Adharcard Pahani link : ರೈತರು ತಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಮುಂದೆ ಸರ್ಕಾರದ ಸೌಲಭ್ಯಗಳು ಸಿಗಲಿವೆ. ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ನ್ನು ರೈತರು ಮೊಬೈಲ್ ನಲ್ಲೇ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ರೈತರು ತಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಸರ್ಕಾರದ ಯಾವುದೇ ಸೌಲಭ್ಯದ ಫಲಾನುಭವಿಯಾಗಲು ಆರ್.ಟಿ.ಸಿಗೆ ಆಧಾರ್ ಜೋಡಿಸಬೇಕು. ಈ ಕುರಿತು ಸರ್ಕಾರ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದ್ದು ಇದನ್ನು ರೈತರು ತಮ್ಮ ಮೊಬೈಲ್ ಮೂಲಕ ಅಥವಾ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿ ಭೇಟಿ ಮಾಡಿ ಸದರಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
Adharcard Pahani link ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ರೈತರಿಗೇನು ಪ್ರಯೋಜನ?
ಆರ್.ಟಿ.ಸಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಉದಾಸೀನ ಮಾಡಿದರೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಕ್ಕೆ ತೊಂದರೆ ಉಂಟಾಗಲಿದೆ. ಆಧಾರ್ ಜೋಡಣೆ ಮಾಡುವುದರಿಂದ ಜಮೀನಿನ ದಾಖಲೆ ಸುರಕ್ಷಿತವಾಗಿರುತ್ತದೆ. ಭೂ ದಾಖಲೆ ಪಡೆಯುವುದು ಸುಲಭ. ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಕೆ ಸರಳವಾಗುತ್ತದೆ. ಖಾತಾ ವಿವಾದ ತಪ್ಪಿಸಲು ಸಾಲ ಪ್ರಕ್ರಿಯೆ, ಜಮೀನು ಮಾರಾಟ ಸಮಯದಲ್ಲಿಹೆಚ್ಚಿನ ಪಾರದರ್ಶಕತೆ ಇರುತ್ತದೆ. ಆದ್ದರಿಂದ ತಮ್ಮ ಆರ್.ಟಿ.ಸಿಗೆ ಆಧಾರ್ ಜೋಡಣೆ ಮಾಡಬೇಕೆಂದು ರೈತರಲ್ಲಿ ಮನವಿ ಮಾಡಲಾಗಿದೆ.
Adharcard Pahani link ಮೊಬೈಲ್ ಮೂಲಕ ಆರ್.ಟಿ.ಸಿ ಅಧಾರ್ ಲಿಂಕ್ ಮಾಡುವುದು ಹೇಗೆ?
ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಹಾಗೂ ಪಹಣಿಗೆ ಲಿಂಕ್ ಮಾಡಲು ಈ
https://landrecords.karnataka.gov.in/service4
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ಆಧಾರ್ ಕಾರ್ಡ್ ಗೆ ಜೋಡಣೆ ಆಗಿರುವ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಬಳಿಯಿರುವ ಮೊಬೈಲ್ ನಂಬಿಗೆ ಓಟಿಪಿ ಬರುತ್ತದೆ. ಆಗ ನೀವು ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ಅಲ್ಲಿ ಬರೆದು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಭೂಮಿ ನಾಗರಿಕ ಸೇವೆಗಳು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ನಮೂದಿಸಬೇಕು. ನಂತರ ನಾನು ಇಲ್ಲಿ ಸ್ವಯಂ ಪ್ರೇರಣೆಯಿಂದ ಆಧಾರ್ ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇದೆ ಬಾಕ್ಸ್ ಆಯ್ಕೆ ಮಾಡಿ ಅಲ್ಲಿ ಕಾಣುವ Verify ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಆಧಾರ್ ಅನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ. ಅಲ್ಲಿ ಒಕೆ ಮೇಲೆ ಕ್ಲಿಕ್ ಮಾಡಿದ ನಂತರ ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ : Aadhar not seeded ಆಧಾರ್ ಎಫ್ಐಡಿ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ- ನಿಮ್ಮ ಹೆಸರು ಚೆಕ್ ಮಾಡಿ 2024
ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನನ್ನ ಆಧಾರ್ ಮಾಹಿತಿ ಹಾಗೂ ಇತರ ಮಾಹಿತಿಗಳನ್ನು ಯುಐಡಿಎಐನೊಂದಿಗೆ ಇಕೆವೈಸಿ ದೃಢೀಕರಣಕ್ಕೆ ಬಾಕ್ಸ್ ಆಯ್ಕೆಮಾಡಿಕೊಂಡು ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಊರು, ತಾಲೂಕು ಹಾಗೂ ಜಿಲ್ಲೆ ಕಾಣಿಸುತ್ತದೆ.ಇದರೊಂದಿಗೆ ನಿಮ್ಮ ಊರು ವಿಳಾಸ ಹಾಗೂ ಫೋಟೋ ಸಹ ಕಾಣಿಸುತ್ತದೆ.
ಅಲ್ಲಿ ಕಾಣುವ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಆಧಾರ್ ಕಾರ್ಡಿಗೆ ಯಾವ ಯಾವ ಪಹಣಿ ಲಿಂಕ್ ಆಗಿದೆ ಆ ಸರ್ವೆ ನಂಬರ್ ಗಳು ಕಾಣಿಸುತ್ತವೆ.ಒಂದು ವೇಳೆ ಪಹಣಿ ಲಿಂಕ್ ಆಗದಿದ್ದರೆ ಭೂಮಿ ಲಿಂಕ್ ಡಿಟೇಲ್ ನಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಸರ್ವೆ ನಂಬರ್ ನಮೂದಿಸಿ ಲಿಂಕ್ ಮಾಡಬೇಕು.