Gruhalakshmi helpline number : ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ? ಜಮೆಯಾಗುತ್ತಿಲ್ಲವೇ? ಇಲ್ಲಿ ನೀಡಲಾದ ನಂಬರುಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ.
ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿಗಳ ಸಹಾಯಧನವನ್ನು ಸರ್ಕಾರದಿಂದ ನೇರವಾಗಿ ಡಿ.ಬಿ.ಟಿ. ಮೂಲಕ ಪಾವತಿಸಲಾಗುತ್ತಿದೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ 2025 ಜನವರಿ ಮಾಹೆಯವರೆಗೆ ಅವರ ಖಾತೆಗೆ ಮಾಸಿಕ ಧನಸಹಾಯವನ್ನು ಪಾವತಿಸಲಾಗಿದೆ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಆದರೆ ಕೆಲವು ಫಲಾನುಭವಿಗಳು ಸಹಾಯಧನ ಜಮಾ ಆಗಿರುವುದಿಲ್ಲ ಎಂದು ಮನವಿ ಸಲ್ಲಿಸುತ್ತಿದ್ದು, ಸದರಿ ತಿಂಗಳುಗಳ ಧನ ಸಹಾಯವು ಯಾವ ಫಲಾನುಭವಿಗಳ ಖಾತೆಗೆ ಪಾವತಿಸಲಾಗಿರುವುದಿಲ್ಲವೊ, ಅಂತಹ ಫಲಾನುಭವಿಗಳು ಸಂಬಂಧಪಟ್ಟ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಸಂಪರ್ಕಿಸಬೇಕು.
Gruhalakshmi helpline number ಈ ನಂಬರುಗಳಿಗೆ ಸಂಪರ್ಕಿಸಿ
ಸಂಪರ್ಕಿಸಬೇಕಾದ ತಾಲೂಕುವಾರು ದೂರವಾಣಿ ಸಂಖ್ಯೆಗಳ ವಿವರ ಇಂತಿದೆ. ಅಫಜಲಪೂರ ತಾಲೂಕು: ಮನೋಜ-9901560061, ಆಳಂದ ತಾಲೂಕು: ಚನ್ನಬಸಯ್ಯಾ-9480894476, ಚಿತ್ತಾಪೂರ ತಾಲೂಕು: ಚಂದ್ರಿಕಾ-88617271115, ಚಿಂಚೋಳಿ ತಾಲೂಕು: ಅವದೋತ-8861190417, ಕಲಬುರಗಿ(ನಗರ): ಪ್ರೀಯಾಂಕ-7975790070, ಕಲಬುರಗಿ (ಗ್ರಾಮೀಣ) ತಾಲೂಕು: ವರ್ಷಾ-9686168183, ಜೇವರ್ಗಿ ತಾಲೂಕು: ಪ್ರಕಾಶ-9880208047, ಸೇಡಂ ತಾಲೂಕು: ಗುರುದೇವಿ-9590863239. ಶಹಾಬಾದ ತಾಲೂಕು: ಸಚಿನ್-9686291861.
ಇದನ್ನೂ ಓದಿ : PM kisan ekyc do within a minute ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲು ಮೊಬೈಲ್ ನಲ್ಲಿ ಇಕೆವೈಸಿ ಹೀಗೆ ಮಾಡಿ 2025
ಫಲಾನುಭವಿಗಳು ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳು ಸೂಚಿಸಿದ ಅಗತ್ಯ ದಾಖಲಾತಿಗಳನ್ನು ಒದಗಿಸಿದ್ದಲ್ಲಿ, ಅಂತಹ ಫಲಾನುಭವಗಳಿಗೆ ಗೃಹಲಕ್ಷ್ಮಿ ಯೋಜನೆಯ ಧನ ಸಹಾಯವನ್ನು ಪಾವತಿಸಲು ಕ್ರಮವಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Gruhalakshmi helpline number ಮಹಿಳೆಯರಿಗೆ ಗುಡ್ ನ್ಯೂಸ್ ಈ ವಾರದಲ್ಲಿ ಗೃಹಲಕ್ಷ್ಮೀ 3 ಕಂತಿನ ಹಣ ಜಮೆ
ರಾಜ್ಯದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡ್ ನ್ಯೂಸ್ ನೀಡಿದ್ದಾರೆ. ಹೌದು, ಇದೇ ವಾರದಲ್ಲಿ ಮೂರು ಕಂತಿನ ಹಣ ಜಮೆಯಾಗಲಿದೆಎಂದು ಸಚಿವೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಾಗಾದರೆ ಯಾವ ಯಾವ ತಿಂಗಳ ಹಣ ಪೆಂಡಿಂಗ್ ಇದೆ. ಯಾವ ದಿನಾಂಕದಂದು ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇ ತಿಂಗಳಲ್ಲಿ ಪೆಂಡಿಂಗ್ ಇರುವ ಮೂರು ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿದಿದ್ದಾರೆ. ಬಾಕಿ ಇರುವಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಅನುಮೋದನೆ ಸಿಕ್ಕಿದೆ. ಹಾಗಾಗಿ ಮೇ ತಿಂಗಳಲ್ಲಿ ಮೊದಲ ಮೂರು ವಾರಗಳಲ್ಲಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
Gruhalakshmi helpline number ಗೃಹಲಕ್ಷ್ಮೀ ಯೋಜನೆಯ ಹಣ ನಿಮಗೆಷ್ಟು ಕಂತುಗಳು ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ
ಗೃಹಲಕ್ಷ್ಮೀ ಯೋಜನೆಯ ಹಣ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಫಲಾನುಭವಿಗಳು DBT Karnataka ಎಂದು ಟೈಪ್ ಮಾಡಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಬಹುದು. ಈ
https://play.google.com/store/apps/details?id=com.dbtkarnataka
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಡಿಬಿಟಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಡಿಬಿಟಿ ಕೆಳಗಡೆ ಅಲೋ ಮೇಲೆ ಕ್ಲಿಕ್ ಮಾಡಬೇಕು. ಮತ್ತೊಂದು ಸಲ ಅಲೋ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ ಅಲ್ಲಿ ಕೆಳಗಡೆ ಕಾಣಿಸುವ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.
Gruhalakshmi helpline number ಆಗ ನಿಮ್ಮ ಆಧಾರ್ ಕಾರ್ಡಿಗೆ ನೋಂದಣಿಯಾಗಿರುವ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ನೀವು ಪಿನ್ ಕ್ರಿಯೇಟ್ ಮಾಡಿಕೊಳ್ಳಬೇಕು. ಮೇಲ್ಗಡೆ ನಮೂದಿಸಿ ಪಿನ್ ನ್ನು ಮತ್ತೇ ಕೆಳಗಡೆ ಹಾಕಬೇಕು. ಈ ಪಿನ್ ಅನ್ನು ನೀವು ನೆನಪಿಟ್ಟುಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು..ಆಗ ನಿಮ್ಮ ಫೋಟೋ ಕಾಣಿಸುತ್ತದೆ.