Bara parihara compensation : ರೈತರಿಗೆ ಗುಡ್ ನ್ಯೂಸ್. ಬರಗಾಲ ಪರಿಹಾರಕ್ಕಾಗಿ ಕಾಯುತ್ತಿರುವ ರೈತರಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದೆ.
ಹೌದು, ಮೊದಲೆರಡು ಕಂತಿನಲ್ಲಿ ಬರಗಾಲ ಪರಿಹಾರ ಜಮೆಯಾಗದವರಿಗೆ ಈಗ ಮೂರಿನೇ ಕಂತಿನಲ್ಲಿ ಬರಗಾಲ ಪರಿಹಾರ ಹಣ ಜಮಯಾಗಿದೆ.
ರಾಜ್ಯದ ಇನ್ನೂ ಬಹಳ ರೈತರಿಗೆ ಬರಗಾಲ ಪರಿಹಾರ ಜಮೆಯಾಗಿರಲಿಲ್ಲ. ಕೆಲವು ರೈತರಿಗೆ ತಾಂತ್ರಿಕ ದೋಷದಿಂದ ಬರಗಾಲ ಪರಿಹಾರ ಹಣ ಜಮೆಯಾಗಿರಲಿಲ್ಲ. ಇನ್ನೂ ಕೆಲವು ರೈತರಿಗೆ ದಾಖಲೆಗಳ ದೋಷಗಳಿಂದಾಗಿ ಬರಗಾಲ ಪರಿಹಾರ ಹಣ ಜಮೆಯಾಗಿರಲಿಲ್ಲ. ಈಗ ಜಮೆಯಾಗದ ರೈತರ ಖಾತೆಗೆ ಬರ ಪರಿಹಾರ ಹಣ ಜಮೆಯಾಗುತ್ತಿದೆ. ಇನ್ನೂ ಕೆಲವು ರೈತರಿಗೆ ಕಡಿಮೆ ಹಣ ಜಮೆಯಾಗಿತ್ತು.
ಈಗ ಬಹುತೇಕ ಯಾರುಯಾರಿಗೆ ಬರಗಾಲ ಪರಿಹಾರ ಹಣ ಜಮೆಯಾಗಿದ್ದಿಲ್ಲವೋ ಅಂತಹ ರೈತರಿಗೆಲ್ಲಾ ಹಣ ಜಮೆಯಾಗಿದೆ. ನಿಮಗೆಷ್ಟುಹಣ ಜಮೆಯಾಗಿದೆ? ಯಾವ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ? ಯಾವ ಸರ್ವೆ ನಂಬರ್ ಹಾಗೂ ಯಾವ ಬೆಳೆಗೆ ಬರ ಪರಿಹಾರ ಜಮೆಯಾಗಿದೆ ಎಂಬುದನ್ನುಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Bara parihara compensation ನಿಮ್ಮ ಖಾತೆಗೆ ಎಷ್ಟು ಬರಗಾಲ ಪರಿಹಾರ ಹಣ ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ
ಯಾವ ಯಾವ ರೈತರಿಗೆ ಬರಗಾಲ ಪರಿಹಾರ ಹಣ ಅಂದರೆ ಮೊದಲು ಮತ್ತು ಎರಡನೇ ಕಂತಿನ ಹಣ ಜಮೆಯಾಗಿಲ್ಲವೋ ಅವರ ಖಾತೆಗೆ ಈಗ ಹಣ ಜಮೆಯಾಗುತ್ತಿದೆ. ಹೌದು, ಬರ ಪರಿಹಾರ ಹಣ ಯಾವ ಯಾವ ರೈತರಿಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/service92/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನಿಮಗೆ ಭೂಮಿ ಆನ್ಲೈನ್ ಪರಿಹಾರ ಇನ್ಪುಟ್ ಸಬ್ಸಿಡಿ ಪಾವತಿ ವಿವರಗಳು ಪೇಜ್ ಓಪನ್ ಆಗುತ್ತದೆ.
ಅಲ್ಲಿ ನೀವು Select Year / ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Select Season / ಋತು ಆಯ್ಕೆ ಮಾಡಿಯಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Select Calamity ವಿಪತ್ತು ಆಯ್ಕೆ ಮಾಡಿಯಲ್ಲಿ ಬರ ಆಯ್ಕೆ ಮಾಡಬೇಕು. ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ, ಮೊಬೈಲ್ ಸಂಖ್ಯೆಹಾಗೂ ಸರ್ವೆ ನಂಬರ್ ಈ ನಾಲ್ಕರಲ್ಲಿ ಯಾವುದಾದರೊಂದು ಒಂದನ್ನು ಆಯ್ಕೆಮಾಡಿಕೊಳ್ಳಬೇಕು.
Bara parihara compensation ಆಧಾರ್ ನಂಬರ್ ಹಾಕಿ ಬರ ಪರಿಹಾರ ಸ್ಟೇಟಸ್ ಹೀಗೆ ಚೆಕ್ ಮಾಡಿ
ಆಧಾರ್ ನಂಬರ್ ಹಾಕಿ ಬರಗಾಲ ಪರಿಹಾರ ಸ್ಸೇಟಸ್ ಚೆಕ್ ಮಾಡಲು ನೀವು ಆಧಾರ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಆಧಾರ್ ಕಾರ್ಡ್ ಕೊನೆಯ ಸಂಖ್ಯೆ,ನಿಮ್ಮ ಹೆಸರು ನಿಮ್ಮಎಫ್ಐಡಿ ಕಾಣಿಸುತ್ತದೆ. ಅಲ್ಲಿ ಕಾಣುವ ಸರ್ಕಲ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : Pm kisan beneficiary list released: ಪಿಎಂ ಕಿಸಾನ್ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ 2024
ತರ ನಿಮಗೆ ಮಾಲಿಕರ ಹೆಸರು ಕಾಣಿಸುತ್ತದೆ. ಆ ಮಾಲಿಕರಿಗೆ ಯಾವ ಬ್ಯಾಂಕಿನಲ್ಲಿ ಯಾವಾಗ ಬರ ಪರಿಹಾರ ಹಣ ಜಮೆಯಾಗಿದೆ ಎಂಬುದು ಕಾಣಿಸುತ್ತದೆ.
Bara parihara compensation ಯಾವ ಬೆಳೆಗೆ ಎಷ್ಟು ಬರ ಪರಿಹಾರ ಜಮೆ?
ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್ (ಗರಿಷ್ಠ ಎರಡು ಹೆಕ್ಟೇರ್ ಗೆ) ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ಮಳೆಯಾಶ್ರಿತ / ಖುಷ್ಕಿ ಬೆಳೆಗೆ 8500 ರೂಪಾಯಿ ನಿಗದಿಪಡಿಸಲಾಗಿದೆ. ನೀರಾವರಿ ಬೆಳೆಗೆ 17000 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೂ ಬಹುವಾರ್ಷಿಕ / ತೋಟಗಾರಿಕೆ ಬೆಳೆಗಳಿಗೆ 22500 ರೂಪಾಯಿವರೆಗೆ ಪರಿಹಾರ ನೀಡಲು ನಿಗದಿಪಡಿಸಲಾಗಿದೆ.