A and B khata ಎ ಮತ್ತು ಬಿ ಖಾತಾ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ 2025

Written by Admin

Published on:

Spread the love

A and B khata : ಇತ್ತೀಚೆಗೆ ನೀವು ಎ ಖಾತಾ ಮತ್ತು ಬಿ ಖಾತಾ ಬಗ್ಗೆ ಕೇಳುತ್ತಿರಬಹುದು. ಏನಿದು ಎ ಖಾತಾ ಮತ್ತು ಬಿ ಖಾತಾ. ಇವರೆಡರ ನಡುವ ವ್ಯತ್ಯಾಸವೇನು. ಎ ಖಾತಾ ಹೊಂದಿದವರೆಗೆ ಯಾವ ಯಾವ ಪ್ರಯೋಜನಗಳಿವೆ ಮತ್ತು ಬಿ ಖಾತಾ ಹೊಂದಿದವರಿಗೆ ಯಾವ ಯಾವ ತೊಂದರೆಗಳು ಬರುತ್ತವೆ. ಬಿ ಖಾತಾವನ್ನು ಎ ಖಾತವನ್ನಾಗಿ ಹೇಗೆ ಪರಿವರ್ತಿಸಬೇಕು ಎಂಬುದರ ಮಾಹಿತಿಇಲ್ಲಿದೆ.

ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ, ಆ ಆಸ್ತಿ ಯಾವ ಖಾತಾದಡಿ ಉಲ್ಲೇಖಿಸಲ್ಪಟ್ಟಿದೆ ಎಂಬುದನ್ನು ತಿಳಿಯುವುದು ಅಗತ್ಯ. ಮುಖ್ಯವಾಗಿ ಆಸ್ತಿ ದಾಖಲೆಗಳನ್ನು ಎ ಖಾತಾ ಹಾಗೂ ಬಿ ಖಾತಾ ಎಂದು ವಿಂಗಡಿಸಿರುತ್ತಾರೆ.

A and B khata ಎ-ಖಾತಾ ಎಂದರೆ

ಅಧಿಕೃತ ಆಸ್ತಿ. ಸಕ್ಷಮ‌ ಪ್ರಾಧಿಕಾರದಿಂದ ಅನುಮತಿ ಪಡೆದು, ಭೂಪರಿವರ್ತನೆ ಮಾಡಿರುತ್ತಾರೆ. ಯೋಜನಾ ವಿನ್ಯಾಸ ನಕ್ಷೆಯ ಅನುಮೋದನೆ ಸಿಕ್ಕಿರುತ್ತದೆ. ಪಾಲಿಕೆಯಿಂದ ಕಟ್ಟಡ ಪರವಾನಗಿ ಪಡೆದಿರುವ ಆಸ್ತಿಗಳಾಗಿವೆ.

A and B khata information ಬಿ ಖಾತಾ ಎಂದರೆ

ಆಸ್ತಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳು, ಲೇಔಟ್‌ಗಳು, ಅಥವಾ ಕಂದಾಯ ನಿವೇಶನಗನ್ನು  ಬಿ ಖಾತಾ ಎನ್ನುವರು . ಹಾಗೆಂದ ಮಾತ್ರಕ್ಕೆ ಬಿ ಖಾತಾ ಹೊಂದಿರುವ ಆಸ್ತಿಗಳೆಲ್ಲ ಸಂಪೂರ್ಣ ಕಾನೂನುಬಾಹಿರ ಎಂದರ್ಥವಲ್ಲ. ನಿರ್ದಿಷ್ಟ ಆಸ್ತಿಯ ಅಥವಾ ಕಟ್ಟಡದ ಕನ್ವರ್ಷನ್ ಪ್ರಕ್ರಿಯೆಯಲ್ಲಿ, ನಿರ್ಮಾಣದಲ್ಲಿ ಅಥವಾ ಇತರ ಯಾವುದೇ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದರೆ ಬಿ ಖಾತಾ ನೀಡಲಾಗುತ್ತದೆ.

A and B khata information ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಸಾಧ್ಯವಿದೆಯೇ?

ಬಿ ಖಾತಾ ಹೊಂದಿದ ಮಾತ್ರಕ್ಕೆ ಆಸ್ತಿ ಮಾಲೀಕರು ಭಯಪಡಬೇಕಾಗಿಲ್ಲ. ನಿರ್ದಿಷ್ಟ ನಿಯಮಗಳ ಅನುಸಾರ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಅವಕಾಶವಿದೆ.. ಆದರೆ, ಇದು ಬಿ ಖಾತಾ ಆಸ್ತಿಯಲ್ಲಿ ಎಷ್ಟು ಪ್ರಮಾಣದಲ್ಲಿ ನಿಯಮಮಗಳ ಉಲ್ಲಂಘನೆಯಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿರ್ದಿಷ್ಟ ಪ್ರಮಾಣದ ನಿಯಮ ಉಲ್ಲಂಘನೆಗೆ ದಂಡ ಪಾವತಿಸಿ, ನಂತರ ನಿಯಮಗಳನ್ನು ಪಾಲಿಸುವ ಮೂಲಕ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಅವಕಾಶ ನೀಡಿದೆ.

