Bara parihara Beneficiary list ಬರ ಪರಿಹಾರ ಜಮೆಯಾಗುವ ರೈತರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

Written by Admin

Published on:

Spread the love

Bara parihara Beneficiary list : ರೈತಬಾಂಧವರು ಈಗ ಬರ ಪರಿಹಾರ ಪಡೆಯುವರ ಲಿಸ್ಟ್ ನಲ್ಲಿ ತಮ್ಮ ಹೆಸರು ಇರುವುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಸರ್ಕಾರದ ವತಿಯಿಂದ ಬರಗಾಲ ಲ ಪರಿಹಾರ ಹಣ ಬಿಡುಗಡೆಯಂತು ಆಗಿದೆ. ಆದರೆ ಇನ್ನೂ ಅನೇಕ ರೈತರ ಖಾತೆಗೆ ಮೊದಲ ಕಂತಿನ ಹಾಗೂ ನಂತರ ಬಿಡುಗಡೆಯಾದ ಕಂತಿನ ಹಣ ಜಮೆಯಾಗಿಲ್ಲ. ಬರ ಪರಿಹಾರ ಪಡೆಯುವವರ ಪಟ್ಟಿಯಲ್ಲಿ ರೈತರ ಹೆಸರಿದೆಯೇ? ಈ ಲಿಸ್ಟ್ ನಲ್ಲಿ ರೈತರ ಹೆಸರಿದ್ದರೂ ಸಹ ಅವರಿಗೆ ಬರ ಪರಿಹಾರ ಹಣ ಏಕೆ ಜಮೆಯಾಗಿಲ್ಲ? ಬರ ಪರಿಹಾರ ಹಣ ಜಮೆಯಾಗಬೇಕಾದರೆ ರೈತರೇನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Bara parihara Beneficiary list ನಿಮ್ಮೂರಿನಲ್ಲಿ ಯಾರುಯಾರಿಗೆ ಬರ ಪರಿಹಾರ ಜಮೆ- ಚೆಕ್ ಮಾಡುವುದು ಹೇಗೆ?

ಮುಂಗಾರು ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಆದ ಬೆಳೆ ಹಾನಿ ಪರಿಹಾರ ಜಮೆಯನ್ನು ಚೆಕ್ ಮಾಡಲು ಈ

https://parihara.karnataka.gov.in/service87/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಪರಿಹಾರ ಬೆನಿಫಿಶಿಯರಿ ಪೇಮೆಂಟ್ ರಿಪೋರ್ಟ್ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ವರ್ಷ 2022-23 ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಸೀಸನ್ ನಲ್ಲಿ Kharif ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು Flood/Drought ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನಲ್ಲಿ ಯಾವ ಯಾವ ರೈತರಿಗೆ ಎಷ್ಟು ಪರಿಹಾರ ಹಣ ಜಮೆಯಾಗಿದೆ Bara parihara Beneficiary list  ಹಾಗೂ ಜಮೆಯಾಗಿರುವ ಸ್ಟೇಟಸ್ ಕಾಣಿಸುತ್ತದೆ.

belehani parihara status

ಇಲ್ಲಿ ನಿಮ್ಮದಷ್ಟೇ ಅಲ್ಲ, ನಿಮ್ಮ ಊರಿನಲ್ಲಿ ಯಾವ ಯಾವ ರೈತರಿಗೆ ಎಷ್ಟೆಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

Bara parihara Beneficiary list ಯಾವ ಬೆಳೆಗೆ ಎಷ್ಟು ಪರಿಹಾರ ಹಣ ರೈತರಿಗೆ ಜಮೆಯಾಗಲಿದೆ?

ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್.ಡಿ.ಆರ್.ಎಫ್) ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ನೀಡಲಾಗುವುದು. ನೀರಾವರಿ ಬೆಳೆಗೆ 17000 ರೂಪಾಯಿ ಪರಿಹಾರ ನೀಡಲಾಗುವುದು. ಅದೇ ರೀತಿ ಬಹುವಾರ್ಷಿಕ ಬೆಳೆಗೆ 22500 ರೂಪಾಯಿ ಪರಿಹಾರ ನೀಡಲು ನಿಗದಿ ಮಾಡಲಾಗಿದೆ.

Bara parihara Beneficiary list ಬರ ಪರಿಹಾರ ಹಣ ಕೆಲವು ರೈತರಿಗೆ ಮಾತ್ರ ಏಕೆ ಜಮೆ

ಬರ ಪರಿಹಾರ ಹಣ ಹೆಸರು, ಉದ್ದು ಬೆಳೆ ಹಾನಿಯಾದ ರೈತರಿಗೆ ಜಮೆಯಾಗಿಲ್ಲ. ಇನ್ನುಳಿದ ರೈತರು ಯಾವ ಯಾವ ಬೆಳೆ ಬೆಳೆದಿದ್ದಾರೆ ಎಂಬುದರ ಕುರಿತು ಬೆಳೆ ಸಮೀಕ್ಷೆ ಮಾಡಿರಬೇಕು. ಬೆಳೆ ಸಮೀಕ್ಷೆಯಾಗಿದ್ದರೆ ಮಾತ್ರ ಅಂತಹ ರೈತರಿಗೆ ಬರ ಪರಿಹಾರ ಹಣ ಜಮೆಯಾಗಿದೆ. ಇದರೊಂದಿಗೆ ಯಾವ ರೈತರು ಫ್ರೂಟ್ಸ್ ಐಡಿ ಮಾಡಿಸಿದ್ದಾರೋ ಅಂತಹ ರೈತರಿಗೆ ಬರ ಪರಿಹಾರ ಹಣ ಜಮೆಯಾಗಿದೆ.

ಇದನ್ನೂ ಓದಿ  : crop loan check ನಿಮ್ಮ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ 2024

ಹೌದು, ಬರ ಪರಿಹಾರ, ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣ ಜಮೆಯಾಗಬೇಕಾದರೆ ಪ್ರತಿಯೊಬ್ಬ ರೈತರು ಫ್ರೂಟ್ಸ್ ಐಡಿ ಅಂದರೆ ಎಫ್ಐಡಿ ಮಾಡಿಸಿರಬೇಕು. ಅಂತಹ ರೈತರಿಗೆ ಮಾತ್ರ ಬರ ಪರಿಹಾರ ಹಣ ಜಮೆಯಾಗಿದೆ.

Bara parihara Beneficiary list ರೈತರ ಎಲ್ಲಾ ದಾಖಲೆಯಲ್ಲಿಹೆಸರು ಒಂದೇ ರೀತಿಯಾಗಿರಬೇಕು

ಬರ ಪರಿಹಾರ ಹಣ ಜಮೆಯಾಗಬೇಕಾದರೆ ಆಧಾರ್ ಕಾರ್ಡ್,  ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ಪಹಣಿ (ಆರ್.ಟಿಸಿ)ಯಲ್ಲಿ ರೈತರ ಹಾಗೂ ತಂದೆಯ ಹೆಸರು ಒಂದೇ ರೀತಿಯಾಗಿರಬೇಕು. ಹೆಸರು ತಾಳೆಯಾಗದೆ ಇದ್ದರೆ ಅಂತಹ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡುವುದನ್ನು ನಿಲ್ಲಿಸಲಾಗಿದೆ.

Baragala parihara payment

ಬರ ಪರಿಹಾರ ಹಣ ಜಮೆಯಾಗದಿದ್ದರೆ ರೈತರೇನು ಮಾಡಬೇಕು?

ಬರ ಪರಿಹಾರ ಹಣ ಜಮೆಯಾಗದೆ ಇದ್ದರೂ ಕೂಡಲೇ ರೈತರು ತಮ್ಮ ಗ್ರಾಮ ಪಂಚಾಯತ್ ಲೆಕ್ಕಾಧಿಕಾರಿ (ವಿಲೇಜ್ ಅಕೌಂಟೆಂಟ್) ಗೆ ಭೇಟಿ ಮಾಡಿ ಬರ ಪರಿಹಾರ ಜಮೆಯಾಗಿಲ್ಲವೆಂದು ದೂರು ನೀಡಬೇಕು. ಆಗ ಅವರು ನಿಮ್ಮ ಹೆಸರು ಚೆಕ್ ಮಾಡಿ ಬರ ಪರಿಹಾರಕ್ಕೆ ಶಿಫಾರಸ್ಸು ಮಾಡಬಹುದು.

Leave a Comment