Lightning suggestion ಸಿಡಿಲು ಆಘಾತದಿಂದ ತಪ್ಪಿಸಲು ಹೀಗೆ ಮಾಡಿ 2025

Written by Admin

Published on:

Spread the love

Lightning suggestion : ಇತ್ತೀಚೆಗೆ ಮುಂಗಾರು ಪೂರ್ವ ಮಳೆಯಾಗುತ್ತಿರುವುದರಿಂದ ಗುಡುಗು ಸಿಡಿಲಿನ ಆರ್ಭಟ ಹೆಚ್ಚಾಗಿರುತ್ತದೆ. ಸಿಡಿಲಿನಿಂದಾಗಿ ಅಲ್ಲಲ್ಲಿ ರೈತರು ಸಾವನ್ನಪ್ಪುತ್ತಿರುವ ಸುದ್ದಿ ಕೇಳುತ್ತಿರಬಹುದು.

ಸಿಡಿಲಿನ ಆಘಾತದಿಂದ ಪಾರಾಗುವುದು ಹೇಗೆ?  ಸಿಡಿಲಿನಿಂದ ತಪ್ಪಿಸಿಕೊಳ್ಳಲು  ರೈತರು ಸಾರ್ವಜನಿಕರು  ಏನೆಲ್ಲಾ  ಮುನ್ನೆಚ್ಚರೆಕೆ ಕೈಗೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.

ಗುಡುಗು ಮಿಂಚಿನ ಆರ್ಭಟ ಶುರುವಾದಾಗ ಈಗಲೂ ಹಿರಿಯಲು ಮಕ್ಕಳಿಗೆ ಮನೆಯೊಳಗಡೆ ಬಾ, ಅಥವಾ ಮನೆಯೊಳಗೆ ಹೋಗು ಎಂದು ಗದರಿಸುತ್ತಾರೆ. ಇದು ಸಿಡಿಲಿನಿಂದ ತಪ್ಪಿಸಿಕೊಳ್ಳಲು ಸುರಕ್ಷತೆಯ ಮೊದಲ ಪಾಠ. ಭಾರತದಲ್ಲಿ ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಅದೂ ಅವರು ಹೊಲದಲ್ಲಿದ್ದ ಸಂದರ್ಭದಲ್ಲೇ ಸಾಯುತ್ತಾರೆ ಹೊರತು ಮನೆಯಲ್ಲಿದ್ದಾಗ ಯಾವ ರೈತರೂ ಸಾವನ್ನಪ್ಪುವುದಿಲ್ಲ.

Lightning suggestion : ಸಾಮಾನ್ಯವಾಗಿ ಮುಂಗಾರು ಪೂರ್ವ ಕೆಲಸಗಳಿಗಾಗಿ ರೈತರು ಹೊಲಗಳಲ್ಲಿರುತ್ತಾರೆ. ಮಳೆ ಆರಂಭವಾದರೆ ಸಾಕು ತಕ್ಷಣವೇ ಮರಗಳ ಕೆಳಗೆ ನಿಲ್ಲುತ್ತಾರೆ. ಏಕೆಂದರೆ ಅವರಿಗೆ ಬೇರೆ ಆಸರೆ ಇರುವುದಿಲ್ಲ.  ಹಾಗಾಗಿ  ಹೊಲಗಳ ನಡುವೆ ಮರ ಇದ್ದರೆ ರೈತರು ತಮ್ಮ ಜಾನುವಾರುಗಳೊಂದಿಗೆ ಮರಗಳ  ಕೆಳಗಡೆ ಹೋಗಿ ನಿಲ್ಲುತ್ತಾರೆ.  ಆದರೆ ದುರಾದೃಸ್ಟ ನೋಡಿ ಹೇಗಿದೆ ಸಿಡಿಲು ಸಹ ಮರಗಳ ಮೇಲೆಯೇ ಹೆಚ್ಚ ಬೀಳುತ್ತವೆ.. ಹೀಗಾಗಿ ರೈತರು ಮತ್ತು ರೈತರ ಜಾನುವಾರುಗಳು  ಹೆಚ್ಚಾಗಿ ಸಾವನ್ನಪ್ಪುತ್ತವೆ.

Lightning suggestion ಸಿಡಿಲಿನಿಂದ ತಪ್ಪಿಸಿಕೊಳ್ಳಲು  ಇಲ್ಲಿ ನೀಡಲಾದ  ಕೆಲವು ಸಲಹೆಗಳನ್ನು ಅನುಸರಿಸಬಹುದು.

ಗುಡುಗು ಮಿಂಚು ಬರುವುದು ಗೊತ್ತಾದರೆ, ಬಯಲಿನಲ್ಲಿದ್ದವರು ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ಮರಗಳಿದ್ದರೆ ಅವಗಳಿಂದಲೂ ದೂರ ನಿಲ್ಲಬೇಕು. ಸಿಡಿಲು ಮತ್ತು ಗುಡುಗು ಹಸಿ ವಸ್ತುಗಳಿಗೆ ಹೆಚ್ಚು ಆಕರ್ಷಿತಗೊಳ್ಳುತ್ತವೆ. ಹಾಗಾಗಿ ಸಿಡಿಲುಗಳು ಮರಗಳ ಮೇಲೆಯೇ ಹೆಚ್ಚು ಬೀಳುತ್ತವೆ.  ಮರಗಳ ಕೆಳಗೆ ನಿಲ್ಲುವುದು ಸುರಕ್ಷಿತವಲ್ಲ.

ರೈತರು ಕುರಿ ಮಂದೆ ಅಥವಾ ದನಗಳ ಮಧ್ಯೆ ಇದ್ದರೆ, ಅವುಗಳ ಸಂದಿಯಲ್ಲಿ ಕುಳಿತುಕೊಳ್ಳಬೇಕು. ಎದ್ದು ನಿಂತರೆ ಎತ್ತರ ಇರುವ ಮನುಷ್ಯನಿಗೆ ಮೊದಲು ಸಿಡಿಲು ಬಡಿಯುತ್ತದೆ. ವಿದ್ಯುತ್ ಕಂಬ, ಮೊಬೈಲ್, ಟವರ್, ಟ್ರಾನ್ಸಫಾರ್ಮರ್ ಗಳಿಂದ ದೂರ ಇರಬೇಕು.

ಇದನ್ನೂ ಓದಿ Crop insurance amount sanctioned ರೈತರಿಗೆ 667 ಕೋಟಿ ಪರಿಹಾರ ಮಂಜೂರು – ಪ್ರಿಯಾಂಕ್ ಖರ್ಗೆ

ಮನೆಯ ಕಿಟಕಿ ಪಕ್ಕದಲ್ಲಿ ನಿಲ್ಲುವುದರ ಬದಲು ಮನೆಯ ಮಧ್ಯದಲ್ಲಿ ಇರಬೇಕು.. ಮಳೆಯಲ್ಲಿ  ಕಾರು, ಚಲಾಯಿಸುತ್ತಿದ್ದರೆ ಗ್ಲಾಸ್ ಹಾಕಿಕೊಳ್ಳಬೇಕು. ಕಾರಿಗೆ ಒರಗಿ ಕೂಡುವ ಬದಲು ಮಧ್ಯದಲ್ಲಿ ಕೂಡಬೇಕೆಂದು ಕಂದಾಯ ಇಲಾಖೆ ಸಲಹೆ ನೀಡಿದೆ.

ಗುಡುಗು- ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಹೊಲದಲ್ಲಿದ್ದರೆ ಆದಸ್ಟು ಬೇಗ ಹತ್ತಿರದಲ್ಲಿರುವ ಯಾವುದೇ ಕಟ್ಟಡದಲ್ಲಿ ಆಶ್ರಯ ಪಡೆದುಕೊಳ್ಳುವುದು ಉತ್ತಮ.

ಹೊಲದಲ್ಲಿ ಕೆಲಸ ಮಾಡುವಾಗ ಯಾವುದೇ ಲೋಹದ ವಸ್ತುಗಳು ಉದಾಹರಣೆಗೆ ಕುಡುಗೋಲು, ಕೊಡಲಿ, ಹಾರೆ ನಿಮ್ಮಲ್ಲಿದ್ದರೆ ಅದನ್ನೂ ದೂರ ಇಟ್ಟುಬಿಡಿ

Lightning suggestion  ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್‌ ಮಾಡಬೇಡಿ

ಲೋಹದ ವಸ್ತುಗಳು  ದೂರದಿಂದಲೇ ಮಿಂಚನ್ನು ಸೆಳೆಯುತ್ತವೆ ಹಾಗಾಗಿ ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ಲೋಹದ ಗೇಟ್ ಗಳಿದ ದೂರವಿದ್ದರೆ  ಸಿಡಿಲಿನ ಆಘಾತದಿಂದ ತಪ್ಪಿಸಿಕೊಳ್ಳಬಹುದು.

Leave a Comment