Adhar card pahani link here ಆಧಾರ್ ಪಹಣಿ ಲಿಂಕ್ ಮೊಬೈಲ್ ನಲ್ಲೇ ಮಾಡಿ ಸಬ್ಸಿಡಿ ಪಡೆಯಿರಿ

Written by Admin

Published on:

Spread the love

Adhar card pahani link here : ರೈತಬಾಂಧವರೇ ಇನ್ನೂ ಮುಂದೆ ಸರ್ಕಾರದ ಸೌಲಭ್ಯ ಸಿಗಬೇಕಾದರೆ ಇಲ್ಲಿ  ಕೆಳಗೆ ನೀಡಲಾದ ಅಗತ್ಯ ಮಾಹಿತಿಗಳನ್ನು ಓದಲೇಬೇಕು. ಇದರೊಂದಿಗೆ ಇಲ್ಲಿ ನೀಡಲಾದ ಮಾಹಿತಿಗಳನ್ನು ಸರಿಪಡಿಸಿಕೊಳ್ಳಬೇಕು.

ಹೌದು, ಪಿಎಂ ಕಿಸಾನ್ ಯೋಜನೆಯ ಹಣ, ಬರಗಾಲ ಪರಿಹಾರ ಹಣ, ಬೆಳೆ ವಿಮೆ ಪರಿಹಾರ ಹಣ, ಬೆಳೆ ಹಾನಿ ಪರಿಹಾರ ಹಣ ಹಾಗೂ ವಿವಿಧ ಯೋಜನೆಗಳಲ್ಲಿ ನೀಡಲಾಗುವ ಸಬ್ಸಿಡಿಗಳನ್ನು ಪಡೆಯಲು ರೈತರು ಮೊದಲು ಆಧಾರ್ ಪಹಣಿ ಲಿಂಕ್ ಮಾಡಿಸಬೇಕು. ಹೌದು, ಸರ್ಕಾರದ ಸೌಲಭ್ಯ ಸಿಗಬೇಕಾದರೆ ಇನ್ನೂ ಮುಂದೆ ಆಧಾರ್ ಪಹಣಿ ಲಿಂಕ್, ಎಫ್ಐಡಿ ಮಾಡಿಸುವುದು, ಹಾಗೂ ಆಧಾರ್ ಸೀಡ್ ಮಾಡುವುದು ಕಡ್ಡಾಯವಾಗಿದೆ.  ಇಲ್ಲಿ ಒಂದೊಂದಾಗಿ ಮಾಹಿತಿ ನೀಡಲಾಗಿದೆ.

Adhar card pahani link here ಆಧಾರ್ ಪಹಣಿ ಲಿಂಕ್ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ Adhar card pahani link here ಲಿಂಕ್ ಮಾಡಲು ಈ

https://landrecords.karnataka.gov.in/service4

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ಆಧಾರ್ ಕಾರ್ಡ್ ಗೆ ಜೋಡಣೆ ಆಗಿರುವ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಬಳಿಯಿರುವ ಮೊಬೈಲ್ ನಂಬಿಗೆ ಓಟಿಪಿ ಬರುತ್ತದೆ.  ಆಗ ನೀವು ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ಅಲ್ಲಿ ಬರೆದು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಭೂಮಿ ನಾಗರಿಕ ಸೇವೆಗಳು  ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ನಮೂದಿಸಬೇಕು. ನಂತರ ನಾನು ಇಲ್ಲಿ ಸ್ವಯಂ ಪ್ರೇರಣೆಯಿಂದ ಆಧಾರ್ ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇದೆ  ಬಾಕ್ಸ್ ಆಯ್ಕೆ ಮಾಡಿ ಅಲ್ಲಿ ಕಾಣುವ Verify ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ಆಧಾರ್ ಅನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ. ಅಲ್ಲಿ ಒಕೆ ಮೇಲೆ ಕ್ಲಿಕ್ ಮಾಡಿದ ನಂತರ ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

Adhar card pahani link here

ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನನ್ನ ಆಧಾರ್ ಮಾಹಿತಿ ಹಾಗೂ ಇತರ ಮಾಹಿತಿಗಳನ್ನು ಯುಐಡಿಎಐನೊಂದಿಗೆ ಇಕೆವೈಸಿ ದೃಢೀಕರಣಕ್ಕೆ ಬಾಕ್ಸ್ ಆಯ್ಕೆಮಾಡಿಕೊಂಡು ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮ್ಮಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ Pm kisan list check ಪಿಎಂ ಕಿಸಾನ್ ಹಣ ಯಾರಿಗೆ ಜಮೆಯಾಗಲಿದೆ? ಹೆಸರು ಇಲ್ಲೇ ಚೆಕ್ ಮಾಡಿ 2024

ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಊರು, ತಾಲೂಕು ಹಾಗೂ ಜಿಲ್ಲೆ ಕಾಣಿಸುತ್ತದೆ.ಇದರೊಂದಿಗೆ ನಿಮ್ಮ ಊರು ವಿಳಾಸ ಹಾಗೂ  ಫೋಟೋ ಸಹ ಕಾಣಿಸುತ್ತದೆ.

ಅಲ್ಲಿ ಕಾಣುವ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಆಧಾರ್ ಕಾರ್ಡಿಗೆ ಯಾವ ಯಾವ ಪಹಣಿ ಲಿಂಕ್ ಆಗಿದೆ ಆ ಸರ್ವೆ ನಂಬರ್ ಗಳು ಕಾಣಿಸುತ್ತವೆ.ಒಂದು ವೇಳೆ ಪಹಣಿ ಲಿಂಕ್ ಆಗದಿದ್ದರೆ ಭೂಮಿ ಲಿಂಕ್ ಡಿಟೇಲ್ ನಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಸರ್ವೆ ನಂಬರ್ ನಮೂದಿಸಿ ಲಿಂಕ್ ಮಾಡಬೇಕು.

Adhar card pahani link here ಎಫ್ಐಡಿ ಇರುವುದು ಕಡ್ಡಾಯ

ರೈತರು ಹೆಸರಿಗೆ ಎಫ್ಐಡಿ ಇರುವುದು ಕಡ್ಡಾಯವಾಗಿದೆ. ಹೌದು, ಎಫ್ಐಡಿಯಲ್ಲಿ ರೈತರ ಎಲ್ಲಾ  ಸರ್ವೆ ನಂಬರ್ ಗಳ ಲಿಂಕ್ ಆಗಿರುತ್ತವೆ. ಸರ್ಕಾರದ ಸೌಲಭ್ಯಕ್ಕೆ ಎಫ್ಐಡಿ ಇರಲೇಬೇಕು.

Adhar card pahani link here ಆಧಾರ್ ಸೀಡ್ ಮಾಡಿಸುವುದು ಕಡ್ಡಾಯವಾಗಿದೆ

ಸರ್ಕಾರದ ಸೌಲಭ್ಯ ಪಡೆಯಬೇಕಾದರೆ ಆಧಾರ್ ಸೀಡ್ ಮಾಡುವುದು ಕಡ್ಡಾಯವಾಗಿದೆ.  ಹೌದು, ರೈತರು  ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇತರ ಸೌಲಭ್ಯ ಪಡೆಯಲು ಕೂಡಲೇ ತಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಸೀಡ್ ಅರ್ಜಿ ಪಡೆದು ಬಯೋಮೆಟ್ರಿಕ್ ಆಧಾರ್ ಸೀಡ್ ಮಾಡಿಸಿಕೊಳ್ಳಬೇಕು.

Leave a Comment