Pm krishi sihchayi subsidy ರೈತರಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Admin

Published on:

Spread the love

Pm krishi sihchayi subsidy : ತೋಟಗಾರಿಕಾ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ  ಯೋಜನೆಯಡಿ ಅಡಿಕೆ ಬೆಳೆ ಹೊರತುಪಡಿಸಿ 2024-25ನೇ ಸಾಲಿಗಾಗಿ ಇತರೆ ತೋಟಗಾರಿಕೆ ಬೆಳೆಗಳಿಗೆ ಸೂಕ್ಷ್ಮ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಲಿಚ್ಚಿಸುವ ತುಮಕೂರು ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯು ರೈತರಿಗೆ ನೀರಿನ ಸಮರ್ಪಕ ಬಳಕೆಯೊಂದಿಗೆ  ಕಡಿಮೆ ಖಱ್ಚಿನಲ್ಲಿ ಅಧಿಕ ಇಳುವರಿ ಪಡೆದು ಅವರ ಆರ್ಥಿಕ ಮಟ್ಟ ಸುಧಾರಿಸಲು ಸಹಕಾರಿಯಾಗಿದೆ.

Pm krishi sihchayi subsidy ಯೋಜನೆಯಡಿ ಹನಿ ನೀರಾವರಿ ಅಳವಡಿಕೆಗೆ ಪ್ರತಿಫಲಾನುಭವಿಗೆ ಗರಿಷ್ಠ5 ಹೆಕ್ಟೇರ್ ಪ್ರದೇಶ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂ ಬೆಳೆಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶದವರಿಗೆ ಸಹಾಯಧನ ನೀಡಲಾಗುವುದು. ಮೊದಲ 2 ಹೆಕ್ಟೇರ್ ಪ್ರದೇಶದವರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯವರ್ಗದ ರೈತರಿಗೆ ಶೇ.90 ರಷ್ಟು ಹಾಗೂ ನಂತರದ 3 ಹೆಕ್ಟೇರ್ ಪ್ರದೇಶದವರಿಗೆ ಎಲ್ಲಾ ವರ್ಗದ ರೈತರಿಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.

ಇದನ್ನೂ ಓದಿ : Bara parihara helpline ಬರ ಪರಿಹಾರ ಹಣ ಜಮೆಯಾಗುತ್ತಿಲ್ಲವೇ? ಈ ನಂಬರುಗಳಿಗೆ ಕರೆ ಮಾಡಿ 2024

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟು ಪಂಗಡದ ರೈತರಿಗೆ ಮಾತ್ರ ಈ ಹಿಂದೆ ಅಳವಡಿಸಿಕೊಂಡಿದ್ದ ಸೂಕ್ಷ್ಮ  ನೀರಾವರಿ ಪದ್ಧತಿ ಹಾಳಾಗಿದ್ದಲ್ಲಿ ಘಟಕ ಕಾರ್ಯನಿರ್ವಹಿಸದೇ ಇದ್ದಲ್ಲಿ 7 ವರ್ಷಗಳ ನಂತರ ಅದೇ ಜಮೀನಿಗೆ ಮತ್ತೊಮ್ಮೆ  ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿಕೊಂಡಲ್ಲಿ ಈ ಸಹಾಯಧನ ಸೌಲಭ್ಯ ನೀಡಲಾಗುವುದು.

Pm krishi sihchayi subsidy ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ

ಸರ್ಕಾರಿ ಕೃಷಿ ಇಲಾಖ ಮೂಲಕ ಕೃಷಿಹೊಂಡ ನಿರ್ಮಾಣಕ್ಕೆ ನೀಡುತ್ತಿರುವ ಶೇ.80 ರಷ್ಟು ಸಹಾಯಧನವನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯಕುಮಾರ ಮಂಗಳವಾರ ಹೇಳಿದರು.

ತಾಲೂಕಿನ ಬೋರಾಪುರ ಗ್ರಾಮದ ಬಸವ ರಾಜು ಜಮೀನಿನಲ್ಲಿ ಕೃಷಿ ಭಾಗ್ಯ ಯೋಜನೆ ಅಡಿ ನಿರ್ಮಿಸಿರುವ ಕೃಷಿ ಹೊಂಡ ಉದ್ಘಾಟಿಸಿ ಮಾತನಾಡಿದರು.

ರೈತರು ಕೃಷಿ ಅಧಿಕಾರಿಗಳನ್ನು ಸಂಪರ್ಕಿ ಅವರ ಸಲಹೆ ಸೂಚನೆ ಮೇಲೆ ಕೃಷಿ ಹೊಂಡ ನಿರ್ಮಿಸಿಕೊಳ್ಳಬೇಕು ಎಂದರು.

Pm krishi sihchayi subsidy

ಕೃಷಿ ಹೊಂಡ ನಿರ್ಮಾಣಕ್ಕೆ ಮುಂಚೆ ಕೃಷಿ ಇಲಾಖೆಯ ಸಲಹೆಯಂತೆ ಕಡ್ಡಾಯವಾಗಿ ಐದು ಪಟ್ಟುಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಬದುಗಳ ನಿರ್ಮಾಣ ಹಾಗೂ ಭೂಮಿಯಿಂದ ನೀರು ಹಿಂಗುವುದನ್ನು ತಡೆಗಟ್ಟಲು ಪಾಲಿಥಿನ್ ಹೊದಿಕೆ ಅಳವಡಿಸಿಕೊಳ್ಳಬೇಕು ಎಂದರು.

ಮನುಷ್ಯರುಮತ್ತು ಕಾಡು ಪ್ರಾಣಿಗಳು ಪ್ರವೇಶ ಮಾಡಿ ಸಾವು ನೋವುಗಳು ಉಂಟಾಗದಂತೆ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ ಮಾಡಬೇಕು ಎಂದರು.

ಕೃಷಿ ಇಲಾಖೆ ಉಪ ನಿರ್ದೇಶಕ ಮುನಿಗೌಡ ಮಾತನಾಡಿ, ರೈತರು ತಾಂತ್ರಿಕ ಭತ್ತ ನಾಟಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು.ಇದರಿಂದ ಕೂಲಿ ಆಳುಗಳ ವೆಚ್ಚ ತಗ್ಗುವ ಜೊತೆಗೆ ಸಮಯ ಮತ್ತುಹಣದ ಉಳಿತಾಯ ಸಾಧ್ಯವಾಗುತ್ತದೆ ಎಂದರು.

Pm krishi sihchayi subsidy  ಗುರುತಿನ ಚೀಟಿಗೆ ಸಂಚಾರಿ ಕುರಿಗಾಹಿಗಳಿಂದ ಆಹ್ವಾನ

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಂಚಾರಿ ಕುರಿಗಾಹಿಗಳಿಗೆ  ಗುರುತಿನ ಚೀಟಿ ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶು ವೈದ್ಯಕೀಯಸಂಸ್ಥೆ ಅಥವಾ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶುಪಾಲನಾ ಮತ್ತುಪಶು ವೈದ್ಯಸೇವಾ ಇಲಾಖೆ ಆಸ್ಪತ್ರೆ  ಹಾಗೂ ಸಹಾಯಕ  ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಪಶು ಆಸ್ಪತ್ರೆ ಆವರಣ, ಹಾವೇರಿ ಈ ವಿಳಾಸದಲ್ಲಿ ಸಂಪರ್ಕಿಸಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment