Free house construction subsidy: ಉಚಿತವಾಗಿ ಮನೆ ನಿರ್ಮಿಸಲು ಬಡವರಿಂದ ಅರ್ಜಿ ಆಹ್ವಾನ 2025

Written by Admin

Published on:

Spread the love

Free house construction subsidy: ಸರ್ಕಾರದ ವತಿಯಿಂದ ಬಡವರಿಗೆ ಉಚಿತವಾಗಿ ಮನೆ ನಿರ್ಮಿಸಲು ಅರ್ಜಿ ಆಹ್ವಾನಿಸಲಾಗಿದೆ.  ಹೌದು, ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮನೆ ಕಟ್ಟಿಕೊಳ್ಳಬಹುದು. ಹಾಗಾದರೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು ಯಾರು ಅರ್ಹರು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀವು ಗ್ರಾಮೀಣ ಪ್ರದೇಶದಲ್ಲಿವಾಸಿಸುತ್ತಿದ್ದೀರಾ? ಮನೆಯಿಲ್ಲವೇ? ಹಾಗಾದರೆ ಇನ್ನೇಕೆ ತಡೆ ಇಲ್ಲಿ ನೀಡಲಾದ ಮಾಹಿತಿಯಂತೆ ನೀವು ಆನ್ಲೈನ್ ಮೂಲಕ ಅರ್ಜಿಸಲ್ಲಿಸಬಹುದು.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತರು ಮತ್ತು ಕಚ್ಚಾ ಮನೆಗಳಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಉಚಿತ ಮನೆಗಳನ್ನು ನಿರ್ಮಿಸಲು ಸಹಾಯ ಮಾಡಲಾಗುವುದು. ಸರ್ವರಿಗೂ ಸೂರು ಒದಗಿಸುವ ಉದ್ದೇಶದಿಂದ  2024ರ ಹೊಸ ಸಮೀಕ್ಷೆ ಪ್ರಾರಂಭವಾಗಿದ್ದು, ಅರ್ಹರಾದವರು ಇದರಲ್ಲಿ ಭಾಗವಹಿಸಿ ಲಾಭ ಪಡೆಯಬಹುದು.

Free house construction subsidy: ಯಾರು ಯಾರು ಅರ್ಜಿ ಸಲ್ಲಿಸಬಹುದು?

ಕರ್ನಾಟಕದ ಹಳ್ಳಿಗಳಲ್ಲಿವ ನಿವಾಸಿಗಳು ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ವಸತಿರಹಿತರು ಸಹ ಅರ್ಜಿಸಲ್ಲಿಸಬಹುದು. ಕಚ್ಚಾ ಮನೆ (ಚಪ್ಪರ, ಗೋಡೆ/ಛಾವಣಿ ಹಾಳಾದವರು ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆದಾಯ ಮಿತಿಯಿದೆ. ಹೌದು, ಕುಟುಂಬದ ವಾರ್ಷಿಕ ಆದಾಯ ₹1.80 ಲಕ್ಷಕ್ಕಿಂತ ಕಡಿಮೆ ಇರಬೇಕು ಅಂತಹವರು ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಉದ್ಯೋಗಿಗಳು,  ತೆರಿಗೆ ಪಾವತಿಸುವವರ, ಈಗಾಗಲೇ ಸರ್ಕಾರಿ ವಸತಿ ಯೋಜನೆಯ ಲಾಭ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

Free house construction subsidy: ಅರ್ಜಿಸಲ್ಲಿಸಲು ಯಾವ ಯಾವ ದಾಖಲೆ ಬೇಕು?

ಆಧಾರ್ ಕಾರ್ಡ್ (ಕುಟುಂಬದ ಎಲ್ಲಾ ಸದಸ್ಯರದು), ಆದಾಯ ಪ್ರಮಾಣಪತ್ರ (ತಹಸೀಲ್ದಾರ/ಗ್ರಾಮಪಂಚಾಯತಿ ದೃಢೀಕರಣ), ಬ್ಯಾಂಕ್ ಖಾತೆ ವಿವರ (IFSC ಕೋಡ್‌ಸಹಿತ), ನರೇಗಾ ಜಾಬ್ ಕಾರ್ಡ್ (ಅಗತ್ಯವಿದ್ದರೆ), ಜಾತಿ ಪ್ರಮಾಣಪತ್ರ (SC/ST/OBC ಅರ್ಜಿದಾರರಿಗೆ) ಎಸ್.ಸಿ ಎಸ್.ಟಿ ಯವರು ಆರ್.ಡಿ. ಸಂಖ್ಯೆ ಹೊಂದಿರುವ ಪ್ರಮಾಣ ಪತ್ರ ಸಲ್ಲಿಸಬೇಕು.

ಸಮೀಕ್ಷೆ ಮತ್ತು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ಸ್ವಯಂ ನೋಂದಣಿ ಮಾಡಿಕೊಳ್ಳಬಹುದು. ಹೌದು,

ಸ್ವಯಂ ನೋಂದಣಿ ಮಾಡಿಕೊಳ್ಳಲು ಗೂಗಲ್ ಪ್ಲೇಸ್ಟೋರ್ ದಿಂದ  Awaas+2024   ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ Gruhalakshmi pending amount release soon ಈ ತಿಂಗಳಲ್ಲಿ ಫೆಬ್ರವರಿ ಮಾರ್ಚ್ ತಿಂಗಳ ಪೆಂಡಿಂಗ್ ಗೃಹಲಕ್ಷ್ಮೀ ಹಣ ಮಹಿಳೆಯರಿಗೆ ಜಮೆ 2025

. ಫಲಾನುಭವಿಗಳ ನೇತೃತ್ವದ ನಿರ್ಮಾಣ (BLC) ಅಡಿಯಲ್ಲಿ, ವಾರ್ಷಿಕ ಆದಾಯ ₹3 ಲಕ್ಷದವರೆಗೆ ಇರುವ BPL ಮತ್ತು EWS ಕುಟುಂಬಗಳಿಗೆ ₹2.5 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ 45 ಚದರ ಮೀಟರ್ ವರೆಗಿನ ಹೊಸ ಪಕ್ಕಾ ಮನೆಗಳನ್ನು ನಿರ್ಮಿಸಲು ಸರ್ಕಾರ ಸಹಾಯ ಮಾಡುತ್ತದೆ.

Free house construction subsidy: ಗ್ರಾಮ ಪಂಚಾಯತ್ ಮೂಲಕ ನೋಂದಣಿ

ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಓರ್ವಸರ್ವೆಕ್ಷಕರನ್ನು (surveyor) ನಿಯೋಜಿಸಲಾಗಿದೆ.

ಆ ಸರ್ವೆಕ್ಷಕರನ್ನು ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲು ಸಹಕರಿಸಲಿದ್ದಾರೆ. ವಸತಿ ರಹಿತರು ಹಾಗೂ ನಿವೇಶನ ರಹಿತರು ಸ್ವಯಂ ಸಮೀಕ್ಷೆ ನಡೆಸಲು ಅವಕಾಶವನ್ನುಕಲ್ಪಿಸಲಾಗಿದೆ.

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಅರ್ಹ ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳ ಸಮೀಕ್ಷೆಯನ್ನು ನಡೆಸಲು ದಿನಾಂಕ 31.03.2025 ರವರೆಗೆ ಕಾಲಾವಕಾಶ ನೀಡಿತ್ತು. ಆದರೆ, ಈಗ ಈ ಸಮೀಕ್ಷೆಯ ಅವಧಿಯನ್ನು ದಿನಾಂಕ 30.04.2025 ರವರೆಗೆ ವಿಸ್ತರಿಸಲಾಗಿದೆ.

ಈಗಾಗಲೇ ನಿಗಮವು ದಿನಾಂಕ 25.03.2025 ರಂದು ಹೊರಡಿಸಿದ ಪತ್ರದಲ್ಲಿ ಗ್ರಾಮ ಪಂಚಾಯತ್ / ಗ್ರಾಮ ಮಟ್ಟದಲ್ಲಿ ಜಾಗೃತಿ ಅಭಿಯಾನಗಳನ್ನು (IEC Activity) ಕೈಗೊಂಡು ಶೇಕಡಾ 100 ರಷ್ಟು ಅರ್ಹ ವಸತಿ ರಹಿತ ಕುಟುಂಬಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲು ತಿಳಿಸಿತ್ತು.

ಸಮೀಕ್ಷೆಯಲ್ಲಿ ಯಾವುದೇ ಅರ್ಹ ವಸತಿ ರಹಿತರು ಕೈಬಿಟ್ಟು ಹೋಗಬಾರದೆಂಬ ಕಾರಣದಿಂದ ಗಡುವನ್ನು ವಿಸ್ತರಿಸಲಾಗಿದೆ. ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜಾಗೃತಿ ಅಭಿಯಾನಗಳನ್ನು ನಡೆಸಿ ನಿಗದಿತ ಅವಧಿಯೊಳಗೆ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmayg.nic.in/netiayHome

 

Leave a Comment