Aadhar not seeded : ಆಧಾರ್ ಕಾರ್ಡಿಗೆ ಎಫ್ಐಡಿ ಲಿಂಕ್ ಆಗದೆ ಇರುವ ರೈತರ ಪಟ್ಟಿ ಬಿಡುಗಡೆಯಾಗಿದೆ. ಹೌದು, ರೈತರು ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಆಧಾರ್ ಕಾರ್ಡಿಗೆ ಎಫ್ಐಡಿ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನವ್ನು ಚೆಕ್ ಮಾಡಬಹುದು.ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Aadhar not seeded ಆಧಾರ್ ಕಾರ್ಡಿಗೆ ಎಫ್ಐಡಿ ಲಿಂಕ್ ಆಗಿರುವವರ ಪಟ್ಟಿ ಹೀಗೆ ಚೆಕ್ ಮಾಡಿ
ಆಧಾರ್ ಕಾರ್ಡಿಗೆ ಎಫ್ಐಡಿ ಲಿಂಕ್ ಆಗಿರುವವರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಲು ಈ
https://fruitspmk.karnataka.gov.in/MISReport/AadharNotSeededReport.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಎಲ್ಲಾ ಜಿಲ್ಲೆಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯ ಹೆಸರು ಕಾಣಿಸುತ್ತದೆ ಇದಾದ ನಂತರ SC, ST ಹಾಗೂ Others ಹಾಗೂ ಒಟ್ಟು ಕಾಣಿಸುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮಗೆ ಆ ಜಿಲ್ಲೆಗೆ ಸೇರಿದ ಎಲ್ಲಾ ತಾಲೂಕುಗಳ ಹೆಸರು ಕಾಣಿಸುತ್ತದೆ.
ಅಲ್ಲಿ ನಿಮ್ಮ ತಾಲೂಕು ಮೇಲೆ ಕ್ಲಿಕ್ ಮಾಡಬೇಕು. ನಂತರ ಹೋಬಳಿ ಹೆಸರು ಕಾಣಿಸುತ್ತದೆ. ಅಲ್ಲಿ ನಿಮ್ಮ ಹೋಬಳಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಹೆಸರು ಕಾಣಿಸುತ್ತದೆ. ಅಲ್ಲಿ ನಿಮ್ಮ ಗ್ರಾಮಗಳ ಮುಂದೆ ಯಾವ ಸಮುದಾಯದವರು ಎಷ್ಟು ಜನರ ಆಧಾರ್ ಕಾರ್ಡಿಗೆ ಎಫ್ಐಡಿ ಲಿಂಕ್ ಆಗಿಲ್ಲ ಎಂಬುದು ಕಾಣಿಸುತ್ತದೆ.
Aadhar not seeded ಬರಗಾಲ ಪರಿಹಾರ ಜಮೆಗೆ ರೈತರ ಹೆಸರಿಗೆ ಎಫ್ಐಡಿ ಆಗಿರಬೇಕು?
ಬರಗಾಲ ಪರಿಹಾರ ಜಮೆಯಾಗಬೇಕಾದರೆ ರೈತರ ಹೆಸರಿಗೆ ಎಫ್ಐಡಿ ಆಗಿರಬೇಕು. ಹೌದು, ಯಾವ ರೈತರ ಹಸರಿಗೆ ಎಫ್ಐಡಿ ಆಗಿದೆಯೋ ಅಂತಹ ರೈತರ ಹೆಸರಿಗೆ ಮಾತ್ರ ಬರ ಪರಿಹಾರ ಹಣ ಜಮೆಯಾಗುತ್ತದೆ.
ಇದನ್ನೂ ಓದಿ : crop loan check ನಿಮ್ಮ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ 2024
ಹಾಗಾಗಿ ನಿಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಈ
Aadhar not seeded ರೈತರ ಎಫ್ಐಡಿ ಆಗಿದೆಯೋ ಇಲ್ಲವೋ ಚೆಕ್ ಮಾಡುವುದು ಹೇಗೆ?
ರೈತರ ಹೆಸರಿನಲ್ಲಿ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಯಾವ ದಾಖಲೆಯೂ ಬೇಕಾಗಿಲ್ಲ. ಕೇವಲ ತಮ್ಮ ಬಳಿಯಿರುವ ಆಧಾರ್ ಕಾರ್ಡ್ ಇದ್ದರೆ ಸಾಕು. ಹೌದು, ನಿಮ್ಮ ಆಧಾರ್ ಕಾರ್ಡ್ ದಿಂದ ಎಫ್ಐಡಿ ಚೆಕ್ ಮಾಡಬಹುದು.
ರೈತರ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಐಡಿ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹನ್ನೆರಡು ಅಂಕಿಗಳ ಆಧಾರ್ ಕಾರ್ಡ್ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಅಲ್ಲಿ ನಿಮ್ಮ ಎಫ್ಐಡಿ, ಪಿಎಂಕೆಐಡಿ ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ಹೆಸರು ಕಾಣಿಸುತ್ತದೆ. ಇದೇ ರೀತಿ ನೀವು ನಿಮ್ಮ ಕುಟುಂಬದ ಹೆರಿನಲ್ಲಿ ಜಮೀನು ಇದ್ದರೆ ಅವರ ಹೆಸರಿಗೂ ಎಫ್ಐಡಿ ಮಾಡಿಸಿರಬೇಕು. ಇಲ್ಲಿ ಚೆಕ್ ಸಹ ಮಾಡಬಹುದು.
Aadhar not seeded ಎಫ್ಐಡಿಯಿಂದ ಯಾವ ಯಾವ ಇಲಾಖೆಯಿಂದ ಸೌಲಭ್ಯ ಪಡೆಯಬಹುದು?
ಹೌದು, ಈಗ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೆ ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ. ಬೆಳೆ ವಿಮೆಯಾಗಲಿ, ಬೆಳೆ ಹಾನಿ ಪರಿಹಾರವಾಗಲಿ, ಬರಗಾಲ ಪರಿಹಾರವಾಗಲಿ ಇದರೊಂದಿಗೆ ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆಇಲಾಖೆ, ಹಾಗೂ ಕೃಷಿ ಇಲಾಖೆಯಿದ ವಿವಿಧ ಸೌಲಭ್ಯ ಪಡೆಯಲು ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ.