಗಳಲ್ಲಿದ್ದರೆ ನಿಮಗೆ ಯಾವ ಬ್ಯಾಂಕ್ ಖಾತೆಗೆ ನಿಮಗೆ ಪಿಎಂಕಿಸಾನ್ ಹಣ ಜಮೆಯಾಗುತ್ತಿದೆಯೋ ಅದೇ ಬ್ಯಾಂಕಿಗೆ ಹೋಗಬೇಕು.
ಇದನ್ನೂ ಓದಿ : Measure your land ನಿಮ್ಮ ಜಮೀನು ಮೊಬೈಲ್ ನಲ್ಲಿ ಹೀಗೆ ಅಳತೆ ಹೀಗೆ ಮಾಡಿ
ಅಲ್ಲಿ ನೀವು ಬ್ಯಾಂಕ್ ಸಿಬ್ಬಂದಿಯ ಬಳಿ ಆಧಾರ್ ಸೀಡ್ ಅರ್ಜಿ ಪಡೆದುಕೊಳ್ಳಬೇಕು. ನಂತರ ಅಲ್ಲಿಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಬಯೋಮೆಟ್ರಿಕ್ ಆಧಾರ್ ಸೀಡಿಂಗ್ ಮಾಡಿಸಬೇಕು. ನಂತರ ನಿಮಗೆ ಪೆಂಡಿಂಗ್ ಹಣವೂ ಜಮೆಯಾಗುವ ಸಾಧ್ಯತೆಯಿದೆ.
Aadhaar seeding ಪಿಎಂ ಕಿಸಾನ್ ಮುಂದಿನ ಕಂತು ಯಾವಾಗ ಜಮೆಯಾಗಲಿದೆ?
ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಸೆಪ್ಟೆಂಬರ್ ತಿಂಗಳಲ್ಲಿ ಜಮೆಯಾಗಲಿದೆ. ಹೌದು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಕಳೆದ ಜೂನ್ ತಿಂಗಳಲ್ಲಿ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಜಮೆಯಾಗಿತ್ತು. ಹಾಗಾಗಿ ನಿಮಗೆ 18 ನೇ ಕಂತಿನ ಹಣ ಸೆಪ್ಟೆಂಬರ್ ತಿಂಗಳಲ್ಲಿ ಜಮೆಯಾಗಲಿದೆ. ಹಾಗಾಗಿ ನೀವು ನಿಮ್ಮ ಆಧಾರ್ ಸೀಡ್ ಮಾಡಿಸಿಕೊಂಡರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಿಂದಿನ ಯಾವ ಯಾವ ಕಂತು ಜಮೆಯಾಗಿಲ್ಲವೋ ಆ ಎಲ್ಲಾಕಂತುಗಳು ಜಮೆಯಾಗುವ ಸಾಧ್ಯತೆಯಿದೆ.