Goat farming before know this: ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ನಿಮಗೆಲ್ಲಾ ಗೊತ್ತಿದ್ದ ಹಾಗೆ ಮೇಕೆ ಸಾಕಾಣಿಕೆ ಮಾಡುವುದೆಂದರೆ ರೈತರ ಬಳಿ ಎಟಿಎಂ ಇದ್ದ ಹಾಗೆ.
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಕೃಷಿ ಮಾಹಿತಿ ಪಡೆಯಿರಿ
ಏಕೆಂದರೆ ಏಟಿಎಂನಿಂದ ನಾವು ಯಾವಾಗ ಬೇಕೋ ಆಗ ಹಣ ತೆಗೆದುಕೊಳ್ಳುತ್ತೇವೆ. ಅದೇ ರೀತಿ ನೀವುಮೇಕೆ ಸಾಕಾಣಿಕೆ ಮಾಡುತ್ತಿದ್ದರೆ ನಿಮ್ಮ ಬಳಿ ಸದಾ ಹಣ ಇದ್ದಂತೆ. ನೀವು ಯಾವಾಗ ಬೇಕೋ ಆಗ ನಿಮ್ಮಲ್ಲಿರು ಕುರಿ ಅಥವಾ ಮೇಕೆಗಳನ್ನು ಮಾರಾಟ ಮಾಡಿ ಹಣ ಪಡೆಯಬಹುದು. ಇಂದು ನಾವು ಯಾವ ಮೇಕೆ ತಳಿಗಳ ಬೆಲೆ ಹಾಗೂ ಬೇಡಿಕೆ ಹೆಚ್ಚಿರುತ್ತದೆ. ಯಾವ ತಳಿಗಳು ಹೆಚ್ಚು ಹಾಲು ಕೊಡುತ್ತವೆ. ಎಂಬುದನ್ನು ಬಗ್ಗೆ ತಿಳಿದುಕೊಳ್ಲೋಣ ಬನ್ನಿ
ದೇಶದಲ್ಲಿ ಮೇಕೆ ಸಾಕಾಣಿಕೆ ಹೊಸದೇನಲ್ಲ, ಗ್ರಾಮೀಣ ಭಾಗದಲ್ಲಿ ಅನಾದಿ ಕಾಲದಿಂದಲೂ ಕುರಿ ಮೇಕೆಗಳನ್ನು ಸಾಕುತ್ತಾ ಬರಲಾಗುತ್ತಿದೆ. ಇತ್ತೀಚೆಗೆ ಫಾರ್ಮ್ ಮಾಡಿ ಮೇಕೆ ಸಾಕಾಣಿಕೆ ಮಾಡುವ ಪದ್ಧತಿ ಹೆಚ್ಚಾಗಿದೆ.
Goat farming before know this ದುಂಬಾ ಮೇಕೆ
ಮೇಕೆ ಸಾಕಾಣಿಕೆಯಲ್ಲಿ ಹೆಚ್ಚು ಲಾಭ ತಂದುಕೊಡುವ ತಳಿಗಳಲ್ಲಿ ದುಂಬಾ ಮೇಕೆಯೂ ಒಂದು. ಈ ತಳಿ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈದ್ ಸಮಯದಲ್ಲಿ ಈ ತಳಿಯ ಮೇಕೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಮೇಕೆಯ ಮರಿ ಕೇವಲ ಎರಡೇ ತಿಂಗಳಿಗೆ 25 ಕೆಜಿ ತೂಗುತ್ತದೆ,
ಇದನ್ನೂ ಓದಿ : Bhagyalakshmi bond status check ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಇಲ್ಲೇ ಚೆಕ್ ಮಾಡಿ 2024
ಇದು 25000 ದಿಂದ 30000 ದವರೆಗೆ ಮಾರಾಟವಾಗುತ್ತದೆ. 3 ರಿಂದ 4 ತಿಂಗಳಾದರೆ 70 ಸಾವಿರದವರೆಗೂ ಮಾರಾಟ ಮಾಡಬಹುದು.
Goat farming before know this ಉಸ್ಮಾನಾಬಾದ್ ಮೇಕೆ
ಈ ತಳಿ ಹೆಚ್ಚಾಗಿ ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿ ಕಂಡುಬರುತ್ತದೆ. ಇದು ಹಾಲು ಮತ್ತು ಮಾಂಸ ಉತ್ಪಾದನೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಈ ಮೇಕೆಗಳ ತಳಿ 30 ರಿಂದ 34 ಕೆಜಿವರೆಗೆ ತೂಗುತ್ತವೆ. ವಿಶೇಷವೆಂದರೆ ಇದು ದಿನಕ್ಕೆ ಒಂದುವರೆ ಲೀಟರ್ ವರೆಗೆ ಹಾಲು ನೀಡುತ್ತದೆ. ಇನ್ನು ಇದು ಒಂದು ಬಾರಿ 3 ಮರಿಯನ್ನು ಕೊಡುತ್ತದೆ.
