Bike purchase subsidy ದ್ವಿಚಕ್ರ ವಾಹನ ಖರೀದಿಗೆ ಸಬ್ಸಿಡಿ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ 2024

Written by Admin

Published on:

Spread the love

Bike purchase subsidy ಮೀನುಗಾರಿಕೆ ವತಿಯಿಂದ 2024-25 ನೇ ಸಾಲಿನ ಮತ್ಸ್ಯ ವಾಹಿನಿ ಯೋಜನೆ ಅಡಿಯಲ್ಲಿ ದ್ವಿ ಚಕ್ರ ವಾಹನ ಮತ್ತು ಐಸ್ ಬಾಸ್ಕ್ ಖರೀದಿಸಿದವರಿಗೆ ಸಬಸ್ಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಇದರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡ ವರ್ಗದ ಮೀನುಗಾರಿಕೆಗೆ ಉಚಿತವಾಗಿ ಮೀನುಗಾರಿಕೆ ಸಲರಣೆ ಕಿಟ್ ವಿತರಣೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಮೀನು ಮಾರಾಟಕ್ಕೆ ದ್ವಿಚಕ್ರ ವಾಹನ ಅಥವಾ ಪ್ಲಾಸ್ಟಿಕ್ ಕ್ರೇಟ್ಸ್ ಖರೀದಿಗೆ ಸಹಾಯಧನ ಯೋಜನೆ ಅಡಿಯಲ್ಲಿ ಖರೀದಿಸಿದ ವಾಹನಗಳನ್ನು 5 ವರ್ಷಗಳವರೆಗೆ ಮಾರಾಟ ಮಾಡಲಾಗುವುದಿಲ್ಲ. ಗುತ್ತಿಗೆ ನೀಡುವುದಿಲ್ಲ ಎಂಬ ಬಗ್ಗೆ 100 ರೂಪಾಯಿಗಳ ಕರಾರು ಪತ್ರದಲ್ಲಿ ನೋಟರೀಕರಿಸಿ ಸಲ್ಲಿಸಲಾಗುವುದು.

ದ್ವಿ ಚಕ್ರ ವಾಹನ ಖರೀದಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದಿದ್ದಲ್ಲಿ ಫಲಾನುಭವಿಯು ಅರ್ಜಿ ಸಲ್ಲಿಸುವಾಗ ಬ್ಯಾಂಕಿನಿಂದ ಸಾಲ ನೀಡುವ ಒಪ್ಪಿಗೆ ಪತ್ರವನ್ನು ಸಲ್ಲಿಸಬೇಕು.

ಇದನ್ನೂ ಓದಿ Pm kisan hana ಪಿಎಂ ಕಿಸಾನ್ ಯಾರಿಗೆ ಜಮೆ ಯಾರಿಗೆ ಜಮೆಯಾಗಲ್ಲ ಇಲ್ಲಿದೆ ಮಾಹಿತಿ 2024

ದ್ವಿಚಕ್ರವಾಹನ ಖರೀದಿಯ ಫಲಾನುಭವಿಯು ಡಿಎಲ್ ಅಥವಾ ಎಲ್ಎಲ್ಆಲ್ ಹೊಂದಿದ್ದಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಹೌದು ಎಂದು ನಮೂದಿಸಬೇಕು.

Bike purchase subsidy ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆ ಬೇಕು?

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ದಾಖಲೆಗಳು ಬೇಕಾಗುತ್ತವೆ. ಫೋಟೋ, ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ವಿಕಲಚೇತನ, ವಿಧವೆ ಅಥವಾ ಹೆಚ್.ಐವಿ ಪೀಡಿತ ಪ್ರಮಾಣ ಪತ್ರ (ಅನ್ವಯವಾದಲ್ಲಿ) ಲಗತ್ತಿಸಬೇಕು. ವಾಹನ ಖರೀದಿ ಮತ್ತು ಪ್ಲಾಸ್ಟಿಕ್ ಕ್ರೇಟ್ಸ್ಬಿಲ್. ಮೀನುಗಾರಿಕೆ ಚಟುವಟಿಕೆ ಪ್ರಮಾಣ ಪತ್ರ ನೀಡಬೇಕು. ಡ್ರೈವಿಂಗ್ ಲೈಸೆನ್ಸ್,ವಾಹನ ವಿಮಾ ಪತ್ರ ನೀಡಬೇಕು. ಬ್ಯಾಂಕ್ ಪಾಸ್ ಬುಕ್ ಪ್ರತಿಲಗತ್ತಿಸಬೇಕು.

Bike purchase subsidy ಅರ್ಜಿಗಳನ್ನುಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಮುಂಡರಗಿ ಹಾಗೂ ಉಪ ನಿರ್ದೇಶಕರು ಮೊಬೈಲ್ ಸಂಖ್ಯೆ 8095792530 ಗೆ ಸಂಪರ್ಕಿಸಲು ಕೋರಲಾಗಿದೆ.

Bike purchase subsidy ಆನ್ಲೈನ್ ಮೂಲಕ ಅರ್ಜಿ ಎಲ್ಲಿ ಸಲ್ಲಿಸಬೇಕು?

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು

 ಈ https://gadag.nic.in/ ಲಿಂಕ್

ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಮೀನುಗಾರಿಕೆ ಇಲಾಖೆ ಗದಗ ಜಿಲ್ಲೆಯ ಫಲಾನುಭವಿಗಳ ಆಯ್ಕೆಗಾಗಿ ಆನ್ಲೈನ್ ಅರ್ಜಿಗಳು ಎಂಬ ಬಾಕ್ಸ್ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.

Bike purchase subsidy check

ಅಲ್ಲಿ ಮೀನುಗಾರಿಕೆ ಇಲಾಖೆ ಮುಂದುಗಡೆ ಇರುವ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಆಗ ಓಕೆ ಮೇಲೆ ಕ್ಲಿಕ್ ಮಾಡಬೇಕು ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಸ್ಕೀಮ್ ಆಯ್ಕೆಯಲ್ಲಿ ದ್ವಿಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಆಯ್ಕೆಮಾಡಿಕೊಳ್ಳಬೇಕು. ನಂತರ ನಿಮ್ಮತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಫೋಟೋ ಅಪ್ಲೋಡ್ ಮಾಡಬೇಕು. ನಿಮ್ಮತಂದೆಯ ಹೆಸರು ನಮೂದಿಸಬೇಕು. ನಿಮ್ಮ ಹುಟ್ಟಿದ ದಿನಾಂಕ ಲಿಂಗ, ಕೆಟಗೇರಿ ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಿಮ್ಮ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು.  ನಿಮ್ಮ ವಿಳಾಸ  ಸರಿಯಾಗಿ ನಮೂದಿಸಬೇಕು.  ನಂತರ ಅಲ್ಲಿ ಕೇಳಲಾದ ಅಗತ್ಯಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಕೊನೆಗೆ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Leave a Comment