Farm 9 and 11B document ರೈತರು, ಸಾರ್ವಜನಿಕರು ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಆಸ್ತಿಗಳ ದಾಖಲೆಗಳನ್ನು ಕೇವಲ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಬಹುದು.
ಹೌದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಆಸ್ತಿಗಳು ಯಾವುವು? ಇ ಸ್ವತ್ತು ಎಂದರೇನು? ಇ-ಸ್ವತ್ತು ಮೂಲಕ ಫಾರ್ಮ್ 9 ಹಾಗೂ 11 ಬಿ ದಾಖಲೆಗಳನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ .
ಇದಕ್ಕಾಗಿ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಯಾರ ಸಹಾಯವೂ ಇಲ್ಲದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಫಾರ್ಮ 9 ಹಾಗೂ 11 ಬಿ ದಾಖಲೆಗಳನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
Farm 9 and 11B document ಫಾರ್ಮ್ 9 ಮತ್ತು ಫಾರ್ಮ್ 11ಬಿ ಎಂದರೇನು?
ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕೃಷಿಯೇತರ ಆಸ್ತಿಗಳಿಗಾಗಿ ರಚಿಸಿರುವ ರೂಪಗಳನ್ನು ಫಾರ್ಮ್ 9 ಮತ್ತು ಫಾರ್ಮ್ 11ಬಿ ಎಂದು ಕರೆಯುತ್ತಾರೆ. ಫಾರ್ಮ್ 9 ಮತ್ತು 11ಬಿ ನ್ನು ಆಸ್ತಿ ತೆರಿಗೆ ಸಂಗ್ರಹಣೆಗಾಗಿ ಬಳಸಲಾಗುತ್ತದೆ. ಗ್ರಾಮ ಪಂಚಾಯತಿ ವಿಧಿಸುವ ಆಸ್ತಿ ತೆರಿಗೆ ಪಾವತಿಸಲು ಈ ದಾಖಲೆ ಕಡ್ಡಾಯವಾಗಿದೆ.
Farm 9 and 11B document ಫಾರ್ಮ 9 ಹಾಗೂ 11ಬಿ ದಾಖಲೆ ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ?
ಫಾರ್ಮ 9 ಹಾಗೂ 11 ಬಿ ದಾಖಲೆಗಳನ್ನು ಡೌನ್ಲೋಡ್ ಮಾಡಲು ಹಾಗೂ ಚೆಕ್ ಮಾಡಲು ಈ
https://eswathu.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ ಸ್ವತ್ತು ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆಸ್ತಿಗಳ ಶೋಧನೆ (Search Your Property) ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮ 9 ಮತ್ತು ಫಾರ್ಮ 11ಬಿ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ಎರಡೂ ಕಡೆ ಫಾರ್ಮ 9 ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಂಡ ನಂತರ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಪ್ರಾಪರ್ಟಿ ಐಡಿ ಗೊತ್ತಿಲ್ಲದಿದ್ದರೆ ನಿಮ್ಮ ಹೆಸರು ನಮೂದಿಸಿ All ಆಯ್ಕೆಮಾಡಿಕೊಂಡು ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : Measure your land ನಿಮ್ಮ ಜಮೀನು ಮೊಬೈಲ್ ನಲ್ಲಿ ಹೀಗೆ ಅಳತೆ ಹೀಗೆ ಮಾಡಿ
ಆಗ ನಿಮ್ಮ ಹೆಸರು ಹಾಗೂ ಆಸ್ತಿಯ ಪ್ರಾಪರ್ಟಿ ಐಡಿ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಆಸ್ತಿಯ ಐಡಿ ಕಾಪಿ ಮಾಡಿಕೊಂಡು Property ID ಬಾಕ್ಸ್ ನಲ್ಲಿ ಪೇಸ್ಟ್ ಮಾಡಬೇಕು. ನಂತರ Printed forms ಆಯ್ಕೆ ಮಾಡಿಕೊಳ್ಳಬೇಕು . ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿಡಾಕುಮೆಂಟ್ ನಂಬರ್, ಪ್ರಿಂಟೆಡ್ ಡೇಟ್, ಪ್ರಾಪರ್ಟಿ ಐಡಿ, ಮಾಲೀಕರ ಹೆಸರು, ಗ್ರಾಮ, ಸರ್ವೆ ನಂಬರ್ ಹಾಗೂ ಪ್ಲಾಟ್ ನಂಬರ್ ಕಾಣುತ್ತದೆ. ಡಾಕುಮೆಂಟ್ ನಂಬರ್ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Form 9 ಡೌನ್ಲೋಡ್ ಆಗುತ್ತದೆ. ಅದೇ ಡಾಕುಮೆಂಟ್ ನಂಬರ್ ಕಾಪಿ ಮಾಡಿಕೊಳ್ಳಬೇಕು. ಅದೇ ಪಾಸ್ವರ್ಡ್ ಆಗಿರುತ್ತದೆ. ಡೌನ್ಲೋಡ್ ಆದ ಫೈಲ್ ಪಿಡಿಎಫ್ ಫೈಲ್ ನಲ್ಲಿರುತ್ತದೆ. ಅದನ್ನು ಓಪನ್ ಮಾಡುವಾಗ ಪಾಸ್ವರ್ಡ್ ಕೇಳಲಾಗುತ್ತದೆ. ನೀವು ಕಾಪಿ ಮಾಡಿಕೊಂಡ ಡಾಕುಮೆಂಟ್ ನಂಬರನ್ನು ಅಲ್ಲಿಪೇಸ್ಟ್ ಮಾಡಬೇಕು. ಆಗ ನಿಮ್ಮ ಆಸ್ತಿಯ ಫಾರ್ಮ್ 9 ಓಪನ್ ಆಗುತ್ತದೆ.
Farm 9 and 11B document ಇ-ಸ್ವತ್ತು ಎಂದರೇನು?
ಇ-ಸ್ವತ್ತು ತಂತ್ರಾಂಶ ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಆಸ್ತಿಗಳ ನಿರ್ವಹಣೆಗೆ ಸರ್ಕಾರ ರೂಪಿಸಿರುವ ಇ ಆಡಳಿತ ಪರಿಹಾರವಾಗಿದೆ. ಇ ಸ್ವತ್ತು ಮೂಲಕ ರಾಜ್ಯಾದ್ಯಂತ ಕೃಷಿಯೇತರ ಆಸ್ತಿಗಳ ನಿರ್ವಹಣೆ ಮಾಡಲಾಗುವುದು. ಇ-ಸ್ವತ್ತು ತಂತ್ರಾಂಶವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಾರಿಗೊಳಿಸಲಾಗಿದೆ..
ಈ ಸ್ವತ್ತು ಪೋರ್ಟಲ್ ನಿಂದ ನೀವು ಫಾರ್ಮ್ 9 ಮತ್ತು ಫಾರ್ಮ್ 11ಬಿ ಎರಡೂ ಪ್ರಮುಖ ದಾಖಲೆಗಳನ್ನು ನೋಡಬಹುದು ಹಾಗೂ ಡೌನ್ಲೋಡ್ ಮಾಡಿಕೊಳ್ಳಬಹುದು.