Goat farming before know this ಜಮುನಾಪರಿ ತಳಿ
ಜಮುನಾಪರಿ ಮೇಕೆ ತಳಿಯನ್ನು ವ್ಯಾಪಾರಕ್ಕೆ ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ. ಈ ತಳಿಯು ಕಡಿಮೆ ಮೇವಿನಲ್ಲಿ ಹೆಚ್ಚು ಹಾಲು ನೀಡುತ್ತದೆ. ಇದಲ್ಲದೆ, ಹೆಚ್ಚಿನ ಪ್ರೋಟೀನ್ ಕೂಡ ಇದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಈ ತಳಿಗೆ ಬೇಡಿಕೆ ಹೆಚ್ಚಿದೆ.
Goat farming before know this ಶಿರೋಹಿ ತಳಿ
ಈ ತಳಿ ಕೂಡ ಲಾಭದಾಯಕ ತಳಿಗಳಲ್ಲಿ ಒಂದಾಗಿದೆ. ಇದು ರಾಜಸ್ಥಾನ ಮೂಲದ ತಳಿ. ಇದಕ್ಕೆ ಚಿರತೆಯಂತೆ ಮೈ ಬಣ್ಣ ಇರುತ್ತದೆ . ಮಾಂಸದ ಉದ್ದೇಶಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಗಂಡು ಮೇಕೆ ಒಂದೇ ವರ್ಷದಲ್ಲಿ 80 ರಿಂದ 100 ಕೆಜಿ ತೂಗುತ್ತದೆ. ಹೆಣ್ಣು ಶಿರೋಹಿ ಮೇಕೆ 50 ರಿಂದ70 ಕೆಜಿವರೆಗೆ ತೂಗುತ್ತದೆ. ಶಿರೋಹಿ ತಳಿ ಮೇಕೆಗಳು ಹಸುಗಳಂತೆ ಹಾಲು ಕೊಡುತ್ತವೆ ಮತ್ತು ಹೆಚ್ಚು ದಪ್ಪಗೆ ಬೆಳೆಯುತ್ತವೆ..
Goat farming before know this ಬೀಟಲ್ ತಳಿ
ತಳಿ ದೊಡ್ಡ ಗಾತ್ರದ ದೇಹ ಉದ್ದವಾದ ಕಿವಿ ಮತ್ತು ಸಣ್ಣ ಮುಖವನ್ನು ಹೊಂದಿರುತ್ತದೆ. ಈ ತಳಿ ಸಹ ಹೆಚ್ಚು ಹಾಲು ಕೊಡುತ್ತದೆ. ಮಾಂಸಕ್ಕೂ ಹೆಚ್ಚಾಗಿ ಬಳಸಲಾಗುತ್ತದೆ. ಬೀಟಲ್ ಮೇಕೆ ಭಾತ ಮತ್ತು ಪಾಕಿಸ್ತಾನದ ನಡುವಿನ ಪಂಜಾಬ್ ಪ್ರಾಂತ್ಯದ ತಳಿಯಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲೂ ಇದನ್ನು ಹೆಚ್ಚು ಸಾಕಲಾಗುತ್ತಿದೆ. ಇವು ಎಲ್ಲಾ ರೀತಿಯ ಪರಿಸರಕ್ಕೂ ಹೊಂದಿಕೊಳ್ಳುತ್ತವೆ. ಲಾಹೋರಿ ಎಂದು ಕರೆಯಲ್ಪಡು ಈ ಆಡು 6 ಅಡಿ ಎತ್ತರದವರೆಗೆ ಬೆಳೆಯಬಲ್ಲವು. ಬೀಟಲ್ ತಳಿಯ ಮರಿಗಳು ಏಳೆಂಟು ತಿಂಗಳಲ್ಲಿ 40 ಕೆಜಿ ವರೆಗೆ ತೂಗುತ್ತವೆ. ಒಂದು ಮರಿಗೆ 20ರಿಂದ 22 ಸಾವಿರದವರೆಗೆ ಮಾರಾಟ ಮಾಡಬಹುದಾಗಿದೆ. ಒಂದು ವರ್ಷದ ಮೇಕೆ 100 ಕೆಜಿವರೆಗೂ ತೂಗುವುದರಿಂದ 50 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ.
Goat farming before know this ಸೋಜತ್ ಮೇಕೆ
ಸಹ ರಾಜಸ್ಥಾನ ಮೂಲದ್ದಾಗಿದೆ. ಆದರೆ ಕರ್ನಾಟಕದ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಸೋಜತ್ ಮೇಕೆಗಳು ಅತೀ ಬೇಗ ಬೆಳವಣಿಗೆ ಹೊಂದುತ್ತವೆ. ಈ ಮರಿಗಳ ಬೆಲೆ 12 ರಿಂದ 15 ಸಾವಿರದವರೆಗೆ ಇರುತ್ತದೆ. ಒಂದು ವರ್ಷದ ಮೇಕೆ 50-52 ಕೆಜಿ ತೂಗಲಿದ್ದು, 60-70 ಸಾವಿರ ಬೆಲೆ ಬಾಳುತ್ತವೆ.
ಈ ಮಾಹಿತಿ ನಿಮಗೆ ಇಸ್ಟವಾದರೆ ಲೈಕ್ಮಾಡಿ ಕಾಮೆಂಟ್ ಮಾಡಿ ಸಬಸ್ಕ್ರೈಬ್ ಮಾಡಿ ಮತ್ತೊಂದುಕೂ