Bara Parihara raitara list ಬರ ಪರಿಹಾರ ಹೊಸ ಲಿಸ್ಟ್ ಬಿಡುಗಡೆ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ 2024

Written by Admin

Updated on:

Spread the love

Bara Parihara raitara list ಬರಗಾಲ ಪರಿಹಾರ ಹಣ ಯಾವ ಯಾವ ರೈತರಿಗೆ ಸಿಗಲಿದೆ? ಯಾವ ರೈತರಿಗೆ ಸಿಗುವುದಿಲ್ಲ ಎಂಬುದರ ಹೊಸ ಪಟ್ಟಿ  ಬಿಡುಗಡೆಯಾಗಿದೆ.

ಹೌದು,ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಯಾರ ಸಹಾಯವೂ ಇಲ್ಲದೆ ಕೆಳಗಡೆ ನೀಡಲಾದ ಸಿಂಪಲ್ ಸ್ಟೆಪ್ ಬಳಸಿ ಬರಗಾಲ ಪರಿಹಾರ ಪಡೆಯುವ ರೈತರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನುಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಬರಗಾಲ ಪರಿಹಾರ ಹಣಕ್ಕಾಗಿ ಕಾಯುತ್ತಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಇದೇನಪಾ ಅದ್ಯಾವುದು ಸಂತಸದ ಸುದ್ದಿ

Bara Parihara raitara list ಬರಗಾಲ ಪರಿಹಾರ ಯಾವ ರೈತರಿಗೆ ಸಿಗಲಿದೆ ಎಂಬ ಲಿಸ್ಟ್ ನಲ್ಲಿ  ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

ಬರಗಾಲ ಪರಿಹಾರ ಪಡೆಯುವವರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/FarmerDeclarationReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ.  ಹೌದು, ತೆರೆದುಕೊಳ್ಳುವ ಪೇಜ್ ನಲ್ಲಿ ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು  ಆಯ್ಕೆ ಮಾಡಿಕೊಂಡು ವೀಕ್ಷಿಸು ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ  ಬರಗಾಲ ಪರಿಹಾರ ಪಡೆಯುವವರ ಪಟ್ಟಿ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಅಲ್ಲಿ ನಿಮ್ಮ ಹೆಸರು ನಿಮ್ಮ ಊರಿನ ಇತರ ರೈತರ ಹೆಸರುಗಳೂ ಸಹ ಕಾಣಿಸುತ್ತದೆ.

Bara Parihara raitara list ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದೆಯೋ ಇಲ್ಲವೋ  ಮೊಬೈಲ್ ನಲ್ಲೇ ಚೆಕ್ ಮಾಡಿ

ಬರ ಪರಿಹಾರ ಪಡೆಯುವವರ ಲಿಸ್ಟ್ ನಲ್ಲಿ ರೈತರ ಹೆಸರು ಇರುವುದರೊಂದಿಗೆ ಫ್ರೂಟ್ಸ್ ಐಡಿ ತಮ್ಮ ಹೆಸರಿಗೆ ಆಗಿದೆಯೋ ಇಲ್ಲವೋಎಂಬುದನ್ನು ಇಲ್ಲೇ ಚೆಕ್ ಮಾಡಿಕೊಳ್ಳಬೇಕು. ಹೌದು, ಫ್ರೂಟ್ಸ್ ಐಡಿ ಇದ್ದರೆ ಮಾತ್ರ ಮುಂದೆ ಸರ್ಕಾರದ ಸೌಲಭ್ಯಗಳು ರೈತರಿಗೆ ಸಿಗುತ್ತವೆ.

ನಿಮ್ಮ ಹೆಸರಿಗೆ ಪ್ರೂಟ್ಸ್ ಐಡಿ ಇರುವುದನ್ನು ಚೆಕ್ ಮಾಡಲು  ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ನಂತರ Find the details ಕೆಳಗಡೆ ನಿಮ್ಮ ಆಧಾರ್ ಕಾರ್ಡ್ ನ್ನು ನಮೂದಿಸಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದ್ದರೆ ಕಾಣಿಸುತ್ತದೆ. ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ನಿಮಗೆ ಬರ ಪರಿಹಾರ ಹಣ ಜಮೆಯಾಗುವುದು. ಒಂದು ವೇಳೆ ನಿಮ್ಮ ಹೆಸರಿಗೆ ಫ್ರೂಟ್ಸಐಡಿ ಇಲ್ಲದಿದ್ದರೆ ಕೂಡಲೇ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬೇಕು.

bara parihara helpline check

Bara Parihara raitara list ಫ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಎಲ್ಲಾ ಸರ್ವೆ ನಂಬರ್ ಸೇರಿಸಿ      

ರೈತರು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ಭೂ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ಹೌದು, ರೈತರ ಹೆಸರಿಗಿರುವ ಎಲ್ಲಾ ಸರ್ವೆ ನಂಬರ್ ಗಳನ್ನು ಇಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ Check Land owner Name ನೀವು ನಿಂತಿರುವ ಸ್ಥಳದ ಮಾಲಿಕರು ಯಾರಿದ್ದಾರೆ? ಇಲ್ಲೇ ಚೆಕ್ ಮಾಡಿ 2024

ಈ ಆಧಾರದ ಮೇಲೆ ನಿಮಗೆ ಬರ ಪರಿಹಾರ, ಬೆಳೆವಿಮೆ ಪರಿಹಾರ ಸೇರಿದಂತೆ ಸರ್ಕರಾದ ಇತರ ಸೌಲಭ್ಯಗಳು ಸಿಗುತ್ತವೆ. ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದ ನೋಂದಣಿಯು ಕಡ್ಡಾಯವಾಗಿದೆ. ಕೂಡಲೇ ರೈತರು ತಮ್ಮಮಾಲಿಕತ್ವಕ್ಕೆ ಒಳಪಡುವ ಎಲ್ಲಾ ಸರ್ವೆ ನಂಬರ್ ಗಳನ್ನು ಸಂಬಂಧಪಟ್ಟ ದಾಖಲಾತಿಯೊಂದಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.

Leave a Comment