FRUITS ID ಯಲ್ಲಿ ಎಷ್ಚು ಸರ್ವೆ ನಂಬರ್ ಸೇರಿಸಲಾಗಿದೆ?- ಇಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

FRUITS ID ಯಲ್ಲಿ ರೈತರ ಎಷ್ಟು ಸರ್ವೆ ನಂಬರ್ ಗಳನ್ನು ಸೇರಿಸಲಾಗಿದೆ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಫ್ರೂಟ್ಸ್ ಐಡಿಯಲ್ಲಿ ಯಾವ ಯಾವ ಸರ್ವೆ ನಂಬರ್ ಗಳನ್ನು ಸೇರಿಸಲಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದಾರಾ? ಇಲ್ಲಿದೆ ನೋಡಿ ಮಾಹಿತಿ.

FRUITS ID
Farmer can check fruits is

ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಹೆಸರಿಗೆ ಇರುವ ಎಲ್ಲಾ ಸರ್ವೆ ನಂಬರ್ ಗಳನ್ನು ಸೇರಿಸಬೇಕೆಂದು ಕೃಷಿ ಇಲಾಖೆಯು ಅಭಿಯಾನವನ್ನೇ ಆರಂಭಿಸಿದೆ. ಈಗಲೂ ರೈತರು ಫ್ರೂಟ್ಸ್ ಐಡಿಯಲ್ಲಿ ಮೊಬೈಲ್ ನಲ್ಲೇ ಸೇರಿಸಬಹುದು.ಅಥವಾ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಫ್ರೂಟ್ಸ್ ಐಡಿಯಲ್ಲಿ ಸೇರಿಸಬಹುದು. ಏಕೆಂದರೆ ಇನ್ನು ಮುಂದೆ ಬರಗಾಲ ಪರಿಹಾರ, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಹಣ ರೈತರಿಗೆ ಜಮೆ

ಯಾಗಬೇಕಾದರೆ ರೈತರಿಗೆ ಎಫ್ಐಡಿ ಆಗಿರಬೇಕು. ಇದರೊಂದಿಗೆ ರೈತರು ಜಮೀನು ಹೊಂದಿರುವ ಎಲ್ಲಾ ಸರ್ವೆ ನಂಬರ್ ಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸೇರಿಸುವುದು ಕಡ್ಡಾಯಗೊಳಿಸಿದೆ.

 

FRUITS ID ಯಲ್ಲಿ ನಿಮ್ಮಹೆಸರಿದೆಯೇ? ಚೆಕ್ ಮಾಡುವುದು ಹೇಗೆ?

FRUITS ID Check
farmer FRUITS ID

ಮೊದಲು ರೈತರು ತಮ್ಮ ಹೆಸರಿಗೆ ಪ್ರೂಟ್ಸ್ ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ರೈತರು ತಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ಇದಾದ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ರೈತರ ಹೆಸರಿಗೆ ಫ್ರೂಟ್ಸ್ ಐಡಿ ಆಗಿದ್ದರೆ ಹೆಸರು, ಪಿಎಂಕೆಐಡಿ ಹಾಗೂ ಫ್ರೂಟ್ಸ್ ಐಡಿ ಅಂದರೆ ಎಫ್ಐಡಿ ಕಾಣಿಸುತ್ತದೆ.

FRUITS ID ಯಲ್ಲಿ ಯಾವ ಯಾವ ಸರ್ವೆ ನಂಬರ್ ಗಳು ಸೇರಿಸಲಾಗಿದೆ? ಚೆಕ್ ಮಾಡುವುದು ಹೇಗೆ?

ರೈತರು  ಫ್ರೂಟ್ಸ್ ಐಡಿಗೆ ಯಾವ ಯಾವ ಸರ್ವೆ ನಂಬರ್ ಗಳು ಆ್ಯಡ್ ಆಗಿವೆ ಎಂಬುದನ್ನು ಚೆಕ್ ಮಾಡಲು ಈ

https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಪಾಸ್ವರ್ಡ್ ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಚೆಕ್ ಮಾಡಬಹುದು.

ಪಾಸ್ವರ್ಡ್ ಮರೆತಿದ್ದರೆ ರೈತರೇನು ಮಾಡಬೇಕು?

ನಿಮಗೆ ಪಾಸ್ವರ್ಡ್ ನೆನಪಿಲ್ಲದಿದ್ದರೆ Reset Password ಮೇಲೆ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ರಿಸೆಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಕೆ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ Baragala parihara hana bidugade 2023-24 ನಿಮಗೆಷ್ಟು ಜಮೆ? ಚೆಕ್ ಮಾಡಿ

ಆಗ ನಿಮ್ಮ ಮೊಬೈಲಿಗೆ ಪಾಸ್ವರ್ಡ್ ಕಳಿಸಲಾಗುವುದು. ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಕಳಿಸಲಾಗಿರುವ ಪಾಸ್ವರ್ಡ್ ಹಾಕಿ ನೀವು ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬೇಕು.ನಂತರ ಅದೇ ಪಾಸ್ವರ್ಡ್ ಹಾಕಿ ಲಾಗಿನ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಹಾಕಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲ್ಲಿ ಕಾಣುವ ಆನ್ಲೈನ್ ರೆಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹೆಸರು ನಿಮ್ಮ ವಿಳಾಸ, ತಂದೆಯ ಹೆಸರು, ನಿಮ್ಮ ಮೊಬೈಲ್ ನಂಬ ರ್, ಎಫ್ಐಡಿ, ಆಧಾರ್ ಕಾರ್ಡ್, ಅದರ ಕೆಳಗಡೆ ನಿಮ್ಮ ಯಾವ ಯಾವ ಸರ್ವೆ ನಂಬರ್ ಗಳು  ಆ್ಯಡ್ ಆಗಿದ್ದಾವೆ ಎಂಬ ಪಟ್ಟಿ ಕಾಣಿಸುತ್ತದೆ.  ಅದರ ಕೆಳಗಡೆ ಯಾವ ಬ್ಯಾಂಕ್ ಲಿಂಕ್ ಆಗಿದೆ. ಎಂಬುದು ಸಹ ಕಾಣಿಸುತ್ತದೆ.

ಹಾಗಾಗಿ ರೈತರು ತಮ್ಮ ಇನ್ನು ಉಳಿದ ಸರ್ವೆ ನಂಬರ್ ಗಳು ಸೇರ್ಪಡೆಯಾಗದಿದ್ದರೆ ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸರ್ವೆ ನಂಬರ್ ಗಳನ್ನು ಸೇರಿಸಿಕೊಳ್ಳಲು ಕೋರಲಾಗಿದೆ.

Leave a Comment