Land Mutation history ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಇಲ್ಲೇ ಚೆಕ್ ಮಾಡಿ 2024

Written by Admin

Updated on:

Spread the love

Land Mutation history : ರೈತರು ತಮ್ಮ ಹೆಸರಿಗಿರುವ ಜಮೀನು ಈ ಹಿಂದೆಯಾರ ಹೆಸರಿನಲ್ಲಿತ್ತು. ಇಲ್ಲಿಯವರೆಗೆ ಯಾರ ಯಾರ ಹೆಸರಿನಿಂದ ವರ್ಗಾವಣೆಯಾಗಿದೆ ಎಂಬುದರ ಮಾಹಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.

Land Mutation history ನಿಮ್ಮ ಹೆಸರಿಗಿರುವ ಜಮೀನು ಈ ಹಿಂದೆ ಯಾರ ಯಾರ ಹೆಸರಿನಲ್ಲಿತ್ತು? ಇಲ್ಲೇ ಚೆಕ್ ಮಾಡಿ

ರೈತರು ತಮ್ಮ ಹೆಸರಿಗಿರುವ ಜಮೀನು ಈ ಹಿಂದೆ ಯಾರ ಹೆಸರಿನಲ್ಲಿತ್ತು.  ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಲು  ಈ

https://landrecords.karnataka.gov.in/service40/PendcySurveyNoWiseRpt

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಸೆಲೆಕ್ಟ್ ಮಾಡಿಕೊಂಡ ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ನಮೂದಿಸಿ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನೀವು ನಮೂದಿಸಿ ಸರ್ವೆ ನಂಬರಿನಲ್ಲಿ ಬರುವ ಹಿಸ್ಸಾ ನಂಬರ್ ನಲ್ಲಿ ಜಮೀನು ಹೇಗೆ ವರ್ಗಾವಣೆಯಾಗಿದೆ? ಯಾವಾಗ ವರ್ಗಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ.

Land Mutation history ನೀವು ಅಕ್ಕಪಕ್ಕದ ಸರ್ವೆ ನಂಬರ್ ಹಾಗೂ ಮಾಲೀಕರ ಮಾಹಿತಿ ಮೊಬೈಲ್ ನಲ್ಲಿ ಚೆಕ್ ಮಾಡಿ

ರೈತರು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದ ಸರ್ವೆ ನಂಬರ್ ಹಾಗೂ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ?

ಇದನ್ನೂ ಓದಿ Why pm kisan not credited ನಿಮಗೇಕೆ ಪಿಎಂ ಕಿಸಾನ್ ಹಣ ಜಮೆಯಾಗುತ್ತಿಲ್ಲ? ಇಲ್ಲೇ ಚೆಕ್ ಮಾಡಿ 2024

ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರು ಜಂಟಿಯಾಗಿದೆ? ಎಷ್ಟು ಎಕರೆ ಜಮೀನು ಜಂಟಿಯಾಗಿದೆ ಎಂಬ ಮಾಹಿತಿ ಇರುತ್ತದೆ. ಒಂದು ವೇಳೆ ರೈತರು ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಸಾಲಪಡೆಯಲಾಗಿದೆ ಎಂಬ ಮಾಹಿತಿಯೂ ಇರುತ್ತದೆ.

Land Mutation history ನೀವು ನಮೂದಿಸಿ ಸರ್ವೆ ನಂಬರಿನಲ್ಲಿ ಯಾರ ಯಾರ ಜಮೀನಿದೆ?

ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿಗೆ ಜಮೀನಿದೆ? ರೈತರ ಹೆಸರು ತಂದೆಯ ಹೆಸರು ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಸಂಪೂರ್ಣ ಮಾಹಿತಿ ಇರುತ್ತದೆ.

Check land transfer details check

Land Mutation history ನೀವು ನಮೂದಿಸಿ ಸರ್ವೆ ನಂಬರಿನ ಪಹಣಿಯಲ್ಲಿ ಯಾರ ಯಾರ ಹೆಸರಿದೆ ಚೆಕ್ ಹೀಗೆ ಮಾಡಿ

ರೈತರು ಸರ್ವೆ ನಂಬರ್ ನಮೂದಿಸಿ ಪಹಣಿಯಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ಜಿಲ್ಲೆ , ತಾಲೂಕು, ಹೋಬಳಿ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿಯೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಪಿರಿಯಡ್ ನಲ್ಲಿ 2023-2024 ಆಯ್ಕೆ ಮಾಡಿಕೊಳ್ಳಬೇಕು.  ಸೆಲೆಕ್ಟ್ ಇಯರ್ ನಲ್ಲಿ 2023- 2024 ಆಯ್ಕೆ ಮಾಡಿಕೊಂಡು Fetch details ಮೇಲೆ ಕ್ಲಿಕ್ ಮಾಡಬೇಕು ನಂತರ View ಮೇಲೆ ಕ್ಲಿಕ್ ಮಾಡಿದಾಗ ಪಹಣಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿನೀವು ನಮೂದಿಸಿ ಸರ್ವೆ ನಂಬರಿನ ಪಹಣಿಯಲ್ಲಿ ಯಾರ ಯಾರ ಹೆಸರಿಗಿದೆ ಎಂಬುದು ಕಾಣುತ್ತದೆ. ಹೌದು, ರೈತ ಮಿತ್ರರೆ ಇದೇ ರೀತಿ ನಿಮ್ಮ ಹೆಸರಿಗಿರುವ ವಿವಿಧ ಸರ್ವೆ ನಂಬರ್ ಗಳ ಇತಿಹಾಸವನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದೇ ರೀತಿ ನೀವು ನಿಮ್ಮ ಬಂಧು ಬಳಗದವರ ಜಮೀನಿನ ಇತಿಹಾಸವನ್ನು  ಸಹ ಚೆಕ್ ಮಾಡಬಹುದು.

Leave a Comment