Gruhalakshmi sahayavani number : ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿ ಸಹಾಯಧನ ಪಾವತಿಯಾಗದೆ ಇರುವ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಲು ತಾಲೂಕುವಾರು ಶಿಶು ಅಭಿವೃದ್ಧಇ ಯೋಜನಾ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ.
ಹೆಚ್ಚಿನ ಮಾಹಿತಿಗೆ ಟಿ.ಎಸ್.ಲಲಿತ, ಪ್ರಥಮ ದರ್ಜೆ ಸಹಾಯಕರು (ಮೊಬೈಲ್ ಸಂಖ್ಯೆ 9620380498), ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಂ.ಸಿಸಿ, ಬಿ ಬ್ಲಾಕ್, ಕುವೆಂಪು ನಗರ ದಾವಣಗೆರೆ, ಆರ್.ಎ. ತುಶಾರ್, ದ್ವಿತೀಯ ದರ್ಜೆ ಸಹಾಯಕರು (9380629266), ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ದುರ್ಗಾಂಬಿಕಾ ಶಾಲೆ ಹತ್ತಿರ, ಸರಸ್ವತಿ ಬಡಾವಣೆ, ದಾವರಣಗೆರೆ, ಕಿರಣ್ ತಾಲೂಕು ಸಂಯೋಜನಾಧಿಕಾರಿ, ಪೋಶನ್ಅಭಿಯಾನ ಯೋಜನೆ (9731262426) ಶಿಶು ಅಭಿವೃದ್ಧಿಯೋಜನಾಧಿಕಾರಿ ಕಚೇರಿ, ನೆಲಮಹಡಿ, ಪಿ.ಎಲ್.ಡಿ ಬ್ಯಾಂಕ್ ಬಿಲ್ಡಿಂಗ್, ಶಿವಮೊಗ್ಗ ರಸ್ತೆ,ಹರಿಹರ.
Gruhalakshmi sahayavani number ಗೃಹಲಕ್ಷ್ಮೀ ಸಹಾಯವಾಣಿ ನಂಬರ್
ಈಶ್ವರ ತಾಲೂಕು ಸಂಯೋಜನಾಧಿಕಾರಿ ಪೋಶಣ್ ಅಭಿಯಾನ ಯೋಜನೆ (9740192819), ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ತಾಪಂ ಆವರಣ, ಸ್ತ್ರೀಶಕ್ತಿ ಭವನ ಜಗಳೂರು, ಸುದೀಪ್, ತಾಲೂಕು ಸಂಯೋಜನಾಧಿಕಾರಿ, ಪೋಶಣ್ ಅಭಿಯಾನ ಯೋಜನೆ (9844019027), ಶಿಶುಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಎರಡನೇ ಮಹಡಿ,ಮಲ್ಲಪ್ಪ ಕಾಂಪ್ಲೆಕ್ಸ್, ಟಿ.ಎಂ. ರೋಡ್, ಹೊನ್ನಾಳ್ಳಿ, ಶಿವಣ್ಣ ತಾಲೂಕು ಸಂಯೋಜನಾಧಿಕಾರಿ ಪೋಶಣ್ ಅಭಿಯಾನ ಯೋಜನೆ (9686601791), ಶಿಶು ಅಭಿವೃದ್ಧಿಯೋಜನಾಧಿಕಾರಿ ಕಚೇರಿ, ಶಿವಮೊಗ್ಗ ರಸ್ತೆ, ಐಸಿಐಇ ಬ್ಯಾಂಕ್ ಹತ್ತಿರ, ಜಿ.ಎಂ, ಕಾಂಪ್ಲೆಕ್ಸ್ ಚನ್ನಗಿರಿ ಈ ವಿಳಾಸಗಳಿಗೆ ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಉಪನಿರ್ದೇಶಕ ರಾಜಾನಾಯ್ಕ ತಿಳಿಸಿದ್ದಾರೆ.
Gruhalakshmi sahayavani number ಏನಿದು ಗೃಹಲಕ್ಷ್ಮೀ ಯೋಜನೆ?
ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಮಹಿಳಾ ಒಡತಿಗೆ 2 ಸಾವಿರ ರೂಪಾಯಿ ಜಮೆ ಮಾಡಲಾಗುವುದು.
ಇದನ್ನೂ ಓದಿ : Adhar number Belevime status ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಹೀಗೆ ಚೆಕ್ ಮಾಡಿ 2024
ಹೌದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಯಜಮಾನಿಗೆ 2 ಸಾವಿರ ರೂಪಾಯಿ ಜಮೆ ಮಾಡಲಾಗುವುದು.
Gruhalakshmi sahayavani number ಯಾವ ಉದ್ದೇಶಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ?
ಕುಟುಂಬ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ. ಹಾಗಾಗಿ ಕುಟುಂಬದ ಯಜಮಾನಿ ಮಹಿಳೆಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳನ್ನು ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದೆ.
ಗೃಹಲಕ್ಷ್ಮೀ ಯೋಜನೆಯ ಹಣ ನಿಮಗೆಷ್ಟು ಕಂತುಗಳು ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ
ಗೃಹಲಕ್ಷ್ಮೀ ಯೋಜನೆಯ ಹಣ ಇಲ್ಲಿಯವರೆಗೆನಿಮ್ಮ ಖಾತೆಗೆ ಎಷ್ಟು ಕಂತುಗಳು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://mahitikanaja.karnataka.gov.in/home
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮಗೆ ತೆರೆದುಕೊಳ್ಳುವ ಪೇಜ್ ನಲ್ಲಿ Guaranteed schemes ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
ನಂತರ ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ Details of Gruhalakshmi status ಕೆಳಗಡೆ ನಿಮ್ಮ ರೇಶನ್ ಕಾರ್ಡ್ ನಮೂದಿಸಬೇಕು. ನಂತರ submit ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಯಾವ ದಿನಾಂಕದಂದು ಅರ್ಜಿ ಹಾಕಿದ್ದೀರಿ. ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಹಾಗೂ ಯಾವ ದಿನಾಂಕ ಅರ್ಜಿ ಸ್ವೀಕೃತವಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದುಗಡೆ ಇರುವ Details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ. ಯಾವ ಯಾವ ತಿಂಗಳಲ್ಲಿ ಜಮೆಯಾಗಿದೆ. ಯಾವ ತಿಂಗಳ ಯಾವ ದಿನಾಂಕದಂದು ಜಮಯಾಗಿದೆ ಹಾಗೂ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು. ಇದಕ್ಕಾಗಿ ನಿಮ್ಮ ಬಳಿ ಫೋನ್ ಇದ್ದರೆ ಸಾಕು, ನಿಮ್ಮ ಫೋನ್ ಇಲ್ಲದಿದ್ದರೂ ನಿಮ್ಮ ಮನೆಯಲ್ಲಿರುವ ಇತರರ ಫೋನ್ ಬಳಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ಗೃಹಲಕ್ಷ್ಮೀ ಯೋಜನೆಗೆ ಎಲ್ಲಿ ನೋಂದಣಿ ಮಾಡಿಸಬೇಕು?
ಇಲ್ಲಿಯವರೆಗೂ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳದ ಫಲಾನುಭವಿಗಳು ಗ್ರಾಮ ಒನ್, ದಾವಣಗೆರೆ ಒನ್, ಆಯಾ ಜಿಲ್ಲೆಯ ಒನ್ ಕೇಂದ್ರಗಳಲ್ಲಿ,ಸೇವಾ ಸಿಂಧು ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು.