akarband ನಿಮ್ಮ ಜಮೀನಿನ ಆಕಾರಬಂದ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ 2024

Written by Admin

Published on:

Spread the love

land akarband : ರೈತರು ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಜಮೀನಿನ ಆಕಾರಬಂದ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಹೌದು, ರೈತರು ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ರೈತರು ಜಮೀನಿಗೆ ಸಂಬಂಧಿಸಿದ ಆರ್.ಟಿ.ಸಿ, (ಪಹಣಿ), ಮುಟೇಶನ್, ಖಾತಾ ಸೇರಿದಂತೆ ಇನ್ನಿತರ ದಾಖಲೆಯಂತೆ ಆಕಾರಬಂದ್ ಸಹ ಅತೀ ಮುಖ್ಯವಾದ ದಾಖಲೆಯಾಗಿರುತ್ತದೆ.  ಆಕಾರಬಂದ್ ಪ್ರಕಾರ ನಿಮಗೆ ಎಷ್ಟು ಎಕರೆ ಜಮೀನಿದೆ? ಇದರೊಂದಿಗೆ ನಿಮ್ಮ ಅಕ್ಕಪಕ್ಕದವರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿಯನ್ನು ಸಹ ಚೆಕ್ ಮಾಡಬಹುದು.

land akarband  ರೈತರು ಮೊಬೈಲ್ ನಲ್ಲಿ ಜಮೀನಿನ ಆಕಾರಬಂದ್ ಡೌನ್ಲೋಡ್ ಮಾಡುವುದು ಹೇಗೆ?

ರೈತರು ತಮ್ಮ ಜಮೀನಿನ ಆಕಾರಬಂದ್ ನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಕಂದಾಯ ಇಲಾಖೆಯ Bhoomi Online Land Records View ಪೇಜ್ ಓಪನ್ ಆಗುತ್ತದೆ. ಅದಕರ ಕೆಳಗಡೆ current Year, Old Year, MR, Mutation Station, Khata Extract, Survey Document ಹಾಗೂ  Akarband  ಕಾಣಿಸುತ್ತದೆ. ಅದಲ್ಲಿ ನೀವು ಆಕಾರಬಂದ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮಗೆ I am not Robot ಪಾಪ್ ಅಪ್ ಬಾಕ್ಸ್ ಕಂಡರೆ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.  ಅದರ ಕೆಳಗಡೆ ನೀವು ಯಾವ ಸರ್ವೆ ನಂಬರಿನ ಆಕಾರ್ ಬಂದ್ ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು. Surnoc ನಲ್ಲಿ ಸ್ಟಾರ್ ( * )  ಆಯ್ಕೆ ಮಾಡಿಕೊಳ್ಳಬೇಕು. ನಂತರ  Hissa ನಲ್ಲಿಯೂ ಸಹ  ಸ್ಟಾರ್ ( * ) ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು View Akarband ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅದೇ ನಿಮ್ಮ ಜಮೀನಿನ ಆಕಾರಬಂದ್ ಆಗಿರುತ್ತದೆ.

land akarband  ಆಕಾರಬಂದ್ ಪೇಜ್ ನಲ್ಲಿ ಯಾವ ಯಾವ ಮಾಹಿತಿ ಇರುತ್ತದೆ?

ಆಕಾರಬಂದ್ ಪೇಜ್ ನಲ್ಲಿ ನಿಮ್ಮ ಊರು, ತಾಲೂಕು ಕಾಣಿಸುತ್ತದೆ. ಅದರ ಕೆಳಗಡೆ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ನಲ್ಲಿ ಒಟ್ಟು ಎಷ್ಟು ಹೆಕ್ಟೆರ್  ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ.

land akarband

ಆಕಾರಬಂದ್ ನಲ್ಲಿ ಒಟ್ಟು 22 ಕಾಲಂಗಳಿವೆ. ಮೊದಲ ಕಾಲಂನಲ್ಲಿ ನಿಮ್ಮ ಸರ್ವೆ ನಂಬರ್ ಕಾಣಿಸುತ್ತದೆ. ನಂತರ ಹಿಸ್ಸಾನಂಬರ್,  ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ನಲ್ಲಿ ಒಟ್ಟು ಎಷ್ಟು ಎಕರೆ ಗುಂಟೆ ಜಮೀನಿದೆ. ಅದರ ಮುಂದುಗಡೆ ಖರಾಬು ಜಮೀನು ಎಷ್ಟಿದೆ? ಖುಷ್ಕಿ ಜಮೀನಿದೆ? ಎಂಬ ಮಾಹಿತಿ ಇರುತ್ತದೆ.ಇದರೊಂದಿಗೆ ತರಿ ಜಮೀನು ಎಷ್ಟಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿBele Darshak ಬೆಳೆ ಸಮೀಕ್ಷೆ ಸರಿಯಾಗಿ ಆಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ 2024

ಈ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ನಂತರ ನೀವು ಪ್ರಿಂಟ್ ಮಾಡಿ ಇಟ್ಟುಕೊಳ್ಳಬಹುದು. ಹೌದು ರೈತ್ರ ಮಿತ್ರರೆ ಜಮೀನಿಗೆ ಸಂಬಂಧಿಸಿದ ಇತರ ದಾಖಲೆಗಳಂತೆ ಆಕಾರಬಂದ್ ಸಹ ಪ್ರಮುಖ ದಾಖಲೆಯಾಗಿದೆ.

ಬಹುತೇಕ ರೈತರು ಜಮೀನಿನ ಪಹಣಿ (ಆರ್.ಟಿ.ಸಿ) ಬಗ್ಗೆ ಕೇಳಿರುತ್ತಾರೆ. ಆದರೆ ಆಕಾರಬಂದ್ ಬಗ್ಗೆ ಬಹಳಷ್ಟು ಜನರು ಕೇಳಿರುವುದಿಲ್ಲ.ಇಂತಹ ದಾಖಲೆಯನ್ನು ನೋಡಿರುವುದಿಲ್ಲ.ಅಂತಹ ರೈತರು ಈ ದಾಖಲೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್  ಇಟ್ಟುಕೊಳ್ಳಬಹುದು.

Leave a Comment