A and B khata

ಬಿ-ಖಾತಾ ಆಸ್ತಿ ಹೊಂದಿರುವ ವ್ಯಕ್ತಿಗಳು ಸರ್ಕಾರದ ಪರವಾನಗಿ, ಬ್ಯಾಂಕ್ ಸಾಲಗಳಿಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ. ಮಾಲೀಕತ್ವವನ್ನು ಮರು ಮಾರಾಟ ಅಥವಾ ವರ್ಗಾವಣೆ ಮಾಡುವುದಕ್ಕೆ ಯಾವುದೇ ಅಧಿಕೃತ ಹಕ್ಕುಗಳು ಇರುವುದಿಲ್ಲ.

A and B khata information ಎ-ಖಾತಾ ಯಾಕೆ ಮಾಡಿಸಬೇಕು?: “ಇ-ಖಾತಾ ಇದ್ದರೆ ಮಾತ್ರ ಆಸ್ತಿಗೆ ಬ್ಯಾಂಕ್ ಲೋನ್ ಸಿಗುತ್ತದೆ. ಕಟ್ಟಡ ಪರವಾನಗಿ ಸಿಗಲು, ಆಸ್ತಿಯನ್ನು ಬೇರೆಯವರಿಗೆ ಸರಳವಾಗಿ ಮಾರಾಟ, ಖರೀದಿ ಮಾಡಬಹುದು ಮತ್ತು ಕಾಣಿಕೆ ನೀಡಬಹುದು. ಆಸ್ತಿಗೆ ಸೂಕ್ತ ಭದ್ರತೆ ಸಿಗುತ್ತದೆ. ನಕಲಿ ದಾಖಲೆ ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಬಡಾವಣೆಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿ ಮತ್ತಿತರ ಸೌಲಭ್ಯಗಳು ಸಿಗಲಿವೆ. ಈ ಎಲ್ಲಾ ಅನುಕೂಲತೆಗಳಿಂದ ಇ-ಖಾತಾ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

ಮಾರ್ಚ್  22 ರಿಂದ ನಾಲ್ಕೈದು ದಿನ ಗುಡುಗು ಸಹಿತ ಮಳೆ

ಮಾರ್ಚ್  22 ರಿಂದ ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಲವೆಡೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತ ಪರಿಚಲನೆಯು ದಕ್ಷಿಣ ತಮಿಳುನಾಡು ಮತ್ತು ಅಕ್ಕಪಕ್ಕದ ಪ್ರದೇಶದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿ ಮುಂದುವರೆಯುತ್ತಿದೆ. ಪರಿಣಾಮ ಕರ್ನಾಟಕದ ಒಳನಾಡಿನಲ್ಲಿ 0.9 ಕಿ.ಮೀ. ಎತ್ತರದವರೆಗೆ ಗಾಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಐದು ದಿನಗಳ ಕಾಲ ಹವಾಮಾನ ಇಲಾಖೆ ಮುನ್ಸೂಚನೆ ಹೀಗಿದೆ

21.03.2025: ಹವಾಮಾನ ಇಲಾಖೆ ಪ್ರಕಾರ, ರ‍್ನಾ ಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ, ಒಣ ಕಂಡು ಬರುವ ಸಾಧ್ಯತೆಯಿದೆ.

22.03.2025: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಗುಡುಗು ಸಹಿತ ಲಘು ಮಳೆಯಾಗುವ ಸಂಭವವಿದೆ. ಜೊತೆಗೆ, ಚಿಕ್ಕಮಗಳೂರು, ಮೈಸೂರು, ಕೊಡಗು, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲೂ ಅಲ್ಲಲ್ಲಿ ಅಲ್ಪ ಮಳೆಯಾಗಲಿದೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಹಲವೆಡೆ ಒಣ ಹವಾಮಾನವು ಮುಂದುವರೆಯಲಿದ್ದು, ವಿವಿಧೆಡೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

23.03.2025: ಮಾರ್ಚ  23 ರಂದು ದಕ್ಷಿಣ ರ‍್ನಾ ಟಕದ ವಿವಿಧೆಡೆ ಗುಡುಗು ಸಹಿತ ಲಘು ಮಳೆ ಸುರಿಯಲಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರರ‍್ಗ್, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕಲಬುರಗಿ, ಯಾದಗಿರಿ, ವಿಜಯಪುರ, ಕೊಪ್ಪಳ, ಗದಗ ಮತ್ತು ರಾಯಚೂರು ಜಿಲ್ಲೆಗಳ ಪ್ರತ್ಯೇಕ ಕಡೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ, ಉಳಿದ ಭಾಗಗಳಲ್ಲಿ ಒಣ ಹವಾಮಾನ ಇರಲಿದ್ದು, 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ.

ಮಾರ್ಚ್ 24 ಹಾಗೂ 25: ರ‍್ಚ್  24 ಹಾಗೂ 25ರಂದು ಎರಡೂ ದಿನಗಳ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬೆಳಗಾವಿ, ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆ ಬೀಳುವ ಸಾಧ್ಯತೆಯಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Comment