Last date for crop insurance ಈ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಿ? ಇಲ್ಲಿದೆ ಮಾಹಿತಿ 2024

Written by Admin

Published on:

Spread the love

Last date for crop insurance : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಯಾವ ಬೆಳೆಗೆ ಯಾವ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಬೇಕೆಂಬುದನ್ನು ಈಗ ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಯೂಟೂಬ್ ಚಾನೆಲಿಗೆ ಸಬಸ್ಕ್ರೈಬ್ ಮಾಡಿ

Last date for crop insurance ಈ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಿ? ಇಲ್ಲಿದೆ ಮಾಹಿತಿ 2024

Last date for crop insurance ಹೌದು, ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ಈಗ ಕೊನೆಯ ದಿನಾಂಕ ಯಾವುದು? ಯಾವ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಬೇಕು? ನಿಮ್ಮ ಊರಿನಿಂದ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ರೈತರಿಗೆ ಮೊಬೈಲ್ ಕುರಿತು ಸ್ವಲ್ಪ ಮಾಹಿತಿ ಇದ್ದರೆ ಸಾಕು, ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಕ್ಷೀಪ್ತ ಮಾಹಿತಿ.

Last date for crop insurance ನಿಮ್ಮ ಜಿಲ್ಲೆಗೆ ಬೆಳೆ ವಿಮೆ ಮಾಡಿಸಲು ಯಾವ್ಯಾವ ಬೆಳೆಗಳಿಗೆ ಕೊನೆಯ ದಿನಾಂಕಗಳು ಯಾವುವು? ಹೀಗೆ ಚೆಕ್ ಮಾಡಿ

ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕವನ್ನು ಚೆಕ್ ಮಾಡಲು ಈ

https://samrakshanereports.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ  ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ Farmers ಕೆಳಗಡೆ ಇರುವ  View Cut of Dates ಮೇಲೆ ಕ್ಲಿಕ್ ಮಾಡಬೇಕು.

ಅಥವಾ

https://samrakshanereports.karnataka.gov.in/PublicView/FindCutOff.aspx

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು  ಇಲ್ಲಿ ನೀವು ನಿಮ್ಮ  ಜಿಲ್ಲೆಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಯಲ್ಲಿ ಯಾವ್ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದರ ಪಟ್ಟಿ ಕಾಣಿಸುತ್ತದೆ. ಇದರೊಂದಗೆ ಯಾವ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು ಹಾಗೂ ವಿಮೆ ಮಾಡಿಸಲು ಇನ್ನೂ ಎಷ್ಟುದಿನ ಉಳಿದಿದೆ ಎಂಬುದೆಲ್ಲಾ ಮಾಹಿತಿ ಕಾಣಿಸುತ್ತದೆ.

Last date for crop insurance ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯವರಾಗಿದ್ದರು

ಸೂರ್ಯಕಾಂತಿ, ಭತ್ತ ಬೆಳೆಗೆ ನವೆಂಬರ್ 15 ರಂದು ವಿಮೆ ಮಾಡಿಸಲು ಕೊನೆಯ ದಿನವಾಗಿದೆ.  ಕುಸುಮೆ, ಜೋಳ ಹಾಗೂ ಕಡಲೆ ಬೆಳೆಗೆ ವಿಮೆ ಮಾಡಿಸಲು ನವೆಂಬರ್ 31 ಕೊನೆಯ ದಿನವಾಗಿದೆ.  ಗೋಧಿ ಬೆಳೆಗೆ ವಿಮೆ ಮಾಡಿಸಲು ಡಿಸೆಂಬರ್  31 ಕೊನೆಯ ದಿನವಾಗಿದೆ.

Last date for crop insurance ರೈತರೇಕೆ ಬೆಳೆ ವಿಮೆ ಮಾಡಿಸಬೇಕು?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಅಂದರೆ ಬರಗಾಲ, ಅತೀವೃಷ್ಟಿ, ಅನಾವೃಷ್ಟಿ, ಗುಡುಗು ಸಿಡಿಲು, ಭೂ ಕುಸಿತ, ಬಿರುಗಾಳಿ ಸೇರಿದಂತೆ ಇನ್ನಿತರ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ವಿಮೆ ಮಾಡಿಸಿದ ರೈತರಿಗೆ ಆರ್ಥಿಕ ಸಹಾಯ ಸಿಗಲಿದೆ. ಹೌದು, ರೈತರು  ಕಟ್ಟುವ ಬೆಳೆ ವಿಮೆ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ರೈತರು ಬೆಳೆ ವಿಮೆ ಮಾಡಿಸಬಹುದು. ಆಕಸ್ಮಾತ್ ನಿಮ್ಮ ಬೆಳೆ ಹಾನಿಯಾದರೆ ನಿಮಗೆ ವಿಮೆ ಹಣ ಸಿಗುತ್ತದೆ.

Last date for crop insurance ಬೆಳೆ ಹಾನಿಯಾದಾಗ ರೈತರೇನು ಮಾಡಬೇಕು?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಬೆಳೆ ಹಾನಿಯಾದರೆ  72 ಗಂಟೆಯೊಳಗೆ ವಿಮಾ ಕಂಪನಿಯ ಸಿಬ್ಬಂದಿಗಳಿಗೆ ತಿಳಿಸಬೇಕಾಗುತ್ತದೆ. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ನಿಮ್ಮ ಜಮೀನಿಗೆ ಬಂದು ಹಾನಿಯಾದ ಬೆಳೆಯನ್ನು ಪರಿಶೀಲನೆ ಮಾಡುತ್ತಾರೆ. ನಂತರ ವಿಮಾ ಕಂಪನಿಗೆ ವರದಿ ಸಲ್ಲಿಸುತ್ತಾರೆ. ನಂತರ ನಿಮಗೆ ಬೆಳೆ ವಿಮೆ ಹಣ ಜಮಯಾಗುತ್ತದೆ.

ಇದನ್ನೂ ಓದಿ land mutation ಸರ್ವೆ ನಂಬರ್ ಹಾಕಿ ಜಮೀನಿನ ಮುಟೇಶನ್ ಚೆಕ್ ಮಾಡಿ 2024

ಬೆಳೆ ವಿಮೆ ಮಾಡಿಸುವಾಗ ರೈತರು ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಕಟ್ಟುತ್ತಾರೆಂಬುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಪ್ರತಿಯೊಂದು ಜಿಲ್ಲೆಗೆ ಬೇರೆ ಬೇರೆ ವಿಮಾ ಕಂಪನಿಗಳನ್ನು ನಿಯೋಜಿಸಲಾಗಿರುತ್ತದೆ.

Leave a Comment